ಅಪ್ಪಿತಪ್ಪಿಯೂ ಸಂಜೆ ಈ ಕೆಲಸಗಳನ್ನು ಮಾಡಬೇಡಿ! ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ... Important Information

evening
ಸಾಂದರ್ಭಿಕ ಚಿತ್ರ
Published on

ಬೆಂಗಳೂರು:   ಸಾಮಾನ್ಯವಾಗಿ, ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕೆಲವು ರೀತಿಯ ತಪ್ಪುಗಳನ್ನು ತಿಳಿದು ಮತ್ತು ತಿಳಿಯದೆ ಮಾಡಬಾರದು ಎಂದು ಹಿರಿಯರು (Important Information) ಹೇಳುತ್ತಾರೆ. ಅನೇಕ ರೀತಿಯ ತೊಂದರೆ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸೂರ್ಯಾಸ್ತದ ನಂತರ ಯಾರಿಗೂ ಸಾಲ ಕೊಡಬೇಡಿ. ಹಾಗೆಯೇ ಯಾರಿಂದಲೂ ಸಾಲ ಪಡೆಯಬೇಡಿ. ಸಂಜೆ ವೇಳೆ ಹಣಕಾಸಿನ ವಹಿವಾಟು ನಡೆಸದಿರುವುದು ಒಳ್ಳೆಯದು ಎನ್ನಲಾಗಿದೆ. 

ಸೂರ್ಯಾಸ್ತದ ನಂತರ ಪೊರಕೆ ಹಿಡಿದು ಮನೆ ಗುಡಿಸಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಇದು ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. 

money

ಸೂರ್ಯಾಸ್ತದ ನಂತರ ತುಳಸಿ ಗಿಡಕ್ಕೆ ನೀರು ಹಾಕಬಾರದು. ತುಳಸಿ ಗಿಡವು ಲಕ್ಷ್ಮಿ ದೇವಿಯ ವಾಸಸ್ಥಾನವಾಗಿರುವುದರಿಂದ ಅದರ ಮೇಲೆ ನೀರನ್ನು ಸುರಿಯುವುದು ತುಳಸಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಸಂಜೆಯ ನಂತರ ಮನೆಯ ಮುಖ್ಯ ಬಾಗಿಲನ್ನು ಮುಚ್ಚಬಾರದು. ಲಕ್ಷ್ಮಿ ದೇವಿಯು ನಮ್ಮ ಮನೆಗೆ ಪ್ರವೇಶಿಸುವ ಸಮಯ ಇದಾಗಿದ್ದು, ಈ ಸಮಯದಲ್ಲಿ ಮುಖ್ಯ ಬಾಗಿಲನ್ನು ಮುಚ್ಚುವುದರಿಂದ ಲಕ್ಷ್ಮಿ ದೇವಿಯ ಪ್ರವೇಶವನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

 ಬಡವರು ಅಥವಾ ಭಿಕ್ಷುಕರು ಸೂರ್ಯಾಸ್ತದ ಸಮಯದಲ್ಲಿ ಮನೆಗೆ ಬಂದರೆ ಅವರನ್ನು ಬರಿಗೈಯಲ್ಲಿ ಕಳುಹಿಸಬಾರದು.

ಸಂಜೆಯ ನಂತರ ನಿದ್ರಿಸುವುದು ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತದೆ. ಹಾಗೆಯೇ ಮನೆಯ ಹೆಣ್ಣುಮಕ್ಕಳು ಮುಸ್ಸಂಜೆಯ ಸಮಯದಲ್ಲಿ ಹೊಸ್ತಿಲಲ್ಲಿ ಕೂರಬಾರದು. ಇದರಿಂದ ಲಕ್ಷ್ಮಿ ದೇವಿಗೆ ಅಸಂತೋಷವಾಗುತ್ತದೆ.

ಗಮನಿಸಿ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ವಿವರಗಳನ್ನು ನಿಮಗೆ ಒದಗಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net