

ಬೆಂಗಳೂರು: ಖಾಸಗಿವಾಹಿಯಲ್ಲಿ ಪ್ರಸರವಾಗುತ್ತಿರುವ ಬಿಗ್ಬಾಸ್ ಕಾರ್ಯಕ್ರಮ ಹೆಚ್ಚಿನ ಜನಮನ್ನಣೆ ಪಡೆದರಿರುವ ಕಾರ್ಯಕ್ರಮವಾಗಿ ಮನ್ನಣೆ ಪಡೆಯುತ್ತಿದೆ. ತಮಿಳು. ತೆಲಗು, ಹಿಂದಿ, ಕನ್ನಡ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮಕ್ಕೆ ವೀಕ್ಷಕರಿಂದ ಉತ್ತಮ ಪ್ರತಿಕ್ರೀಯೆ ಕೂಡಾ ದೊರೆಯುತ್ತಿದೆ. ಕಿಚ್ಚ ಸುದೀಪ್ ( Sudeep ) ಸಾರಥ್ಯದಲ್ಲಿ ನಡೆಯುತ್ತಿರುವ ಬಿಗ್ಬಾಸ್ ಕನ್ನಡ ಸೀಸನ್ 11ಗೆ 9.9 ಟಿಆರ್ಪಿ ಬಂದಿದೆ ಎಂದು ಬಿಗ್ಬಾಸ್ ತಂಡ ಘೋಷಿಸಿದ್ದ ಬೆನ್ನಲ್ಲೇ ಇದೀಗ ಸುದೀಪ್ ಕೂಡಾ ಮುಂದಿನ ಸೀಸನ್ಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ. ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್. ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ’ ಎಂದು ಸುದೀಪ್ ಅವರು ಶಾಕಿಂಗ್ ವಿಷಯ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಅವರು ಅಧಿಕೃತವಾಗಿಯೇ ಇನ್ಮುಂದಿನ ದಿನಗಳಲ್ಲಿ ಬಿಗ್ಬಾಸ್ ನಿರೂಪಣೆ ತಾವು ಮಾಡುವುದಿಲ್ಲ ಎನ್ನುವ ನಿರ್ಧಾರ ತಿಳಿಸಿದ್ದಾರೆ. ಅವರ ಈ ಪೋಸ್ಟ್ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಆದರೆ ಈ ಪೋಸ್ಟ್ ವೈರಲ್ ಆಗುತ್ತಿದ್ದ ಬೆನ್ನಲ್ಲೇ ಇದೀಗ ಸುದೀಪ್ ಅವರ ಈ ನಿರ್ಧಾರಕ್ಕೆ ಕೆಲವರು ಸಂತೋಷ ಪಟ್ಟಿದ್ದಾರೆ. ಬಿಗ್ಬಾಸ್ ವೀಕ್ಷಕರಿಗೆ ಈ ವಿಚಾರವಾಗಿ ಸಖತ್ ಬೇಸರ ಕೂಡಾ ಉಂಟಾಗಿದೆ.
ಬಿಗ್ಬಾಸ್ ಆರಂಭದಿಂದ ನಿರೂಪಣೆ ಮಾಡುತ್ತಾ ಕಾರ್ಯಕ್ರಮವನ್ನು ಚೆಂದಗಾಣಿಸಿ ಕೊಡುತ್ತಿದ್ದ ಕೀರ್ತಿ ಕಿಚ್ಚ ಅವರಿಗೆ ಸಲ್ಲುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಬಿಗ್ಬಾಸ್ ಸೀಸನ್ 10ರ ಕೊನೆಯ ಸಂಚಿಕೆಯಲ್ಲಿಯೇ ಕಿಚ್ಚ ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಹಿಂಟ್ ಕೂಡಾ ಕೊಟ್ಟಿದ್ದರು. ಈ ವರ್ಷ ಬಿಗ್ಬಾಸ್ ಕಾರ್ಯಕ್ರಮ ಸೀಸನ್ 11 ಪ್ರಾರಂಭವಾಗುವಾಗ ಕಿಚ್ಚನ ಜಾಗದಲ್ಲಿ ನಿಂತು ಯಾರು ನಿರೂಪಣೆ ಮಾಡುತ್ತಾರೆ ಎನ್ನುವ ಪ್ರಶ್ನೆ ಕೂಡಾ ಮುನ್ನೆಗೆ ಬಂದಿತ್ತು. ಕಿಚ್ಚ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮಾತು ಕೂಡಾ ಕೇಳಿ ಬಂದಿತ್ತು. ಇನ್ನೇನು ಕಾರ್ಯಕ್ರಮ ಪ್ರಾರಂಭವಾಗಲು ಕೆಲವು ದಿನಗಳು ಬಾಕಿ ಇರುವಾಗ ಕಿಚ್ಚ ಮತ್ತೆ ಬಿಗ್ಬಾಸ್ನಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿತ್ತು.
ಬಿಗ್ಬಾಸ್ ಕಾರ್ಯಕ್ರಮ ಒಳ್ಳೆಯ ಆರಂಭವನ್ನು ಪಡೆದುಕೊಂಡು ಸೂಪರ್ ಹಿಟ್ ಕಾರ್ಯಕ್ರಮವಾಗಿ ಹೊರ ಹೊಮ್ಮುತ್ತಿದೆ. ಆದರೆ ಬಿಗ್ಬಾಸ್ ಪ್ರಾರಂಭವಾಗಿ 2 ವಾರಕ್ಕೆ ಕಿಚ್ಚ ಮುಂದಿನ ಸೀಸನ್ನಲ್ಲಿ ತಾವು ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿರುವುದು ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರೂಪೇಶ್ ರಾಜಣ್ಣ.. ಕೆಲವರ ಆಟಕ್ಕೆ ಕಿಚ್ಚ ಸುದೀಪ್ ಬಿಗ್ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನವನ್ನು ಸಹಿಸಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ಬಾಸ್ ಬಿಡಿ, ಇಲ್ಲ ಬಿಗ್ಬಾಸ್ ನಿಲ್ಲಬೇಕು. ಅಸಲಿ ವಿಷಯ ಮಾತಾಡ್ತೀನಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿ ಹೊತ್ತುಕೊಂಡ ದಿನದಿಂದಲೂ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡಲು ಕೊಂಚ ಕಷ್ಟವಾಗಿದೆ. ಹೀಗಾಗಿ ವರ್ಷಕ್ಕೆ ಒಂದು ಸಿನಿಮಾ ಮಾಡುವುಕ್ಕೂ ಸಮಯ ಸಿಗದಂತೆ ಆಗಿದೆ. ವಾರದಲ್ಲಿ ಹೆಚ್ಚಿನ ಸಮಯ ಬಿಗ್ಬಾಸ್ಗಾಗಿಯೇ ಇಡ ಬೇಕಾಗಿದೆ. ಹೀಗಾಗಿ ಕಿಚ್ಚನ ಸಿನಿಮಾ ಮಾಡುವುದು ಕಡಿಮೆ ಆಗಿದೆ ಎನ್ನುವ ಮಾತು ಅಭಿಮಾನಿಗಳಲ್ಲಿದೆ.
ಕಿಚ್ಚ ಸುದೀಪ್ ಅವರು ಇನ್ಮುಂದೆ ಬಿಗ್ಬಾಸ್ ನಿರೂಣೆ ಮಾಡುವುದಿಲ್ಲ ಎನ್ನುವ ಮಾತು ಯಾರಿಗೆ ಎಷ್ಟು ಬೇಸರ ತಂದಿದ್ಯೋ ಗೊತ್ತಿಲ್ಲ. ಆದರೆ ಕಿಚ್ಚನ ಫ್ಯಾನ್ಸ್ ಮಾತ್ರ ಸಖತ್ ಖುಷಿಯಾಗಿದ್ದಾರೆ. ಇನ್ಮುಂದೆ ಕಿಚ್ಚ ಸಿನಿಮಾಗಳಿಗೆ ಹೆಚ್ಚು ಸಮಯ ಕೊಡುತ್ತಾರೆ. ವರ್ಷಕ್ಕೆ ಒಮ್ಮೆ ಆದ್ರೂ ತೆರೆ ಮೇಲೆ ನಾವು ನೆಚ್ಚಿನ ನಟನನ್ನು ನೋಡಬಹುದು ಎಂದು ಕುಣಿದು ಕುಪ್ಪಳಿಸುತ್ತಿದ್ದಾರೆ.
ಆದರೆ ಇತ್ತ ಬಿಗ್ಬಾಸ್ ವೀಕ್ಷಕರು ಕಿಚ್ಚನ ಸಂಚಿಕೆ ನೋಡಲು ವೀಕೆಂಡ್ನಲ್ಲಿ ಮಿಸ್ ಮಾಡಿಕೊಳ್ಳುವುದು ಪಕ್ಕಾ ಹೌದು. ಸುದೀಪ್ ಅವರು ಇಲ್ಲದೆ ಬಿಗ್ಬಾಸ್ ಕಾರ್ಯಕ್ರಮವೇ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.