More

    ‘ಬ್ಲ್ಯಾಕ್​ಫಂಗಸ್​ ಆಗಿದೆ.. ಕಣ್ಣು, ದವಡೆ ತೆಗಿಲೇಬೇಕು’ ಎಂದರೂ ಕೇಳದೆ ರೋಗಿಯನ್ನು ಮಾಂತ್ರಿಕನ ಬಳಿ ಕರೆತಂದ ಗ್ರಾಮಸ್ಥರು

    ಜೈಪುರ: ಕರೊನಾ ಬೆನ್ನಲ್ಲೇ ಬ್ಲ್ಯಾಕ್​ ಫಂಗಸ್​ ಕಾಟವೂ ಆರಂಭವಾಗಿದೆ. ಭಾರತದಲ್ಲಿ ಸಾವಿರಾರು ಜನರು ಬ್ಲ್ಯಾಕ್​ ಫಂಗಸ್​ಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳಲಾರಂಭಿಸಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಸರ್ಕಾರವ ಇದರ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಆದರೂ ಕೆಲವರು ಫಂಗಸ್​ನ್ನು ಗಂಭೀರವಾಗಿ ಪರಿಗಣಿಸದೆ, ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

    ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಕಲ್ಯಾಣ್ಪುರ ಗ್ರಾಮದಲ್ಲಿಯೂ ಇದೇ ರೀತಿಯ ಘಟನೆಯೊಂದು ನಡೆದಿದೆ. ಅಲ್ಲಿನ ವಯಸ್ಕ ವ್ಯಕ್ತಿಯೊಬ್ಬನಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಿದೆ. ಈಗಾಗಲೇ ಫಂಗಸ್​ ಹೆಚ್ಚಾಗಿರುವುದರಿಂದಾಗಿ ದವಡೆ ಮತ್ತು ಕಣ್ಣುಗಳನ್ನು ತೆಗೆಯಲೇಬೇಕೆಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅದಕ್ಕಾಗಿ ಎರಡೆರೆಡು ಆಪರೇಷನ್​ ಮಾಡಬೇಕೆಂದು ತಿಳಿಸಲಾಗಿದೆ. ಆದರೆ ಆಪರೇಷನ್​ಗೆ ಹೆದರಿರುವ ಕುಟುಂಬಸ್ಥರು ರೋಗಿಯನ್ನು ವಾಪಾಸು ಮನೆಗೆ ಕರೆದುಕೊಂಡು ಬಂದಿದ್ದಾರೆ.

    ರೋಗಿಯನ್ನು ಗ್ರಾಮದಲ್ಲಿಯೇ ಇಟ್ಟುಕೊಂಡು ಚಿಕಿತ್ಸೆ ಕೊಡುವುದಾಗಿ ಆತನ ಕುಟುಂಬ ಹೇಳಿದೆ. ನಮಗೆ ಗೊತ್ತಿರುವ ಮಾಂತ್ರಿಕರಿದ್ದಾರೆ. ಅವರು ಇದಕ್ಕೆ ಚಿಕಿತ್ಸೆ ಕೊಟ್ಟು ಸರಿ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ಈಗಾಗಲೇ ಹಲವಾರು ಅಧಿಕಾರಿಗಳು ಕುಟುಂಬದ ಮನವೊಲಿಸಿ ರೋಗಿಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕುಟುಂಬ ತನ್ನ ಹಟವನ್ನು ಮುಂದುವರಿಸುತ್ತಿರುವುದಾಗಿ ಹೇಳಲಾಗಿದೆ. ಸದ್ಯ ರೋಗಿಯ ಸ್ಥಿತಿ ಗಂಭೀರವಿದೆ ಎನ್ನಲಾಗಿದೆ. (ಏಜೆನ್ಸೀಸ್)

    ರೈಲಿನಲ್ಲಿ 21 ವರ್ಷದ ಯುವತಿಯ ಬರ್ಬರ ಹತ್ಯೆ! ಅಪ್ಪನನ್ನು ಜೈಲಿನಿಂದ ಬಿಡಿಸಲು ಹೊರಟವಳ ಬದುಕೇ ಅಂತ್ಯ

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

    ‘ಅಪ್ಪಾ, ನನ್ನ ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ವೈದ್ಯೆ

    ಕರೊನಾ ಗೆದ್ದರೂ ಬಿಡಲೇ ಇಲ್ಲ ವಿಧಿ! ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts