ಸಿಂಧನೂರು: ನಗರ ಸೇರಿ ಗ್ರಾಮೀಣ ಪ್ರದೇಶಗಳ ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ತಡೆಯಬೇಕೆಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಸೋಮವಾರ ಬಿಇಒ ಕಚೇರಿ ವ್ಯವಸ್ಥಾಪಕ ಎಚ್.ಎ.ಗೋಪಾಲಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಡೊನೇಷನ್ ಹಾವಳಿ ತಪ್ಪಿಸುವಂತೆ ಆಗ್ರಹ
ಶೈಕ್ಷಣಿಕ ವರ್ಷ ಆರಂಭದಲ್ಲಿಯೇ ಖಾಸಗಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕೆ ಶುಲ್ಕದ ಜತೆಗೆ ಡೊನೇಷನ್ ಪಡೆಯಲಾಗುತ್ತಿದೆ. ಇದರಿಂದ ಬಡ ಮಕ್ಕಳು ಒಳ್ಳೆಯ ಶಾಲೆಯಲ್ಲಿ ಅಭ್ಯಾಸ ಮಾಡುವುದು ಕಷ್ಟವಾಗಿದೆ. ಎಲ್‌ಕೆಜಿಯಿಂದ ಪ್ರೌಢ ಶಾಲೆ ಹಂತದವರೆಗೂ ಲಕ್ಷಾಂತರ ರೂ. ಶುಲ್ಕ ಪಡೆಯಲಾಗುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಹೆಸರಿನಲ್ಲಿ ಡೊನೇಷನ್ ಹಾವಳಿ ಹೆಚ್ಚಿದೆ.
ಪ್ರತಿಷ್ಠಿತ ಶಾಲೆಗಳಲ್ಲಿ ಶುಲ್ಕವಾಗಿ ಲಕ್ಷ ರೂ. ಪಡೆಯಲಾಗುತ್ತಿದೆ. ಅಲ್ಲದೆ ತಾಲೂಕಿನಲ್ಲಿ ಪರವಾನಗಿ ಪಡೆಯದ ಶಾಲೆಗಳು, ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಇಲಾಖೆಯಿಂದ ಯಾವುದೇ ಕ್ರಮಕೈಗೊಂಡಿಲ್ಲ. ಡೊನೇಷನ್ ಹಾವಳಿಯೂ ನಿಂತಿಲ್ಲ. ಕೂಡಲೇ ಡೊನೇಷನ್ ಪಡೆಯುವ ಶಾಲೆ, ಅನಧಿಕೃತವಾಗಿರುವ ಶಾಲೆಗಳ ಪರವಾನಗಿ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಕರವೇ ತಾಲೂಕು ಅಧ್ಯಕ್ಷ ವೀರೇಶ ಭಾವಿಮನಿ, ಗೌರವಾಧ್ಯಕ್ಷ ದಿನಕರ ಶೆಟ್ಟಿ, ಉಪಾಧ್ಯಕ್ಷ ಎಂ.ಡಿ.ಫಾರೂಕ್‌ಸಾಬ್, ನಗರ ಘಟಕ ಅಧ್ಯಕ್ಷ ಶ್ರೀಧರ ಕೊಂಡಜ್ಜಿ, ಪ್ರಮುಖರಾದ ಅಮಾತ್ಯಪ್ಪ, ಅಶೋಕ ಗೊರೇಬಾಳ, ಹುಸೇನಬಾಷಾ, ನಿಂಗಪ್ಪ, ಪರಶುರಾಮ, ಸಾದಿಕ್, ಹನುಮಂತ, ನವಾಜ್, ನಿಂಗರಾಜ ಇತರರಿದ್ದರು.