

ವಾಷಿಂಗ್ಟನ್: ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರನ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಿ, ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಈ ಪೈಕಿ ನನ್ನ ತಂದೆ ಮೃತಪಟ್ಟಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿದೆ.
ನನ್ನ ತಂದೆಯವರಾದ ಡೊನಾಲ್ಡ್ ಟ್ರಂಪ್ರವರು ಮೃತಪಟ್ಟಿದ್ದಾರೆ ಎಂಬ ವಿಚಾರವನ್ನು ತಿಳಿಸಲು ಅತ್ಯಂತ ದುಃಖಕರವಾಗಿದೆ. 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಅವರ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಇದರ ಜೊತೆಗೆ ಕೆಲವು ಅಸಹ್ಯಕರ ಟ್ವೀಟ್ಗಳನ್ನು ಮಾಡಲಾಗಿದ್ದು, ಖಾತೆ ಹ್ಯಾಕ್ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದ ನಂತರ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗಿದೆ. ಇತ್ತ ಹ್ಯಾಕ್ ಆಗಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆ ಭದ್ರತೆಯಲ್ಲಿನ ಲೋಪದೋಷವನ್ನು ಎತ್ತಿ ತೋರಿಸಿದೆ. ಈ ವಿಚಾರವಾಗಿ ಹಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಿಳಿಯಲು ಡೊನಾಲ್ಡ್ ಟ್ರಂಪ್ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಅವರ ಮಗನ ಹ್ಯಾಕ್ ಆಗಿದ್ದ ಖಾತೆಯಿಂದ ಪೋಸ್ಟ್ ಆದ ಟ್ವೀಟ್ ಒಮ್ಮಲೇ ಎಲ್ಲರೂ ಬೆಚ್ಚಿ ಬೀಳುವಂತೆ ಮಾಡಿತ್ತು.