ನವದೆಹಲಿ: ಚಾಂಪಿಯನ್ಸ್ ಟ್ರೋಫಿ (Champions Trophy) ಆರಂಭವಾಗುವುದಕ್ಕೆ ದಿನಗಣನೆ ಆರಂಭವಾಗಿದ್ದು, ಫೆಬ್ರವರಿ 19ರಂದು ಆರಂಭವಾಗಲಿರುವ ಈ ಟೂರ್ನಿಯು ಸಾಕಷ್ಟು ಹೈಪ್ ಪಡೆದುಕೊಂಡಿದೆ. ಇನ್ನೂ ಟೀಮ್ ಇಂಡಿಯಾದ ವಿಚಾರಕ್ಕೆ ಬರುವುದಾದರೆ ಭದ್ರತೆಯ ಕಾರಣ ನೀಡಿ ಭಾರತ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದ್ದು (ಹೈಬ್ರಿಡ್ ಮಾದರಿ) ಈಗಾಗಲೇ ಆಟಗಾರರು ದುಬೈಗೆ ಪ್ರಯಾಣಿಸಿದ್ದಾರೆ. ಫೆಬ್ರವರಿ 20ರಂದು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಕ್ರೀಡಾಭಿಮಾನಿಗಳು ಫೆಬ್ರವರಿ 23ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದು ದಶಕಕ್ಕೂ ಅಧಿಕ ಕಾಲವಾಗಿದೆ. ಐಸಿಸಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಪ್ರತಿಬಾರಿ ಪಂದ್ಯ ನಡೆದಾಗಲೂ ಟಿಆರ್ಪಿ ಹಾಗೂ ವೀಕ್ಷಣೆ ವಿಚಾರವಾಗಿ ದಾಖಲೆ ಬರೆದಿದೆ. ಇದೀಗ ಪಾಕಿಸ್ತಾನದ ಆಟಗಾರರಿಗೆ ಅಲ್ಲಿನ ಅಭಿಮಾನಿಗಳು ಚಾಂಪಿಯನ್ಸ್ ಟ್ರೋಫಿ (Champions Trophy) ಆಂರಭಕ್ಕೂ ಮುನ್ನ ಸಲಹೆ ನೀಡಿದ್ದು, ಭಾರತದ ವಿರುದ್ಧದ ಪಂದ್ಯದಲ್ಲಿ ಈ ರೀತಿ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಪಾಕಿಸ್ತಾನದ ಮೂಲದ ಪತ್ರಕರ್ತ ಫರೀದ್ ಖಾನ್ ಎಂಬುವವರು ಪೋಸ್ಟ್ ಮಾಡಿರುವ ವಿಡಿಯೋ ನೋಡುವುದಾದರೆ ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರರ ಜೊತೆ ಸ್ನೇಹದಿಂದ ಇರದಿರಲು ಸಲಹೆ ನೀಡಿದ್ದು, ಪಂದ್ಯದ ವೇಳೆ ಅವರು ಹಗ್ ಮಾಡಲು ಬಂದರೆ ನೀವು ದೂರ ಹೋಗಿ ಎಂದು ಹೇಳಿದ್ದಾರೆ. ನಮ್ಮ ನೆಲದಲ್ಲಿ ಕ್ರಿಕೆಟ್ ಆಡುವ ವಿಚಾರಕ್ಕೆ ಭಾರತದವರು ನಡೆದುಕೊಂಡ ರೀತಿ ನಿಜಕ್ಕೂ ನಮಗೆ ಬೇಸರವನ್ನು ತರಿಸಿದೆ. ಹೀಗಾಗಿ ನಮ್ಮ ಆಟಗಾರರು ಸ್ನೇಹವನ್ನು ಬದಿಗಿಟ್ಟು ಕ್ರಿಕೆಟ್ ಆಡಬೇಕಿದೆ ಎಂದು ಫ್ಯಾನ್ಸ್ ಸಲಹೆ ನೀಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
Pakistan fans really angry with Indian cricket team 🇵🇰🇮🇳🤬
They want Pakistan players to not hug Indian players during Champions Trophy 😱
— Farid Khan (@_FaridKhan) February 15, 2025
ಚಾಂಪಿಯನ್ಸ್ ಟ್ರೋಫಿ ವಿಚಾರಕ್ಕೆ ಬರುವುದಾದರೆ ಭಾರತ ತಂಡವು ಪಾಕಿಸ್ತಾನದ ವಿರುದ್ಧ 3-2 ದಾಖಲೆಯನ್ನು ಹೊಂದಿದ್ದು, ಎಂದಿನಂತರ ತನ್ನ ಪ್ರಾಬಲ್ಯವನ್ನು ಹೊಂದಿದೆ. ಫೆಬ್ರವರಿ 20ರಂದು ಬಾಂಗ್ಲಾ ವಿರುದ್ಧದ ಪಂದ್ಯ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿರುವ ಭಾರತ ತಂಡವು, ಫೆಬ್ರವರಿ 23 ಪಾಕಿಸ್ತಾನ ಹಾಗೂ ಮಾರ್ಚ್ 02ರಂದು ನ್ಯೂಜಿಲೆಂಡ್ ವಿರುದ್ಧ ಪಂದ್ಯಗಳನ್ನು ಆಡಲಿದೆ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
ಮುನಿಸು ಮರೆತು ಒಂದಾದ Harbhajan, Dhoni! Viral Video ನೋಡಿ ನೆಟ್ಟಿಗರು ಹೇಳಿದ್ದಿಷ್ಟು
ಹಾಲಿ ಚಾಂಪಿಯನ್ಸ್ ಆರ್ಸಿಬಿಗೆ ದೊಡ್ಡ ಆಘಾತ; ಡಬ್ಲ್ಯುಪಿಎಲ್ನಿಂದ ಹೊರಬಿದ್ದ ಕನ್ನಡತಿ Shreyanka Patil!