

ಬೆಂಗಳೂರು: ಕಿಚ್ಚ ಸುದೀಪ್ ( Sudeep ) ಸಾರಥ್ಯದಲ್ಲಿ ನಡೆಯುತ್ತಿರುವ ಬಿಗ್ಬಾಸ್ ( Bigg Boss ) ಕನ್ನಡ ಸೀಸನ್ 11ಗೆ 9.9 ಟಿಆರ್ಪಿ ಬಂದಿದೆ ಎಂದು ಬಿಗ್ಬಾಸ್ ತಂಡ ಘೋಷಿಸಿದ್ದ ಬೆನ್ನಲ್ಲೇ ಇದೀಗ ಸುದೀಪ್ ಕೂಡಾ ಮುಂದಿನ ಸೀಸನ್ಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುತ್ತಿದ್ದಂತೆ ಹತ್ತು ಹಲವು ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ. ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್. ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ’ ಎಂದು ಸುದೀಪ್ ಅವರು ಶಾಕಿಂಗ್ ವಿಷಯ ತಿಳಿಸಿದ್ದಾರೆ.
ಕಿಚ್ಚನ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು ಎಂಬ ಚರ್ಚೆಗಳು ಸಹ ಇದೀಗ ನಡೆಯುತ್ತಿವೆ. ಇದರ ನಡುವೆ ಕಿಚ್ಚನ ಈ ಖಡಕ್ ನಿರ್ಧಾರಕ್ಕೆ ಅವರಿಗಾದ ಅವಮಾನವೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇಂಥದ್ದೊಂದು ಗಂಭೀರ ಆರೋಪವನ್ನು ಕನ್ನಡಪರ ಹೋರಾಟಗಾರ ಹಾಗೂ ಬಿಗ್ಬಾಸ್ ಸೀಸನ್ 9ರ ಸ್ಪರ್ಧಿ ರೂಪೇಶ್ ರಾಜಣ್ಣ ಮಾಡಿದ್ದಾರೆ. ಆದರೆ ಇತ್ತು ಕಿಚ್ಚ ಯಾಕೆ ದಿಢೀರ್ ಎಂದು ಈ ನಿರ್ಧಾರ ತೆಗೆದುಕೊಂಡರು ಎನ್ನುವ ಮಾತು ಕೂಡಾ ಕೇಳಿ ಬಂದಿದೆ.
ಬಿಗ್ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರು ‘ಬಿಗ್ ಬಾಸ್’ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಸುದೀಪ್ ಜೊತೆ ಅವರು ಅನ್ಯೋನ್ಯತೆ ಹೊಂದಿದ್ದಾರೆ. ಅನೇಕ ಕಡೆಗಳಲ್ಲಿ ಸುದೀಪ್ ಹಾಗೂ ಚಕ್ರವರ್ತಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಸುದೀಪ್ ಅವರ ಜತೆ ಹೆಚ್ಚು ಆಪ್ತತೆ ಹೊಂದಿರುವವರಲ್ಲಿ ಇವರು ಕೂಡಾ ಒಬ್ಬರಾಗಿದ್ದಾರೆ. ಸುದೀಪ್ ಅವರಿಗೆ ಸಂಬಂಧಿತ ಸೋಶಿಯಲ್ ಮೀಡಿಯಾ ಹಾಗೂ ಇನ್ನಿತರ ಪರ್ಸನಲ್ ಕೆಲಸಗಳನ್ನು ಚಕ್ರವರ್ತಿ ನೋಡಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಹೀಗಾಗಿ ಸುದೀಪ್ ಹಾಗೂ ಬಿಗ್ಬಾಸ್ ಮಧ್ಯೆ ಏನಾಗಿದೆ? ಅವರ ದಿಢೀರ್ ನಿರ್ಧಾರಕ್ಕೆ ಕಾರಣವೇನು ಎನ್ನುವ ಅಸಲಿ ಮಾಹಿತಿ ಗೊತ್ತಿರುವ ಏಕೈಕ ವ್ಯಕ್ತಿ ಎಂದು ಯಾರಾದ್ರು ಇದ್ದರೆ ಅವರೆ ಚಕ್ರವರ್ತಿ ಎನ್ನುವ ಮಾತು ಕೂಡಾ ಮೂಲಗಳಿಂದ ತಿಳಿದು ಬಂದಿದೆ.
ಸುದೀಪ್ ಅವರು ಟ್ವೀಟ್ ಮಾಡುತ್ತಿದ್ದಂತೆ ಚಕ್ರವರ್ತಿ ಚಂದ್ರಚೂಡ್ ಕೂಡಾ ಟ್ವೀಟ್ ಮಾಡಿ, ದಾದಾ ಈ ನಿರ್ಧಾರದಿಂದ ನಿಮ್ಮ ಮೇಲಿನ ಗೌರವ ಹೆಚ್ಚಾಯಿತು ಎಂದು ರಿಟ್ವೀಟ್ ಮಾಡಿದ್ದಾರೆ.
ಇತ್ತ ಬಿಗ್ಬಾಸ್ ವೀಕ್ಷಕರು ಕಿಚ್ಚನ ಸಂಚಿಕೆ ನೋಡಲು ವೀಕೆಂಡ್ನಲ್ಲಿ ಮಿಸ್ ಮಾಡಿಕೊಳ್ಳುವುದು ಪಕ್ಕಾ ಹೌದು. ಸುದೀಪ್ ಅವರು ಇಲ್ಲದೆ ಬಿಗ್ಬಾಸ್ ಕಾರ್ಯಕ್ರಮವೇ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಸುದೀಪ್ ಅವರು ಮುಂದಿನ ದಿನಗಳಲ್ಲಿ ಏನಾದ್ರು ಈ ಕುರಿತಾಗಿ ಮತ್ತೆ ಸುದ್ದಿಗೊಷ್ಟಿ ಮಾಡಿ ಏನಾದ್ರು ಮಾಹಿತಿ ಬಿಟ್ಟುಕೊಡ್ತಾರಾ? ಅಥವಾ ಅಸಲಿ ಸಂಗತಿ ತಿಳಿದಿರುವ ಸುದೀಪ್ ಅವರ ಆಪ್ತ ಚಕ್ರವರ್ತಿ ಚಂದ್ರಚೂಡ್ ಏನಾದ್ರೂ ಮಾಹಿತಿ ಹಂಚಿಕೊಳ್ಳುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.