More

    ಅಜಯ್​ ದೇವಗನ್​ ಸಾಹಸವನ್ನು ಮರುಸೃಷ್ಟಿಸಿದ ಶ್ವಾನ: ವಿಡಿಯೋ ವೈರಲ್, ನಗೆಗಡಲಲ್ಲಿ ತೇಲಿದ ನೆಟ್ಟಿಗರು​

    ಮುಂಬೈ: ನಟ ಅಜಯ್​ ದೇವಗನ್​ ಅವರು 1991ರಲ್ಲಿ ತೆರೆಕಂಡ ಫೂಲ್​ ಔರ್​ ಕಾಂತೆ ಸಿನಿಮಾ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಫಿಲ್ಮ್​ಫೇರ್​ ಅವಾರ್ಡ್​ ಗಳಿಸಿದರು. ಈ ಸಿನಿಮಾದ ಕಥಾವಸ್ತುವು ಮೆಚ್ಚುಗೆ ಪಡೆದಿದ್ದಲ್ಲದೆ, ಹಾಡುಗಳು ಸಹ ಹಿಟ್ ಆದವು. ಮೊದಲ ಸಿನಿಮಾದಲ್ಲೇ ಅಜಯ್​ ದೇವಗನ್​ ಬಾಲಿವುಡ್​ನ ಭರವಸೆ ನಾಯಕರಾದರು. ಈ ಸಿನಿಮಾದಲ್ಲಿ ವಿಶೇಷ ಗಮನ ಸೆಳೆದಿದ್ದು, ದೇವಗನ್​ ಅವರ ಅದ್ಧೂರಿ ಎಂಟ್ರಿ. ಎರಡು ಬೈಕ್​ಗಳ ಮೇಲೆ ನಿಂತು ಬರುವ ಸಾಹಸ ಸಿನಿ ರಸಿಕರನ್ನು ಸೆಳೆಯಿತು.

    ಈ ಸಿನಿಮಾ 1991ರಲ್ಲಿ ತೆರೆಕಂಡರೂ ಇಂದಿಗೂ ಈ ಐಕಾನಿಕ್​ ಸಾಹಸವನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅನೇಕ ಸಿನಿಮಾಗಳಲ್ಲಿ ಅಜಯ್​ ದೇವಗನ್​ ಈ ದೃಶ್ಯವನ್ನು ಮರುಸೃಷ್ಟಿ ಮಾಡಿದ್ದಾರೆ. ಆದರೆ, ಇದೀಗ ವೈರಲ್​ ಆಗಿರುವ ವಿಡಿಯೋವೊಂದು ನಿಮ್ಮನ್ನು ಆಶ್ಚರ್ಯ ಚಕಿತಗೊಳಿಸುತ್ತದೆ. ಅಲ್ಲದೆ, ನಿಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ.

    ಇದನ್ನೂ ಓದಿ: ಸೀಮಾ ಹೈದರ್​ನ ಪ್ರಿಯತಮನ ಕುಟುಂಬಕ್ಕೆ ಉದ್ಯೋಗದಾತರೇ ಇಲ್ಲ! ಅನ್ನಾಹಾರಕ್ಕೆ ಕೊರತೆ…

    ವೈರಲ್​ ಆಗಿರುವ ವಿಡಿಯೋದಲ್ಲಿ ಎರಡು ಎಮ್ಮೆಗಳು ರಸ್ತೆಯಲ್ಲಿ ನಡೆದು ಬರುತ್ತಿರುವುದನ್ನು ನೋಡಬಹುದು. ಆದರೆ, ಜನರ ಗಮನ ಸೆಳೆದ ಸಂಗತಿ ಏನೆಂದರೆ, ಒಂದು ಎಮ್ಮೆಯ ಮೇಲೆ ಬಿಳಿ ಶ್ವಾನವೊಂದು ಅಜಯ್​ ದೇವಗನ್​ ಮಾದರಿಯಲ್ಲಿ ಕಾಲುಗಳನ್ನು ಇಟ್ಟುಕೊಂಡು ಬರುವ ಮೂಲಕ ಸಾಹಸ ಪ್ರದರ್ಶಿಸಿದೆ. ಎರಡು ಎಮ್ಮೆಗಳು ನೇರವಾಗಿ ಒಟ್ಟಿಗೆ ನಡೆಯುತ್ತಿದ್ದರೆ, ನಾಯಿಯು ಒಂದು ಎಮ್ಮೆಯ ಮೇಲೆ ನಿಂತಿರುವುದನ್ನು ಕಾಣಬಹುದು. ನಾಯಿಯು ಅಜಯ್‌ ದೇವಗನ್​ ಅವರ ಸಾಂಪ್ರದಾಯಿಕ ಸಾಹಸಕ್ಕೆ ಒಂದು ಟ್ವಿಸ್ಟ್ ಅನ್ನು ಇಲ್ಲಿ ಪರಿಚಯಿಸಿದೆ.

    ಇದನ್ನೂ ಓದಿ: ಕಸ ಹೆಕ್ಕುವ ರೋಬೋಟ್​ ಬಗ್ಗೆ ಕೇಳಿದ್ದೀರಾ? ಇದು ಗೂಗಲ್​ನ ಕರಾಮತ್ತು!

    ಈ ವಿಡಿಯೋದ ಮೂಲವನ್ನು ಖಚಿತಪಡಿಸಲು ಸಾಧ್ಯವಾಗದಿದ್ದರೂ, ಇದು ನೆಟ್ಟಿಗರ ಗಮನ ಸೆಳೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಗೆಬಗೆಯ ಕಾಮೆಂಟ್​ ಮೂಲಕ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ನಾಯಿಯ ಸಾಹಸವನ್ನು ಅಜಯ್​ ದೇವಗನ್​ ಸಾಹಸಕ್ಕೆ ಹೋಲಿಕೆ ಮಾಡಿದ್ದಾರೆ. ನಗುತ್ತಿರುವ ಎಮೋಜಿಗಳ ಮಹಾಪೂರವೇ ಹರಿದುಬಂದಿದೆ. (ಏಜೆನ್ಸೀಸ್​)

    VIDEO| ಅಜಯ್​ ದೇವಗನ್​ ಅನುಸರಿಸಲು ಹೋಗಿ ಜೈಲು ಪಾಲಾದ ಯುವಕ: ವಾಹನಗಳೂ ಸೀಜ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts