

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪುನೀತ್ ಆರ್.ಪಿ. ‘ಪ್ರೈವೆಸಿ ಪ್ರಿಸರ್ವೇಶನ್ ಆ್ಯಂಡ್ ಇಂಟರ್ ಆಪರೇಬಿಲಿಟಿ ಆಫ್ ಇಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ಸ್ ಯುಸಿಂಗ್ ಬ್ಲಾಕ್‌ಚೇನ್ ಟೆಕ್ನಾಲಜಿ’ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರಿನ ರೇವಾ ವಿವಿ ಪಿಎಚ್.ಡಿ ಪದವಿ ನೀಡಿದೆ. ಅವರು ರೇವಾ ಯುನಿವರ್ಸಿಟಿಯ ಸ್ಕೂಲ್ ಆಫ್ ಕಂಪ್ಯೂಟಿಂಗ್ ಇನ್ಫಾರ್ಮೇಶನ್ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ.ಪಾರ್ಥಸಾರಥಿ ಜಿ. ಮಾರ್ಗದರ್ಶನದಲ್ಲಿ ಈ ಸಂಶೋಧನೆ ನಡೆಸಿದ್ದರು. ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿ ಗ್ರಾಮದ ಆರ್.ಎಂ.ಪ್ರಭು, ಎಚ್.ಬಿ.ಲತಾ ಅವರ ಪುತ್ರ.