ಸಿ.ಸಿ. ಟಿ.ವಿ, ಮನೆ ಉದ್ಘಾಟನಾ ಕಾರ್ಯಕ್ರಮ

cc tv
ಕುಂದಾಪುರ ಸೌತ್ ರೋಟರಿ ಕ್ಲಬ್ ವತಿಯಿಂದ ಕುಂದಾಪುರಕ್ಕೆ ಕೊಡುಗೆಯಾಗಿ ನೀಡಿದ ಮೂರು ಸಿ.ಸಿ. ಟಿ.ವಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
Published on

ಕುಂದಾಪುರ: ಕುಂದಾಪುರ ಸೌತ್ ರೋಟರಿ ಕ್ಲಬ್ ವತಿಯಿಂದ ಕುಂದಾಪುರಕ್ಕೆ ಕೊಡುಗೆಯಾಗಿ ನೀಡಿದ ಮೂರು ಸಿ.ಸಿ. ಟಿ.ವಿ ಮತ್ತು ಒಂದು ಮನೆ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಕುಂದಾಪುರ ರೋಟರಿ ಕ್ಲಬ್ ವತಿಯಿಂದ ಕುಂದಾಪುರ ಶಾಸ್ತ್ರೀ ಪಾರ್ಕ್, ಸಂಗಮ್ ಜಂಕ್ಷನ್ ಹಾಗೂ ತಲ್ಲೂರು ಜಂಕ್ಷನ್ ಹತ್ತಿರ ಸಂಚಾರಿ ಪೊಲೀಸ್ ಠಾಣೆಗಾಗಿ ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾ ಮತ್ತು ತಲ್ಲೂರಿನ ಮೂಕಾಂಬಿಕಾ ದೇವಾಡಿಗ ಅವರಿಗೆ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಮನೆಯನ್ನು ರೋಟರಿ ಜಿಲ್ಲಾ ಗವರ್ನರ್ ದೇವ್ ಆನಂದ ಉದ್ಘಾಟಿಸಿದರು.

ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ರಾಜೇಂದ್ರ ಶೆಟ್ಟಿ, ತಲ್ಲೂರು ಗ್ರಾಪಂ ಅಧ್ಯಕ್ಷ ಗಿರೀಶ್, ಜೋನಲ್ ಲೆಫ್ಟಿನೆಂಟ್ ಮಹೇಂದ್ರ ಶೆಟ್ಟಿ, ಕುಂದಾಪುರ ಸೌತ್ ರೋಟರಿ ಕ್ಲಬ್ ಅಧ್ಯಕ್ಷೆ ಜುಡಿತ್ ಮೆಂಡೊನ್ಸಾ, ಕಾರ್ಯದರ್ಶಿ ಭರತ್ ಶೆಟ್ಟು, ಕುಂದಾಪುರ ಟ್ರಾಫಿಕ್ ಎಸ್‌ಐ ಪ್ರಸಾದ ಕುಮಾರ್, ಡಾ.ಉಮೇಶ್ ಪುತ್ರನ್, ಯು.ಆರ್. ಶೆಣೈ, ಸಟ್ವಾಡಿ ವಿಜಯ ಶೆಟ್ಟಿ, ಸಚಿನ್ ನಕತ್ತಾಯ, ಅರುಣ್ ಮೆಂಡೊನ್ಸಾ, ಸತ್ಯನಾರಾಯಣ ಪುರಾಣಿಕ್, ದೇವರಾಜ್, ಸುರೇಶ ಪುರಾಣಿಕ್, ರೇಖಾ ದೇವ್ ಆನಂದ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಭರತ್ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net