

ಪುತ್ತೂರು ಗ್ರಾಮಾಂತರ: ಸಂಪ್ಯ ಪೊಲೀಸ್ ಠಾಣೆಗೆ ಬೆಂಗಳೂರಿನ ರಾಯಲ್ ಗ್ರೂಪ್ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಯಾಗಿ ನೀಡಿದ್ದು, ಹಸ್ತಾಂತರ ಕಾರ್ಯಕ್ರಮ ಸಂಪ್ಯಠಾಣೆಯಲ್ಲಿ ಇತ್ತೀಚೆಗೆ ನಡೆಯಿತು.
ಎಸ್ಐ ಜಂಬೂರಾಜ್ ಮಹಾಜನ್ ಯಂತ್ರ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು. ಬೆಂಗಳೂರು ರಾಯಲ್ ಗ್ರೂಪ್ನ ರಫೀಕ್ ಹಾಜಿ ಹಸ್ತಾಂತರಿಸಿದರು.
ಗ್ರೂಪ್ನ ಹಂರರ್ ಹಾಜಿ, ಇರ್ಷಾದ್ ಹಾಜಿ, ಅಶ್ರಫ್ ಹಾಜಿ, ಅಶ್ರು, ಅಬೂಬಕ್ಕರ್ ಬಾಳಯ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಡಿ.ಕೆ.ಹಂಝ ಹಾಜಿ, ಡಿ.ಕೆ ಶಮೀರ್, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಕುಂಬ್ರ ವರ್ತಕರ ಸಂದ ಅಧ್ಯಕ್ಷ ರಫೀಕ್ ಅಲ್ರಾಯ, ಉದ್ಯಮಿ ಅಶೋಕ್ ಪೂಜಾರಿ ಬೊಳ್ಳಾಡಿ, ಖಲೀಲ್ ಚೆನ್ನಾರ್, ರಮೇಶ್ ಆಳ್ವ ಕಲ್ಲಡ್ಕ, ಅಝೀಜ್ ನೀರ್ಪಾಡಿ, ಶರೀಪ್ ಉಜಿರೋಡಿ, ಹಕೀಂ ಉಜಿರೋಡಿ, ಸಾದಿಕ್ ಬಾಳಯ, ಜಮಾಲ್ ಅಡ್ಕ, ಅಶ್ರಫ್ ನೀರ್ಪಾಡಿ ಮತ್ತಿತರರು ಇದ್ದರು. ಸಂಪ್ಯ ಠಾಣೆಯ ಪ್ರವಿಣ್ ರೈ ಸ್ವಾಗತಿಸಿ, ವಂದಿಸಿದರು.