ಮೆಕ್‌ಡೊನಾಲ್ಡ್​​ನಲ್ಲಿ ಡೊನಾಲ್ಡ್​ ಟ್ರಂಪ್​​​​​; ಕೆಲಸ ಮಾಡುತ್ತಿರುವ ವಿಡಿಯೋ ವೈರಲ್​ | Donald Trump

Donald Trump
Published on

ವಾಷಿಂಗ್ಟನ್: ಅಮೆರಿಕದಲ್ಲಿ ಮುಂದಿನ ತಿಂಗಳು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಎಲೆಕ್ಷನ್​​ನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್(Donald Trump) ಸ್ಫರ್ಧಿಸುತ್ತಿರುವ ವಿಚಾರ ಗೊತ್ತೆ ಇದೆ. ಬಿರುಸಿನ ಪ್ರಚಾರದ ನಡುವೆ ವಿರಾಮ ತೆಗೆದುಕೊಂಡಿರುವ ಡೊನಾಲ್ಡ್​ ಟ್ರಂಪ್​​​​​ ಪೆನ್ಸಿಲ್ವೇನಿಯಾದ ಮೆಕ್‌ಡೊನಾಲ್ಡ್​​ಗೆ ಹೋಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೆಕ್​ಡೊನಾಲ್ಡ್​ಗೆ ಸ್ವಾದಿಷ್ಟ ತಿಂಡಿ ಸವಿಯಲು ಹೋಗಿದ್ದಾರೆ ಎಂದು ಊಹಿಸುತ್ತಿದ್ದೀರಾ. ಅಲ್ಲ ಅವರು ಮೆಕ್​ಡೊನಾಲ್ಡ್​ನಲ್ಲಿ ಕೆಲಸ ಮಾಡಲು ಹೋಗಿದ್ದಾರೆ. ವಿಡಿಯೋದಲ್ಲಿ ಮೆಕ್‌ಡೊನಾಲ್ಡ್‌ನ ಕೌಂಟರ್‌ನಲ್ಲಿ ಡೊನಾಲ್ಡ್​ ಟ್ರಂಪ್​​​ ನಿಂತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಮೆಕ್‌ಡೊನಾಲ್ಡ್ ಅಂಗಡಿಯಲ್ಲಿ ತಮ್ಮ ಸಹಿ ಸೂಟ್ ಮೇಲೆ ಏಪ್ರನ್ ಧರಿಸಿರುವುದನ್ನು ಕಾಣಬಹುದು. ತಾವು ಆರ್ಡರ್​ ಮಾಡಿದ ಪ್ಯಾಕೆಟ್​​ ಪಡೆಯಲು ಟೇಕ್​ಔಟ್​ ವಿಂಡೋ ಬಳಿ ಬಂದವರು ಟ್ರಂಪ್​ ಅವರನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಪಾರ್ಸೆಲ್​​​ ಪಡೆಯಲು ವಿಂಡೋ ಬಳಿ ಬಂದವರು ಭಾರತೀಯರು ಎಂದು ಹೇಳಲಾಗಿದೆ. ಟ್ರಂಪ್​ ಅವರನ್ನು ನೋಡಿದ ಕಾರಿನಲ್ಲಿದ್ದ ವ್ಯಕ್ತಿ ಭಾರತೀಯ ಸಂಪ್ರದಾಯದಂತೆ ಕಾರಿನಲ್ಲಿದ್ದ ವ್ಯಕ್ತಿ ಕೈಮುಗಿದು ಟ್ರಂಪ್​ ಅವರನ್ನು ಮಾತನಾಡಿಸುತ್ತಾರೆ. ಅಮೆರಿಕದ ಮಾಜಿ ಅಧ್ಯಕ್ಷ ಶೇಕ್​ಹ್ಯಾಂಡ್​​ ನೀಡಿ ಅವರ ಆರ್ಡರ್​ ಅನ್ನು ಕೊಡುತ್ತಾರೆ. ಕೃತಜ್ಞತೆಯನ್ನು ವ್ಯಕ್ತಪಡಿಸಿದ ವ್ಯಕ್ತಿ ಚುನಾವಣೆಯಲ್ಲಿ ಟ್ರಂಪ್ ಗೆಲ್ಲುವುದನ್ನು ನೋಡಲು ಬಯಸುತ್ತೇನೆ ಎಂದು ಹೇಳುತ್ತಾರೆ. ಈ ವೇಳೆ ಕಾರಿನಲ್ಲಿ ಕುಳಿತಿದ್ದ ಮಹಿಳೆ ಟ್ರಂಪ್‌ಗೆ ಶೇಕ್​ಹ್ಯಾಂಡ್​ ಮಾಡಿ ಧನ್ಯವಾದ ಹೇಳುತ್ತಾರೆ.


ಒಬ್ಬ ಭಾರತೀಯನು ಮಾಡಬಹುದಾದ ಕೆಲಸ ಇದು, ಅವನು ಹೇಳಿದ್ದನ್ನು ಅವನು ಅರ್ಥಮಾಡಿಕೊಂಡಿದ್ದಾನೆಯೇ?, ಅವನ ಉತ್ಸಾಹವನ್ನು ನೋಡಿ ಆದರೆ ನಿರೀಕ್ಷಿಸಿ ನಿಸ್ಸಂಶಯವಾಗಿ ಟ್ರಂಪ್ ಎಲ್ಲಾ ವಲಸಿಗರನ್ನು ವಾಪಸ್ ಕಳುಹಿಸುತ್ತಾರೆ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.
ಫೇಮಸ್​​ ಚಾಟ್​​​ ಆಲೂ ಫ್ರೈಗಳನ್ನು ಹೇಗೆ ಮಾಡಬೇಕೆಂದು ಡೊನಾಲ್ಡ್​ ಟ್ರಂಪ್​ ಕಲಿಯುತ್ತಿರುವ ವಿಡಿಯೋ ವೈರಲ್​ ಆಗಿದೆ.


ಮೆಕ್‌ಡೊನಾಲ್ಡ್‌ನಲ್ಲಿ ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಗುರಿಯಾಗಿಸಿಕೊಂಡು ಡೊನಾಲ್ಡ್​​​ ಟ್ರಂಪ್​​, ಈಗ ನಾನು ಕಮಲಾ (ಹ್ಯಾರಿಸ್)ಗಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಕಮಲಾ ಹ್ಯಾರಿಸ್ ಟ್ರಂಪ್ ಅವರ ವಯಸ್ಸಿನ ಬಗ್ಗೆ ಟಾರ್ಗೆಟ್ ಮಾಡಿ ಮಾತನಾಡಿದ್ದರು. ಟ್ರಂಪ್ ಹೇಳಿಕೆ ಅದಕ್ಕೆ ತಿರುಗೇಟು ಎಂದು ಪರಿಗಣಿಸಲಾಗುತ್ತಿದೆ.


ಹ್ಯಾರಿಸ್ ಏಕೆ ಸುಳ್ಳು ಹೇಳುತ್ತಾರೆ ಎಂದು ಟ್ರಂಪ್ ಅವರನ್ನು ಕೇಳಿದಾಗ 'ಏಕೆಂದರೆ ಅವಳು ಸುಳ್ಳುಗಾರ್ತಿ ಎಂದು ಉತ್ತರಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net