ಪಾಕಿಸ್ತಾನ: ಅಮೆರಿಕಾದ 47ನೇ ಅಧ್ಯಕ್ಷರಾಗುತ್ತಿರುವ ಡೊನಾಲ್ಡ್ ಟ್ರಂಪ್( Donald Trump) ಪಾಕಿಸ್ತಾನದ ಬೀದಿಗಳಲ್ಲಿ ಗಾಯನ ಮಾಡುತ್ತಾ, ಖಿರ್(ಪಾಕಿಸ್ತಾನಿ ಫುಡ್) ಮಾರುತ್ತಿರುವ ವಿಡಿಯೋಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಜ. 17-19 ತರುಣ ವೃಂದ – ಮಹಿಳಾ ಮಂಡಲ ದಂಬೇಲ್ ಸುವರ್ಣ ಸಂಭ್ರಮ
ಪಾಕಿಸ್ತಾನ ಸಲೀಂ ಬಗ್ಗಾ ಎಂಬ ವ್ಯಕ್ತಿಯ ಡೊನಾಲ್ಡ್ ಟ್ರಂಪ್ ಅವರನ್ನೇ ಹೊಲುತ್ತಿದ್ದು, ಇವರು ಗಾಯನ ಮಾಡಿ ಖಿರ್ ಮಾರಾಟ ಮಾಡುತ್ತಿದ್ದಾರೆ. ಇವರನ್ನು ನೋಡಿದ ಅಲ್ಲಿನ ಜನರು ಮತ್ತು ವಿದೇಶಿಯರು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಅಲ್ಲದೆ, ಇವರೆ ನಮ್ಮದೇಶ ಟ್ರಂಪ್ ಎಂದು ಜನರು ಹಾಸ್ಯ ಚಟಾಕಿ ಹಾರಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ, ಖಿರ್ ಮಾರಾಟ ಮಾಡಲು ಟ್ರಂಪ್ ಅಮೆರಿಕಾ ಬಿಟ್ಟು ಇಲ್ಲಿಗೆ ಬಂದಿದ್ದಾರೆ ಎಂದು ವಿದೇಶಿ ಪ್ರಜೆಯೊಬ್ಬರು ಹಾಸ್ಯಭರಿತ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಗದಗ ಪರಿಸರದಲ್ಲಿ ವಿನೂತನ ಪ್ರಯೋಗ 24*7 ಸ್ಟಡಿ ಹಾಲ್ ಉದ್ಘಾಟನೆ.
ವಿಡಿಯೋದಲ್ಲಿ ಏನಿದೆ?
ಪಾಕಿಸ್ತಾನದ ಬೀದಿಯೊಂದರಲ್ಲಿ ಸಲೀಂ ಬಗ್ಗಾ ಪಂಜಾಬಿ ಹಾಡುಗಳನ್ನು ಗಾಯನ ಮಾಡುತ್ತಿದ್ದಾರೆ. ಮಕ್ಕಳು, ಹಿರಿಯರು, ಮಹಿಳೆಯರು ಸೇರಿದಂತೆ ಖಿರ್ ತಿನ್ನಲು ಮತ್ತು ಸಲೀಂ ಅವರ ಜತೆ ಸೆಲ್ಫಿಗೆ ಮುಗಿ ಬೀಳುತ್ತಿದ್ದಾರೆ. ತಲೆ ತುಂಬಾ ಬಿಳಿ ಕೂದಲು ಇರುವ ಸಲೀಂ ಕಪ್ಪಿ ಜಾಕೆಟ್ ಧರಿಸಿದ್ದಾರೆ. ಅವರ ಗಾಯನ ಕೇಳಲು ಹಿರಿಯರು ಧಾವಿಸುತ್ತಿರುವ ಕ್ಲಿಪ್ಗಳು ವಿಡಿಯೋದಲ್ಲಿದೆ.(ಏಜೆನ್ಸೀಸ್)