ಕಂಬಾರು ದೇವಸ್ಥಾನಕ್ಕೆ ಧರ್ಮಸ್ಥಳದಿಂದ ದೇಣಿಗೆ

New Project (27)
Published on

ಕುಂಬಳೆ: ಜೀರ್ಣೋದ್ಧಾರಗೊಳ್ಳುತ್ತಿರುವ ಪೆರ್ಮುದೆ ಸಮೀಪದ ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮನವಿ ಪುರಸ್ಕರಿಸಿ ಕ್ಷೇತ್ರ ಧರ್ಮಸ್ಥಳದ ಧರ್ವಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಭಾನುವಾರ 5 ಲಕ್ಷ ರೂ. ಸಹಾಯಧನ ನೀಡಿದರು.

ಶ್ರೀ ಮಂಜುನಾಥನ ಅನುಗ್ರಹದಿಂದ ಕೈಗೊಂಡ ಎಲ್ಲ ಕೆಲಸಗಳೂ ನಿರ್ವ್ನಿವಾಗಿ ನಡೆಯಲಿ. ಜನವರಿ 28ರಿಂದ ಆರಂಭವಾಗುವ ಬ್ರಹ್ಮಕಲಶೋತ್ಸವ ನಿರಾತಂಕವಾಗಿ ನಡೆದು ಕುಡಾಲು ಬಾಡೂರು ಗ್ರಾಮಗಳ ಹಾಗೂ ಸಮಸ್ತ ಭಕ್ತಜನತೆಗೆ ಶ್ರೇಯಸ್ಸಾಗಲಿ ಎಂದು ಶುಭ ಹಾರೈಸಿದರು.

ಮೊಕ್ತೇಸರ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್, ಕುಡಾಲುಗುತ್ತು ದಿವಾಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರಾದ ಕೇಶವಪ್ರಸಾದ ಎಡಕ್ಕಾನ, ರಾಜಾರಾಮ ಶೆಟ್ಟಿ ಕುಡಾಲು, ಸುದೇಶ್ ಕುಡಾಲು, ಖಾವಂದರ ಕಚೇರಿ ಸಹಾಯಕ ಮಹಾವೀರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net