ಪ್ರಧಾನಿ ಮೋದಿಯನ್ನು ಹೊಗಳಿದ ಡೊನಾಲ್ಡ್​ ಟ್ರಂಪ್: ಅವರೊಬ್ಬ ಒಳ್ಳೆಯ ಮತ್ತು ಕಠಿಣ ವ್ಯಕ್ತಿ; ಶೀಘ್ರದಲ್ಲೇ ವ್ಯಾಪಾರ ಒಪ್ಪಂದ| Donald Trump

ವಿಜಯವಾಣಿ - 2025-10-29T132419.087
Published on

Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಅ. 29) ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದು, ಅವರೊಬ್ಬ ಸುಂದರ ಮತ್ತು ಕಠಿಣವಾದ ವ್ಯಕ್ತಿ ಎಂದು ಬಣ್ಣಿಸಿದ್ದು, ಶೀಘ್ರದಲ್ಲೇ ಭಾರತ-ಯುಎಸ್ ನಡುವೆ ವ್ಯಾಪಾರ ಒಪ್ಪಂದ ನಡೆಯಲಿದೆ ಎಂದು ಹೇಳಿದ್ದಾರೆ.

ದಕ್ಷಿಣ ಕೊರಿಯಾದ ಜಿಯೊಂಗ್ಜುನಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಸಿಇಒಗಳ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ಮೋದಿ ಅವರೊಂದಿಗೆ ಉತ್ತಮ ಸಂಬಂಧ ಹಂಚಿಕೊಂಡಿದ್ದಾರೆ. ಮತ್ತು ಅವರ ನಾಯಕತ್ವ ಮತ್ತು ಮಾತುಕತೆ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನನಗೆ ಪ್ರಧಾನಿ ಮೋದಿ ಬಗ್ಗೆ ಪ್ರೀತಿ ಮತ್ತು ಅಪಾರ ಗೌರವವಿದೆ ಎಂದು ಹೇಳಿದ್ದಾರೆ.

ಭಾರತದೊಂದಿಗೆ ವ್ಯಾಪಾರ ಒಪ್ಪಂದದೊಂದಿಗೆ ಮುಂದುವರಿಯಲು ಅಮೆರಿಕ ಸಿದ್ಧತೆ ನಡೆಸುತ್ತಿದೆ.ಎರಡೂ ರಾಷ್ಟ್ರಗಳ ನಡುವೆ ಈಗಾಗಲೇ ಐದು ಸುತ್ತಿನ ಮಾತುಕತೆಗಳು ನಡೆದಿವೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ಭಾರತ-ಪಾಕ್ ಕದನ ವಿರಾಮ ಮಾಡಿಸಿದ್ದೆ ನಾನು ಎಂದು ಮತ್ತೊಮ್ಮೆ ಪುನರುಚ್ಚರಿಸಿದ ಟ್ರಂಪ್

ಸಿಇಒಗಳ ಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಈ ವರ್ಷ ಆರಂಭದಲ್ಲಿ ಪಾಕ್ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಕದನ ವಿರಾಮವನ್ನು ನಡೆಸಲು ಎರಡೂ ದೇಶಗಳೊಂದಿಗೆ ಮಾತುಕತೆ ನಡೆಸಿ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ವ್ಯಾಪಾರ ಒತ್ತಡವನ್ನು ಬಳಸಿದ್ದನ್ನು ಹಂಚಿಕೊಂಡಿದ್ದಾರೆ.

ಎರಡು ದೇಶಗಳ ನಡುವೆ ಉದ್ವಿಘ್ನತೆಯಿದ್ದಾಗ ನಾನು ಪ್ರಧಾನಿ ಮೋದಿಯವರಿಗೆ ಕರೆ ಮಾಡಿ, ನೀವು ಪಾಕಿಸ್ತಾನದೊಂದಿಗೆ ಹೋರಾಡುತ್ತಿರುವುದರಿಂದ ನಾವು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ನಂತರ ನಾನು ಪಾಕಿಸ್ತಾನಕ್ಕೆ ಕರೆ ಮಾಡಿ ಅದೇ ಮಾತನ್ನು ಹೇಳಿದೆ ಎಂದು ಹೇಳಿದ್ದಾರೆ.

ನಂತರ ಎರಡೂ ಕಡೆಯವರು ಯುದ್ಧವನ್ನು ನಿಲ್ಲಿಸಲು ಒಪ್ಪಿಕೊಂಡರು. ವ್ಯಾಪಾರ, ಸುಂಕವನ್ನು ನಮ್ಮ ಆಡಳಿಯ ಶಾಂತಿಯ ಸಾಧನಗಳಾಗಿ ಬಳಸಿದೆ. ಎರಡು ಪರಮಾಣು ದೇಶಗಳ ನಡುವೆ ಶಾಂತಿ ಸ್ಥಾಪಿಸಿದ ಕೀರ್ತಿ ನನಗೆ ಸಲ್ಲುತ್ತದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net