

Animal : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ.
ಮನುಷ್ಯನಿಂದ ಹಿಡಿದು ಎಲ್ಲ ಪ್ರಾಣಿಗಳಲ್ಲೂ ಒಂದೊಂದು ವಿಶೇಷತೆ ಮತ್ತು ವಿಚಿತ್ರ ಗುಣಗಳಿರುತ್ತವೆ. ಅವುಗಳ ಬಗ್ಗೆ ತಿಳಿದಾಗ ನಮ್ಮ ಹುಬ್ಬೇರುತ್ತದೆ. ಕೆಲವೊಂದು ಜೀವಿಗಳ ಲಕ್ಷಣಗಳು ಎಷ್ಟೊಂದು ವಿಚಿತ್ರವಾಗಿವೆ ಅಂದರೆ ನಿಜಕ್ಕೂ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಇದೀಗ ಅಂಥದ್ದೇ ಜೀವಿಯೊಂದರ ಬಗ್ಗೆ ತಿಳಿಸಿಕೊಡುತ್ತೇವೆ.
ಈ ಜಗತ್ತಿನ ಪ್ರತಿಯೊಂದು ಜೀವಿಗೂ ತನ್ನದೇ ಆದ ವಿಶಿಷ್ಟ ಲಕ್ಷಣಗಳಿವೆ. ಸಸ್ತನಿಗಳು ಮಾತ್ರವಲ್ಲ, ಮೊಟ್ಟೆಗಳಿಂದ ಮರಿ ಮಾಡುವ ಎಲ್ಲ ಜೀವಿಗಳು ತಮ್ಮ ಹೊಟ್ಟೆಯಲ್ಲಿ ಭ್ರೂಣವನ್ನು ಹೊತ್ತುಕೊಂಡು ನಂತರ ತಮ್ಮ ಮರಿಗಳಿಗೆ ಜನ್ಮ ನೀಡುತ್ತವೆ. ಇವುಗಳ ನಡುವೆ ತನ್ನ ಮರಿಗಳಿಗೆ ಬಾಯಿಯ ಮೂಲಕ ಜನ್ಮ ನೀಡುವ ಜೀವಿ ಇದೆ ಎಂದರೆ ನಂಬಲು ಸಾಧ್ಯವೇ? ಈ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಆ ಜೀವಿ ಬೇರೆ ಯಾವುದು ಅಲ್ಲ, ಅದು ಕಪ್ಪೆ, ಕಪ್ಪೆಗಳು ಸಿಹಿನೀರಿನಲ್ಲಿಯೂ ಬದುಕಬಲ್ಲವು ಎಂಬುದು ಎಲ್ಲರಿಗೂ ತಿಳಿದಿದೆ. ಡಾರ್ವಿನ್ ಹೆಸರಿನ ಕಪ್ಪೆಗಳು ತಮ್ಮ ಧ್ವನಿಪೆಟ್ಟಿಗೆಯಲ್ಲಿ ಮೊಟ್ಟೆಗಳನ್ನು ಬೆಳೆಸಿಕೊಳ್ಳುತ್ತವೆ ಮತ್ತು ಬಾಯಿಯ ಮೂಲಕವೇ ಮೊಟ್ಟೆಗಳಿಂದ ಮರಿಗಳಿಗೆ ಜನ್ಮ ನೀಡುತ್ತವೆ
ಮೊಟ್ಟೆಯು ವಯಸ್ಕ ಕಪ್ಪೆಯಾಗಿ ಬೆಳೆಯುವ ಪ್ರಕ್ರಿಯೆಯನ್ನು ಮೆಟಾಮಾರ್ಫಾಸಿಸ್ ಎಂದು ಕರೆಯಲಾಗುತ್ತದೆ. ಈ ಕಪ್ಪೆಯು ಆರಂಭದಲ್ಲಿ ಮೀನು ಮರಿಯಂತೆ ಕಾಣುತ್ತದೆ. ಇದಕ್ಕೆ ಕಾಲುಗಳಿಲ್ಲ. ಇದು ಕಿವಿರುಗಳ ಮೂಲಕ ಮಾತ್ರ ಉಸಿರಾಡುತ್ತದೆ. ನಿಧಾನವಾಗಿ, ಅದರ ಕಾಲುಗಳು ಬೆಳೆಯಲು ಪ್ರಾರಂಭಿಸುತ್ತವೆ. ಡಾರ್ವಿನ್ ಕಪ್ಪೆ ಜಾತಿಯ ಗಂಡು ಕಪ್ಪೆ 2 ಗ್ರಾಂ ಗಿಂತ ಕಡಿಮೆ ತೂಕವಿರುತ್ತದೆ ಮತ್ತು 3 ಸೆಂಟಿಮೀಟರ್ ಉದ್ದವಿರುತ್ತದೆ.
ಅಂದಹಾಗೆ ಕಪ್ಪೆಗಳು ಮಾತ್ರವಲ್ಲದೆ ಕೆಲವು ಮೀನುಗಳು ಕೂಡ ಬಾಯಿಯ ಮೂಲಕ ತಮ್ಮ ಮರಿಗಳಿಗೆ ಜನ್ಮ ನೀಡುತ್ತವೆ. (ಏಜೆನ್ಸೀಸ್)