More

    ಲಸಿಕೆ ಹಾಕಿಸಿಕೊಂಡಿದ್ದ ವೈದ್ಯರಿಗೂ ಕೋವಿಡ್​​-19 ಪಾಸಿಟಿವ್​; ಏಳು ವೈದ್ಯರಲ್ಲಿ ಸೋಂಕು ಪತ್ತೆ!

    ಚಾಮರಾಜನಗರ: ದೇಶ ಮಾತ್ರವಲ್ಲ ಜಗತ್ತಿನಾದ್ಯಂತ ಕರೊನಾ ವಿರುದ್ಧ ಲಸಿಕೆ ಸಿಕ್ಕ ಖುಷಿಯ ನಡುವೆ ಬಹಳಷ್ಟು ಬೇಸರದ ಸಂಗತಿಗಳೂ ಬೆಳಕಿಗೆ ಬಂದಿದ್ದವು. ಲಸಿಕೆ ಪಡೆದರೂ ಸೋಂಕು ತಗುಲಿದ, ಲಸಿಕೆ ಪಡೆದ ಮೇಲೆ ಅಸ್ವಸ್ಥಗೊಂಡ ಅಥವಾ ಸಾವಿಗೀಡಾದಂತಹ ಪ್ರಕರಣಗಳು ಕೂಡ ವರದಿಯಾಗಿವೆ. ಇದೀಗ ಲಸಿಕೆ ಪಡೆದ ವೈದ್ಯರಲ್ಲೂ ಸೋಂಕು ಕಾಣಿಸಿರುವುದು ಕುತೂಹಲ ಹಾಗೂ ಆತಂಕ ಮೂಡಿಸಿದೆ.

    ಲಸಿಕೆ ಹಾಕಿಸಿಕೊಂಡ ವೈದ್ಯರಲ್ಲೂ ಕೋವಿಡ್​-19 ಪಾಸಿಟಿವ್ ದೃಢಪಟ್ಟಿದೆ. ಅಂದಹಾಗೆ ಇದು ದೂರದ ಯಾವುದೋ ರಾಜ್ಯ ಅಥವಾ ದೇಶದಲ್ಲಿ ಆಗಿರುವಂಥದ್ದಲ್ಲ. ಕರ್ನಾಟಕದ ಚಾಮರಾಜನಗರದಲ್ಲೇ ಇಂಥದ್ದೊಂದು ಪ್ರಕರಣ ಕಂಡುಬಂದಿದೆ. ಇಲ್ಲಿ ಕರೊನಾ ಲಸಿಕೆ ಪಡೆದಿರುವ ಏಳು ವೈದ್ಯರಲ್ಲಿ ಸೋಂಕು ದೃಢಪಟ್ಟಿದೆ. ಈ ವೈದ್ಯರಲ್ಲಿ ಕೆಲವರು ಕೋವಿಶೀಲ್ಡ್​ ಹಾಗೂ ಇನ್ನು ಕೆಲವರು ಕೊವಾಕ್ಸಿನ್​ ಲಸಿಕೆ ಪಡೆದಿದ್ದರು. ಆದರೂ ಆ ಬಳಿಕ ಅವರಲ್ಲಿ ಕೋವಿಡ್​-19 ಸೋಂಕು ದೃಢಪಟ್ಟಿದೆ ಎಂದು ಚಾಮರಾಜನಗರ ಡಿಎಚ್​ಒ ಡಾ.ರವಿ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಕಳ್ಳನೆಂದುಕೊಂಡು ವ್ಯಕ್ತಿಯೊಬ್ಬನನ್ನು ಕಂಬಕ್ಕೆ ಕಟ್ಟಿಹಾಕಿ ಬಡಿದ ಜನರು!; ಆತನ ಜತೆಗಿದ್ದ ನಾಲ್ವರು ಪರಾರಿ…

    ಮತ್ತೊಂದೆಡೆ ಆರೋಗ್ಯ ಸಚಿವರು ಲಸಿಕೆ ಕುರಿತ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸಲಹೆ ನೀಡಿದ್ದಾರೆ. ಕೋವಿಶೀಲ್ಡ್​ ಹಾಗೂ ಕೊವ್ಯಾಕ್ಸಿನ್​ ಎರಡೂ ಲಸಿಕೆಗಳು ಕೂಡ ಸಂಪೂರ್ಣ ಸುರಕ್ಷಿತವಾಗಿರುವಂಥವು. ಲಸಿಕೆಗಳಿಗೆ ಸಂಬಂಧಿಸಿದಂತೆ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಸಚಿವ ಡಾ.ಕೆ. ಸುಧಾಕರ್ ಟ್ವೀಟ್ ಮೂಲಕ ಕೋರಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)

    ಅವನಿಗೆ ಅರ್ಪಿಸಿಕೊಂಡಿರುವೆ, ಮನೆಯವರಿಗೆ ತಿಳಿದರೆ ಕೊಂದೇ ಬಿಡುತ್ತಾರೆ, ಓಡಿ ಹೋಗಲೆ?

    ಸೆಕ್ಸ್​ಡಾಲ್​ ಜತೆ ವರ್ಷ ಇದ್ದೆ- ಯುವತಿಗಿಂತ ಇದೇ ಬೆಸ್ಟ್ ಅನ್ನಿಸಿ ಮದ್ವೆಯಾಗ್ತಿದ್ದೇನೆ ಎಂದ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts