More

    ಕಾಂಗ್ರೆಸ್ ಮಾಡಿದ ಪಾಪಗಳಿಗೆ ಜನ ಈಗ ಶಿಕ್ಷಿಸುತ್ತಿದ್ದಾರೆ: ಪ್ರಧಾನಿ ಮೋದಿ

    ಜೈಪುರ: ಒಂದು ಕಾಲದಲ್ಲಿ ಲೋಕಸಭೆ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುತ್ತಿದ್ದ ಕಾಂಗ್ರೆಸ್​ ಪಕ್ಷ ಇಂದು ಸ್ವತಂತ್ರವಾಗಿ 300 ಕ್ಷೇತ್ರಗಳಲ್ಲಿ ಸ್ವರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್​ ಮಾಡಿದ ಪಾಪಕ್ಕೆ ದೇಶದ ಜನರೇ ಶಿಕ್ಷೆ ನೀಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.

    ಇದನ್ನೂ ಓದಿ: ಇಂಡಿಯಾ ಮೈತ್ರಿ ಒಕ್ಕೂಟದ ಚುನಾವಣಾ ರ‍್ಯಾಲಿ: ರಾಹುಲ್ ಗಾಂಧಿ ಗೈರು? ಕಾರಣ ಹೀಗಿದೆ..!

    ರಾಜಸ್ಥಾನದ ಜಲೋರ್​ ಜಿಲ್ಲೆಯಲ್ಲಿ ಭಾನುವಾರ ಆಯೋಜಿಸಿದ್ದ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ರಾಜಸ್ಥಾನದ ಅರ್ಧಭಾಗದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಜನರು ಕಾಂಗ್ರೆಸ್​ಗೆ ಶಿಕ್ಷೆ ನೀಡಿದ್ದಾರೆ ಎಂದು ತಿಳಿಸಿದರು.

    ರಾಜಸ್ಥಾನದಾದ್ಯಂತ ದೇಶಪ್ರೇಮವಿದೆ. ಕಾಂಗ್ರೆಸ್‌ ಪಕ್ಷ ಎಂದಿಗೂ ಭಾರತವನ್ನು ಬಲಿಷ್ಠಗೊಳಿಸಲು ಸಾಧ್ಯವಿಲ್ಲ ಎಂಬುವುದು ಜನರಿಗೆ ಮನವರಿಕೆಯಾಗಿದೆ. 2014ಕ್ಕಿಂತ ಮೊದಲಿದ್ದ ಪರಿಸ್ಥಿತಿ ಮತ್ತೆ ಬರಲು ದೇಶದ ಜನರು ಬಿಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಪಕ್ಷವು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಗೆದ್ದಲುಗಳನ್ನು ಹರಡುವ ಮೂಲಕ ದೇಶವನ್ನು ಟೊಳ್ಳು ಮಾಡಿದೆ. ಇದರಿಂದ ದೇಶದ ಜನರು ಕಾಂಗ್ರೆಸ್​ ಮೇಲೆ ಕೋಪಗೊಂಡಿದ್ದಾರೆ. ಅವರ ಪಾಪಗಳಿಗೆ ಜನರು ಶಿಕ್ಷೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

    ಬಿಜೆಪಿ ಅಭ್ಯರ್ಥಿ ಲುಂಬರಾಮ್ ಚೌಧರಿ ಪರ ಜಲೋರ್ ಜಿಲ್ಲೆಯ ಭಿನ್ಮಾಲ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
    ರಾಜಸ್ಥಾನದಲ್ಲಿ 25 ಲೋಕಸಭಾ ಸ್ಥಾನಗಳಿವೆ. 12 ಸ್ಥಾನಗಳಿಗೆ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆದಿದ್ದು, ಉಳಿದ 13 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

    ನೇಹಾ ಹಿರೇಮಠ ತಂದೆಗೆ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ ಡಿಕೆ ಶಿವಕುಮಾರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts