ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಕ್ಲಿನಿಕ್​ಗೆ ಬಂದಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ವೈದ್ಯನ ಬಂಧನ| Arrest

ವಿಜಯವಾಣಿ (87)
Published on

ಬೆಂಗಳೂರು: ಚಿಕಿತ್ಸೆಗಾಗಿ ಕ್ಲಿನಿಕ್​ಗೆ ಬಂದಿದ್ದ 21 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 56 ವರ್ಷದ ಚರ್ಮರೋಗ ತಜ್ಞನನೊಬ್ಬನ್ನು ಮಂಗಳವಾರ(ಅ. 21) ಬೆಂಗಳೂರು ನಗರದಲ್ಲಿ ಬಂಧಿಸಲಾಗಿದೆ(Arrest) ಎಂದು ವರದಿಯಾಗಿದೆ.

ಡಾ. ಪ್ರವೀಣ್ ಬಂಧಿತನಾಗಿರುವ ಆರೋಪಿ ಚರ್ಮರೋಗ ತಜ್ಞ. ಅ. 18ರಂದು ಚರ್ಮದ ಸೋಂಕಿನ ಬಗ್ಗೆ ತೋರಿಸಲು ಬಂದಿದ್ದ ಯುವತಿಯ ದೂರಿನ ಮೇರೆ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಯುವತಿ ದೂರು ನೀಡಿದ ಪ್ರಕಾರ, ಚರ್ಮದ ಸೋಂಕಿನ ಬಗ್ಗೆ ತೋರಿಸಿಕೊಳ್ಳಲು ಡಾ. ಪ್ರವೀಣ್ ಅವರ ಕ್ಲಿನಿಕ್​ಗೆ ಹೋಗಿದ್ದೆ, ಈ ಪರೀಕ್ಷೆಯ ಸಮಯದಲ್ಲಿ ಬಲವಂತವಾಗಿ ನನ್ನ ಬಟ್ಟೆ ಬಿಚ್ಚಿಸಿದ್ದು, ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಜೊತೆಗೆ ಚುಂಬಿಸಿದ್ದಾನೆ. ಮುಂದುವರೆದು ಅಸಭ್ಯಕರವಾಗಿ ಮಾತನಾಡಿ, ಹೋಟೆಲ್​ನಲ್ಲಿ ಭೇಟಿಯಾಗುವಂತೆ ಸೂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಯುವತಿಯೂ ಕ್ಲಿನಿಕ್​ನಲ್ಲಿ ನಡೆದ ಘಟನೆಯನ್ನು ತನ್ನ ಕುಟುಂಬಕ್ಕೆ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ದೂರಿನನ್ವಯ ಪೊಲೀಸರು  ಬಿಎನ್‌ಎಸ್ ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು 79  ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ವೈದ್ಯರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net