ಮಾಧವ ಕಾಮತ್‌ಗೆ ಡಾಕ್ಟರೇಟ್ ಪ್ರದಾನ

doctorate
ಮಾಧವ ಕಾಮತ್ ಆರ್ಬೆಟ್ಟು ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು.
Published on

ಕೊಕ್ಕರ್ಣೆ: ಮಾಧವ ಕಾಮತ್ ಆರ್ಬೆಟ್ಟು ಮಂಡಿಸಿದ ಎಕ್ಸ್‌ಪ್ಲೋರಿಂಗ್ ದ ಸ್ಪಿರಿಚ್ವಲ್ ಲೆಗಸಿ ಆಫ್ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ: ಹಿಸ್ 108 ನೋಬಲ್ ಡಿವೈನ್ ಕ್ವಾಲಿಟಿಸ್ ವಿಷಯದ ಸಂಶೋಧನಾ ಪ್ರಬಂಧಕ್ಕೆ ಫ್ಲೋರಿಡಾದ ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್ ಡಾಕ್ಟರೇಟ್ ಪ್ರದಾನಿಸಿದೆ.

ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಯೋಗ ಯುನಿವರ್ಸಿಟಿ ಆಫ್ ದಿ ಅಮೇರಿಕಾಸ್ ಇನ್ ಇಂಡಿಯಾ ಡಾ.ಯೋಗಿ ದೇವರಾಜ್ ಡಾಕ್ಟರೇಟ್ ಪದವಿ ಪ್ರದಾನಿಸಿದರು. ಮಾಧವ ಅವರು ಕಾಶೀಮಠದ ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಗಳ ಜೀವನ ಚರಿತ್ರೆ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಿದ್ದು, ಯೋಗಗುರು ರಾಘವೇಂದ್ರ ಪೈ ಮೈಸೂರು ಮಾರ್ಗದರ್ಶನ ಮಾಡಿದ್ದಾರೆ. ಇವರು ಬ್ರಹ್ಮಾವರ ತಾಲೂಕಿನ ಕಳ್ತೂರು ಸಂತೆಕಟ್ಟೆ ಆರ್ಬೆಟ್ಟಿನವರಾಗಿದ್ದು, ವಿಶ್ವ ಸಾರಸ್ವತ ಫೆಡರೇಶನ್‌ನಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net