ಚಂಡೀಗಢ: ಪಂಜಾಬ್‌ನ ಮೊಹಾಲಿ ಬಳಿಯಿರುವ ಮಾತೌರ್ ಕಾರ್ಖಾನೆಯ ರೆಫ್ರಿಜರೇಟರ್ ಒಳಗೆ ನಾಯಿಯ ಕತ್ತರಿಸಿದ ತಲೆ ಪತ್ತೆಯಾಗಿದೆ(Dog’s head found inside fridge). ಪಾತ್ರೆಗಳಲ್ಲಿ ಸ್ವಲ್ಪ ಮಾಂಸವೂ ಕಂಡುಬಂದಿದೆ. ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಕಾರ್ಖಾನೆಯಲ್ಲಿ ಮೊಮೊಸ್ ಮತ್ತು ಸ್ಪ್ರಿಂಗ್ ರೋಲ್‌ಗಳನ್ನು ತಯಾರಿಸಿ ಅನೇಕ ಸ್ಥಳಗಳಿಗೆ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ.
ಇದನ್ನು ಓದಿ: ಇದು ಸರ್ಕಾರದ ವೈಫಲ್ಯ; ನಾಗ್ಪುರ ಹಿಂಸಾಚಾರದ ಕುರಿತು ಅಸಾದುದ್ದೀನ್ ಓವೈಸಿ ಟೀಕೆ | Asaduddin Owaisi
ನಾಯಿ ತಲೆ ಮತ್ತು ಸ್ವಲ್ಪ ಮಾಂಸ ಪತ್ತೆಯಾದ ಮೇಲೆ ಈಗ ನಾಯಿ ಮಾಂಸವನ್ನು ಮೊಮೊಸ್‌ನಲ್ಲಿ ಹಾಕಿ ಜನರಿಗೆ ತಿನ್ನಿಸಲಾಗಿದೆಯೇ ಅಥವಾ ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಸ್ವತಃ ತಿನ್ನುತ್ತಿದ್ದಾರೆಯೇ ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ. ಈ ನಾಯಿಯ ದೇಹದ ಒಂದು ಭಾಗ ಕಾಣೆಯಾಗಿದೆ. ತಲೆ ಕೂಡ ಪೂರ್ಣವಾಗಿಲ್ಲ. ತಲೆಯನ್ನು ಪರೀಕ್ಷೆಗಾಗಿ ಪಶುವೈದ್ಯಕೀಯ ಇಲಾಖೆಗೆ ಕಳುಹಿಸಲಾಗಿದೆ. ಕಾರ್ಖಾನೆಯಲ್ಲಿ ಹೆಪ್ಪುಗಟ್ಟಿದ ಮಾಂಸ ಮತ್ತು ಕ್ರಷರ್ ಯಂತ್ರವೂ ಪತ್ತೆಯಾಗಿದೆ. ಮೊಮೊಸ್, ಸ್ಪ್ರಿಂಗ್ ರೋಲ್ಸ್ ಮತ್ತು ಕೆಂಪು ಚಟ್ನಿಯ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರ ವರದಿ ಬಂದ ನಂತರವೇ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾತೌರ್ ಗ್ರಾಮದಲ್ಲಿ ಮೊಮೊಸ್ ಮತ್ತು ಸ್ಪ್ರಿಂಗ್ ರೋಲ್‌ಗಳನ್ನು ತಯಾರಿಸುವ ಈ ಕಾರ್ಖಾನೆ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿತ್ತು. ಇಲ್ಲಿ ಆಹಾರ ಪದಾರ್ಥಗಳನ್ನು ತುಂಬಾ ಕೊಳಕು ಸ್ಥಿತಿಯಲ್ಲಿ ತಯಾರಿಸಿ ನಂತರ ಸರಬರಾಜು ಮಾಡಲಾಗುತ್ತಿತ್ತು. ಬಹಳ ದಿನಗಳಿಂದ ಈ ರೀತಿ ಮಾತುಗಳು ಕೇಳಿಬರುತ್ತಿದ್ದವು ಆದ್ದರಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಗಿ ಗ್ರಾಮದ ನಿವಾಸಿಯೊಬ್ಬರು ಹೇಳಿದ್ದಾರೆ.
मोहाली में मोमोज बनाने वाली फैक्ट्री में मिला कुत्ते का कटा सिर, मचा हड़कंप pic.twitter.com/fH23XNuBUC
— RAJIEV (राजीव) (@mishrarajiv08) March 18, 2025
ಬಳಿಕ ಆರೋಗ್ಯ ಮತ್ತು ಪುರಸಭೆ ತಂಡಗಳು ಮಾತೌರ್ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ, ಫ್ರಿಡ್ಜ್‌ನಲ್ಲಿ ನಾಯಿಯ ತಲೆ ಪತ್ತೆಯಾಗಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಕಾರ್ಮಿಕರು ಓಡಿಹೋಗಿದ್ದಾರೆ. ಆ ಹಳ್ಳಿಯಲ್ಲಿಯೇ ಖಾನ್ ಬೇಕರಿ ಎಂಬ ಅಂಗಡಿ ಇದೆ. ಕಾರ್ಖಾನೆ ನಡೆಯುತ್ತಿದ್ದ ಆಸ್ತಿ ಕೂಡ ಅದೇ ಮಾಲೀಕರಿಗೆ ಸೇರಿದೆ. ಮಾಹಿತಿಯ ಪ್ರಕಾರ ನೇಪಾಳಿ ಮೂಲದ 8-10 ಜನರು ಇಲ್ಲಿ ವಾಸಿಸುತ್ತಿದ್ದರು, ಅವರು ಮೊಮೊಸ್ ಮತ್ತು ಸ್ಪ್ರಿಂಗ್ ರೋಲ್‌ಗಳನ್ನು ತಯಾರಿಸುತ್ತಿದ್ದರು ಎನ್ನಲಾಗಿದೆ. ಮೊಹಾಲಿ ಪುರಸಭೆಯು ಕಾರ್ಖಾನೆಯ ಮಾಲೀಕರಿಗೆ 12,000 ರೂ. ದಂಡ ವಿಧಿಸಿತು ಮತ್ತು ಪ್ಲಾಸ್ಟಿಕ್ ಚೀಲಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದ ನಂತರ 10,000 ರೂ. ಮತ್ತೊಂದು ದಂಡವನ್ನು ವಿಧಿಸಿತು.(ಏಜೆನ್ಸೀಸ್)
ಗಾಜಾದಲ್ಲಿ ಇಸ್ರೇಲ್ ನಡೆಸಿದ ಅತಿದೊಡ್ಡ ವೈಮಾನಿಕ ದಾಳಿ; 300ಕ್ಕೂ ಹೆಚ್ಚು ಮಂದಿ ಮೃತ | Israeli Airstrike