ಡೊನೇಷನ್ ಹಾವಳಿ ತಪ್ಪಿಸುವಂತೆ ಆಗ್ರಹ

protest
ಡೋನೆಷನ್ ಹಾವಳಿ ತಪ್ಪಿಸುವಂತೆ ಆಗ್ರಹಿಸಿ ಪ್ರತಿಧ್ವನಿ ಸಮಾಜ ಸೇವಾ ಸಂಘದ ಎ.ಎನ್.ಶಿವಕುಮಾರ್, ಎಚ್.ಎಸ್.ರಮೇಶ್, ಕೆ.ಪ್ರಕಾಶ್, ಆಶಾ ಬಾಯಿ, ಮಹಾಲಿಂಗ ಇತರರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಬೆಲೆ ಏರಿಕೆ, ಕುಡಿಯುವ ನೀರಿನ ಸಮಸ್ಯೆ, ಡೊನೇಷನ್ ಹಾವಳಿ, ಸ್ಮಾರ್ಟ್ ಸಿಟಿ ಕೆಲಸ ಅಪೂರ್ಣಗೊಂಡಿರುವುದು ಹೀಗೆ ಸಾರ್ವಜನಿಕರ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿ ಬುಧವಾರ ಪ್ರತಿಧ್ವನಿ ಸಮಾಜ ಸೇವಾ ಸಂಘದ ಪ್ರಮುಖರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದಿನಬಳಕೆ ವಸ್ತುಗಳ ಬೆಲೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏರಿಸಿವೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿದೆ. ಸರ್ಕಾರಗಳು ದಿನನಿತ್ಯ ಬಳಸುವ ಆಹಾರ ವಸ್ತುಗಳ ಬೆಲೆ ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಲಾ ಕಾಲೇಜುಗಳಲ್ಲಿ ಡೋನೇಷನ್ ಹಾವಳಿ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಶಾಲಾ ಕಾಲೇಜುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಎ.ಎನ್.ಶಿವಕುಮಾರ್, ಕೆ.ಎನ್.ಅನಂತ, ಸಿ.ಮೂರ್ತಿ, ಎಚ್.ಎಸ್.ರಮೇಶ್, ವಿಶಾಲಾಕ್ಷಿ, ಕೆ.ಪ್ರಕಾಶ್, ಮಹಾಲಿಂಗ, ಆಶಾ ಬಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net