ತಮಿಳುನಾಡು: ತಮಿಳು ನಟ, ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಸಿನಿಮಾ ಇಂದು (ಸೆ.05) ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಈ ಹಿಂದಿನಿಂದಲೂ ವಿಜಯ್ ಸಿನಿಮಾ ಅಂದರೆ ಅಲ್ಲಿ ಆ್ಯಕ್ಷನ್, ಮನರಂಜನೆಗೆ ಹೇಳಿ ಮಾಡಿಸಿದ ಅಂಶಗಳಿರುತ್ತವೆ ಎಂಬುದು ಸಿನಿಪ್ರಿಯರ ನಿರೀಕ್ಷೆ. ರಿಲೀಸ್ಗೂ ಮುನ್ನವೇ ಭಾರೀ ಕುತೂಹಲ ಕೆರಳಿಸಿದ್ದ ಗೋಟ್ ಚಿತ್ರ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಲಿದ್ದೇ ಆದರೂ ಕೆಲವು ವಿಷಯ ಚಿತ್ರ ಪ್ರೇಮಿಗಳಿಗೆ ಹಿಡಿಸಿಲ್ಲ.
ಇದನ್ನೂ ಓದಿ: ಹಾವಿನ ಬಾಯಿಂದ ನೀರಿನಂತೆ ಹೊರಬರುತ್ತಿರುವ ವಿಷ! ಅಪಾಯಕಾರಿ ವಿಡಿಯೋ ನೋಡಿ..
ವೆಂಕಟೇಶ್ ಪ್ರಭು ನಿರ್ದೇಶನದಲ್ಲಿ ಮೂಡಿಬಂದಿರುವ ‘ಗೋಟ್’ ಚಿತ್ರದಲ್ಲಿ ಹಲವು ನಿರೀಕ್ಷೆಗೂ ಮೀರಿದ ಅಂಶಗಳಿವೆ ಎಂದು ಹೇಳಲಾಗಿತ್ತು. ಆ ಪೈಕಿ ಮೊದಲ ಸರ್ಪ್ರೈಸ್ ನಿನ್ನೆಯಷ್ಟೆ ರಿವೀಲ್ ಆಗಿತ್ತು. ಕ್ರಿಕೆಟ್ ಲೋಕದಲ್ಲಿ ತಮ್ಮ ವಿಶೇಷ ಬ್ಯಾಟಿಂಗ್ ವೈಖರಿ ಹಾಗೂ ಆಲ್ರೌಂಡರ್ ಪ್ರದರ್ಶನದಿಂದ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಸುಬ್ರಮಣಿಯಂ ಬದ್ರಿನಾಥ್ ಚಿತ್ರದಲ್ಲಿ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಇದೀಗ ಬಿಡುಗಡೆಯ ಬೆನ್ನಲ್ಲೇ ಸಿನಿಮಾ ವೀಕ್ಷಿಸಿದ ಚಿತ್ರರಸಿಕರು, ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರನ್ನು ಕಂಡು ಆಶ್ಚರ್ಯದ ಜತೆಗೆ ಸಖತ್ ಥ್ರಿಲ್ ಆಗಿದ್ದಾರೆ.
ಸದ್ಯ ಟ್ವಿಟರ್ನಲ್ಲಿ ಟ್ರೆಂಡ್ ಆಗ್ತಿರುವ ವಿಜಯ್ ಅಭಿನಯದ ‘ಗೋಟ್’, ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೆ ತಕ್ಕಂತೆ ಆದಾಯ ಗಳಿಸುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ. ಇದಕ್ಕೆ ದಿನಾಂತ್ಯದವರೆಗೆ ಕಾದು ನೋಡಬೇಕಿದೆ. ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಹರಿದುಬರುತ್ತಿರುವ ಮಧ್ಯೆಯೇ ಕೆಲವರು ಸಿನಿಮಾದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದ ಮೊದಲಾರ್ಧ ಒಂದು ರೀತಿ ಮನರಂಜನೆ ನೀಡಿದರೆ, ಮಧ್ಯಂತರದಲ್ಲಿ ಕೆಲವು ದೃಶ್ಯಗಳು ಹೇಳಿಕೊಳ್ಳುವಂತಿಲ್ಲ. ಆದರೆ, ಕ್ಲೈಮ್ಯಾಕ್ಸ್ ಚೆನ್ನಾಗಿ ಮೂಡಿಬಂದಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಮಧ್ಯೆ ರಾಮ್ ವಿಘ್ನೇಶ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರ ಚೆನ್ನಾಗಿಲ್ಲ. ನಿಮ್ಮ ಹಣ ಇಲ್ಲಿ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ನೋಡುಗರಲ್ಲಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್).
Some vijay fans padatha pathutu nengale soluvinga
Fans show sound ye ilama maiyana amaithi avlo mokka
Oru scene kooda urupadiya illa
Don’t waste your money
Ott watch kooda worth ila
0.00/5#Goat #GOATFDFS #TheGOAT #TheGretestOfAllTime pic.twitter.com/BwG0qnWccm— Ram VignesH (@iMarathTamizhan) September 5, 2024