ಮೊದಲ ರಾತ್ರಿಯಂದು ಹಾಲು ಕುಡಿಯುವುದೇಕೆ ನವದಂಪತಿ? ಈ ಆಚರಣೆ ಹಿಂದಿದೆ ಅಚ್ಚರಿ ಕಾರಣ! First Night

First Night
Published on

First Night : ಭಾರತ ವಿಭಿನ್ನ ಪದ್ಧತಿಗಳು ಮತ್ತು ಸಂಸ್ಕೃತಿಗಳನ್ನು ಅನುಸರಿಸುವ ದೇಶ. ಇಲ್ಲಿನ ವಿವಿಧ ಪ್ರದೇಶಗಳು ತಮ್ಮದೇಯಾದ ವಿಭಿನ್ನ ಪದ್ಧತಿಗಳು ಮತ್ತು ನಂಬಿಕೆಗಳನ್ನು ಹೊಂದಿವೆ ಮತ್ತು ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿವೆ. ಅಂತಹ ಆಚರಣೆಗಳಲ್ಲಿ ಮದುವೆ ಕೂಡ ಒಂದು.

ಮದುವೆಯಲ್ಲೂ ಕೂಡ ಆಯಾ ಪ್ರದೇಶಕ್ಕೆ ತಕ್ಕಂತೆ ವಿಭಿನ್ನ ಆಚರಣೆಗಳಿರುತ್ತವೆ. ಮದುವೆಯಾದ ಬಳಿಕ ನಡೆಯುವ ಮೊದಲ ರಾತ್ರಿಯೂ ಕೂಡ ಪ್ರಮುಖ ಆಚರಣೆಯಾಗಿದೆ. ಈ ಮೊದಲ ರಾತ್ರಿಯಂದು ವಧು, ಒಂದು ಕೈಯಲ್ಲಿ ಹಾಲಿನ ಲೋಟ ಹಿಡಿದು ವರನ ಕೋಣೆಯೊಳಗೆ ಬರುತ್ತಾಳೆ. ಈ ಪದ್ಧತಿ ಇಂದಿಗೂ ಮುಂದುವರೆದಿದೆ. ಇದನ್ನು ಏಕೆ ಆಚರಿಸಲಾಗುತ್ತದೆ ಎಂದು ಕೇಳಿದರೆ ಬಹುತೇಕ ಮಂದಿಗೆ ಉತ್ತರವೇ ಗೊತ್ತಿಲ್ಲ. ಹಿಂದಿನಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ನಾವು ಕೂಡ ಪಾಲಿಸುತ್ತೇವೆ ಎನ್ನುತ್ತಾರೆ. ಆದರೆ, ಹಾಲಿನ ಹಿಂದೆ ಒಂದು ಬಲವಾದ ಕಾರಣವೇ ಇದೆ. ಅದೇನೆಂದು ನಾವೀಗ ತಿಳಿದುಕೊಳ್ಳೋಣ.

ಕೆಲವು ಪ್ರದೇಶಗಳಲ್ಲಿ ಹಾಲು ಮಾತ್ರವಲ್ಲ, ಕೇಸರಿ, ಸಕ್ಕರೆ, ಅರಿಶಿನ, ಬಾದಾಮಿ ಇತ್ಯಾದಿಗಳನ್ನು ಸಹ ಹಾಲಿಗೆ ಸೇರಿಸಲಾಗುತ್ತದೆ. ಈ ರೀತಿ ಹಾಲು ಕುಡಿಯುವುದರಿಂದ ಏನು ಪ್ರಯೋಜನ ಎಂದು ನೋಡೋಣ? ಹಾಲು ಕುಡಿಯುವುದರಿಂದ ಸಂತೋಷ ಮತ್ತು ಮಾನಸಿಕ ಯೋಗಕ್ಷೇಮ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಹಾಲು ನೈಸರ್ಗಿಕ ನಿದ್ರೆಯನ್ನು ಉಂಟುಮಾಡುವ ಪಾನೀಯವಾಗಿದೆ. ಇದು ಅಮೈನೋ ಆಮ್ಲ ಟ್ರಿಪ್ಟೊಫಾನ್ ಅನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇವು ಉತ್ತಮ ನಿದ್ರೆಗೆ ಸಹಾಯ ಮಾಡುವ ಸಂಯುಕ್ತವಾಗಿವೆ.

ಇನ್ನು ಹಾಲಿಗೆ ಕೇಸರಿ ಸೇರಿಸುವುದರಿಂದ ಎಂಡಾರ್ಫಿನ್‌ಗಳು ಅಥವಾ ಸಂತೋಷದ ಹಾರ್ಮೋನ್ ಬಿಡುಗಡೆಯಾಗಲು ಸಹಾಯ ಮಾಡುತ್ತದೆ. ಮದುವೆ ಸಮಾರಂಭದ ನಂತರ ದಣಿದಿರುವ ನವವಿವಾಹಿತರಿಗೆ ಹಾಲು ಕುಡಿಯುವುದರಿಂದ ಶಕ್ತಿ ಮತ್ತು ರಾತ್ರಿಯ ಉತ್ತಮ ನಿದ್ರೆ ಸಿಗುತ್ತದೆ.

ಒಂದು ಲೋಟ ರುಚಿಕರವಾದ ಬೆಚ್ಚಗಿನ ಹಾಲು ಪ್ರಾರಂಭವಾಗುವ ವೈವಾಹಿಕ ಸಂಬಂಧಕ್ಕೆ ಬೆಚ್ಚನೆ ಅನುಭವ ನೀಡುತ್ತದೆ. ಅಲ್ಲದೆ, ಇದು ಮಾನಸಿಕ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಅರಿಶಿನ ಮತ್ತು ಕೇಸರಿ ಬೆರೆಸಿದ ಹಾಲು ಕೇವಲ ಮೊದಲ ರಾತ್ರಿಗೆ ಮಾತ್ರವಲ್ಲ. ಜೀವನದುದ್ದಕ್ಕೂ ಇದನ್ನು ಅಭ್ಯಾಸ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net