VIDEO: ಮಹಿಳೆಯ ಹೊಟ್ಟೆ ಸೇರಿದ್ದ ಹಾವನ್ನು ಬಾಯಿಯ ಮೂಲಕ ಹೊರಗೆ ಎಳೆದ ವೈದ್ಯರು..ಈ ಅಸಹ್ಯ ಒಮ್ಮೆ ನೋಡಿ !

Snake
Published on

ಎಂತೆಂಥಾ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಹಾಗೇ ರಷ್ಯಾದಲ್ಲಿ ನಡೆದ ಭಯಾನಕ ಘಟನೆಯ ವಿಡಿಯೋವೊಂದು ವೈರಲ್​ ಆಗುತ್ತಿದೆ.

ರಷ್ಯಾದಲ್ಲಿ ಮಹಿಳೆಯೋರ್ವಳ ಬಾಯಿಯಿಂದ ಸುಮಾರು 4 ಅಡಿ ಉದ್ದದ ಹಾವನ್ನು ವೈದ್ಯರು ಎಳೆದು ತೆಗೆದಿದ್ದಾರೆ. ಆಕೆ ನಿದ್ದೆ ಮಾಡುತ್ತಿದ್ದಾಗ ಈ ಹಾವು ಬಾಯಿಯೊಳಗೆ ಹೊಕ್ಕು, ಹೊಟ್ಟೆ ಸೇರಿತ್ತು ಎಂದು ವರದಿಯಾಗಿದೆ.

ಮಹಿಳೆ ರಷ್ಯಾದ ಡಾಗೆಸ್ತಾನ್​​ನ ಲೇವಾಶಿ ಗ್ರಾಮದವರು. ರಾತ್ರಿ ಮನೆಯ ಅಂಗಳದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ತೆರೆದಿದ್ದ ಬಾಯಿಯ ಮೂಲಕ ಹಾವು ಒಳಗೆ ಸೇರಿಕೊಂಡಿತ್ತು. ಏನೋ ಆದಂತಾಗಿ ಮಹಿಳೆ ತಕ್ಷಣವೇ ಎಚ್ಚರಗೊಂಡರು. ಆದರೆ ಅವರು ಅಸ್ವಸ್ಥರಾಗಿದ್ದರು. ಕಾರಣ ಹಾವು ಬಾಯಿಯಿಂದ ಗಂಟಲ ಮೂಲಕ ಹೊಟ್ಟೆಯ ಒಳಗೆ ಸೇರಿತ್ತು. ಇದನ್ನೂ ಓದಿ: ಅಕ್ರಮವಾಗಿ ಮರಳು ತೆಗೆಯಲು ಅಪ್ಪನ ಜತೆ ಹೋಗಿದ್ದ ಯುವತಿ ಅಲ್ಲೇ ಪ್ರಾಣಬಿಟ್ಟಳು!

ಪರೀಕ್ಷೆ ನಡೆಸಿದ ವೈದ್ಯರಿಗೆ ಮಹಿಳೆಯ ಹೊಟ್ಟೆಯೊಳಗೆ ಏನೋ ಸೇರಿಕೊಂಡಿರುವುದು ಗೊತ್ತಾಯಿತು. ಆಕೆಗೆ ಕಡಿಮೆ ಪ್ರಮಾಣದ ಅನಸ್ತೇಶಿಯಾ ಕೊಟ್ಟ ವೈದ್ಯರು, ಗಂಟಲೊಳಗೆ ಟ್ಯೂಬ್​ ಹಾಕಿ, ಕ್ಯಾಮರಾ ಮೂಲಕ ಮೊದಲು ನೋಡಿದ್ದಾರೆ. ಅದು ಹಾವು ಎಂದು ಗೊತ್ತಾಗುತ್ತಿದ್ದಂತೆ, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಹಾವನ್ನು ಮಹಿಳೆಯ ಬಾಯಿಯ ಮೂಲಕವೇ ಹೊರಗೆ ಎಳೆದಿದ್ದಾರೆ. ವಿಡಿಯೋ ನೋಡಿದವರೇನು ಸ್ವತಃ ಆ ಕ್ಷಣದಲ್ಲಿದ್ದ ವೈದ್ಯರು, ನರ್ಸ್​ಗಳೇ ಶಾಕ್​ ಆಗಿದ್ದಾರೆ. ಅಸಹ್ಯವನ್ನೂ ಪಟ್ಟುಕೊಂಡಿದ್ದಾರೆ. ಹಾವನ್ನೇನೋ ತೆಗೆದು ಒಂದು ಪೆಟ್ಟಿಗೆಯಲ್ಲಿ ಕೂಡಿಟ್ಟಿದ್ದಾರೆ. ಆದರೆ ಅದು ಸತ್ತಿದೆಯೋ..ಬದುಕಿದೆಯೋ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಆದರೆ ಆ ಹಳ್ಳಿಗಳಲ್ಲಿ ಇದು ಅತಿ ಸಾಮಾನ್ಯವಾದ ಘಟನೆ. ಹೊರಗೆ ಮಲಗಬೇಡಿ ಎಂದು ಎಷ್ಟು ಎಚ್ಚರಿಕೆ ನೀಡಿದರೂ ಹಳ್ಳಿಗರು ಕೇಳುವುದಿಲ್ಲ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net