ವಾರಣಾಸಿ: ಸ್ಮಾರ್ಟ್ಫೋನ್ ಯುಗದಲ್ಲಿ ಬಹುತೇಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಇದರಲ್ಲಿ ಪ್ರತಿನಿತ್ಯ ಹರಿದಾಡುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ವೈದ್ಯರು ಹಾಗೂ ನರ್ಸ್ಗಳು (Hospital Staff) ಕರ್ತವ್ಯದ ವೇಳೆ ಭರ್ಜರಿ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ವಿಚಾರ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.
ವಾರಣಾಸಿ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಕೆಲಸದ ಸಮಯದಲ್ಲಿ ವೈದ್ಯರು, ನರ್ಸ್ ಹಾಗೂ ಆಸ್ಪತ್ರೆ ಸಿಬ್ಬಂದಿ (Hospital Staff) ಯಾವುದನ್ನು ಲೆಕ್ಕಿಸದೆ ತಮ್ಮಿಷ್ಟದ ಹಿಂದಿ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದು, ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಗ್ಯ ಸಚಿವರು ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, AhteshamFIn ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
#सरकारी नौकरी के जलवे!! 💃#वाराणसी जिलाअस्पताल में सांस्कृतिक कार्यक्रम के दौरान नर्सों के साथ #CMS डॉ. दिग्विजय सिंह और कर्मचारियों ने लगाए ठुमके की जमकर तारीफ हो रही है 🤠 pic.twitter.com/VH0a5APnWc
— Dr.Ahtesham Siddiqui (@AhteshamFIN) November 14, 2024
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ನರ್ಸ್ ಒಬ್ಬರಿಗೆ ಬಡ್ತಿ ಸಿಕ್ಕ ಖುಷಿಯಲ್ಲಿ ವೈದ್ಯರು, ನರ್ಸ್ ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿ (Hospital Staff) ಕೊಠಢಿಯೊಂದರಲ್ಲಿ ಹಿಂದಿ ಹಾಡುಗಳಿಗೆ ಗಂಟೆಗೂ ಹೆಚ್ಚಿನ ಕಾಲ ಡ್ಯಾನ್ಸ್ ಮಾಡಿದ್ದಾರೆ. ಆಸ್ಪತ್ರೆ ಸಿಎಂಎಸ್ ಡಾ. ದಿಗ್ವಿಜಯ್ ಸಿಂಗ್, ಎಂಎಸ್ ಡಾ. ಪ್ರೇಮ್ ಪ್ರಕಾಶ್ ಸಿಂಗ್ ಸೇರಿದಂತೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಿದ್ದರು. ವಿಡಿಯೋ ವೈರಲ್ ಆಗಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸರ್ಕಾರ ತನಿಖೆಗೆ ಆದೇಶಿಸಿದ್ದು, ವಾರಣಾಸಿಯ ಮುಖ್ಯ ವೈದ್ಯಾಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಧಿಕಾರಿಗಳು, ವೈದ್ಯರು ಮತ್ತು ನರ್ಸ್‌ಗಳೆಲ್ಲಾ ಜೊತೆ ಸೇರಿ ಭರ್ಜರಿ ಡಾನ್ಸ್ ಪಾರ್ಟಿ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಇಂದು ಬೆಳಗ್ಗೆ ಹಂಚಿಕೊಳ್ಳಲಾದ ಈ ವಿಡಿಯೋ 20 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಹಲವರು ಡಾನ್ಸ್ ಮಾಡುವುದನ್ನು ಬಿಟ್ಟು ರೋಗಿಗಳತ್ತ ಗಮನ ಹರಿಸಿ ಎಂದು ಕಮೆಂಟ್ ಮಾಡಿ ಕಿಡಿಕಾರಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆ ಭೀತಿ; ಪಿಚ್ ಯಾರಿಗೆ ಸಹಕಾರಿ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Weather Forecast| ರಾಜ್ಯದ ಈ ಆರು ಜಿಲ್ಲೆಗಳಲ್ಲಿ ಮಳೆ ಆರ್ಭಟ ಮತ್ತಷ್ಟು ಜೋರು; Yellow Alert ಘೋಷಣೆ