ಬಳ್ಪ ಅಂಗನವಾಡಿ ಕೇಂದ್ರಕ್ಕೆ ಕೊಡುಗೆ ಹಸ್ತಾಂತರ

New Project (16)
Published on

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಬಳ್ಪ ಅಂಗನವಾಡಿ ಕೇಂದ್ರಕ್ಕೆ ಬಟ್ಟಲು ಇಡುವ ಸ್ಟೀಲ್ ಸ್ಟ್ಯಾಂಡ್ ಮತ್ತು ಗ್ಯಾಸ್ ಸ್ಟೌ ಭಾನುವಾರ ಹಸ್ತಾಂತರಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್. ಅವರು ಅಂಗನವಾಡಿ ಶಿಕ್ಷಕರಿಗೆ ಕೊಡುಗೆ ಹಸ್ತಾಂತರಿಸಿದರು. ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಪ್ರೊ.ಬಾಲಕೃಷ್ಣ ಪೈ ಮುಖ್ಯ ಅತಿಥಿಯಾಗಿದ್ದರು. ಬಟ್ಟಲು ಸ್ಟಾೃಂಡ್ ಕೊಡುಗೆ ನೀಡಿದ ಉಮೇಶ್ ಕೆ.ಎನ್., ಚಿದಾನಂದ ಕುಳ, ದಯಾನಂದ ಕನ್ನಡ್ಕ, ಲೋಕೇಶ್ ಎಣ್ಣೆಮಜಲು, ಸುದರ್ಶನ ಶೆಟ್ಟಿ, ಗೋಪಾಲ್ ಎಣ್ಣೆಮಜಲು, ಬಾಲಕೃಷ್ಣ ಪೈ, ಮೋಹನ ದಾಸ್ ಎಣ್ಣೆ ಮಜಲು, ಗ್ಯಾಸ್ ಸ್ಟವ್ ಕೊಡುಗೆ ನೀಡಿದ ಸಮೀರ್ ಬಳ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net