

Dating | ಸೋಶಿಯಲ್ ಮೀಡಿಯಾವು ಇಂದಿನ ಜನರಿಗೆ ಸ್ನೇಹಿತರನ್ನು ಮಾಡಿಕೊಳ್ಳಲು ಸುಲಭ ಮಾರ್ಗವಾಗಿದೆ. ಇನ್ನೂ ಈ ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾಗಿ, ಸ್ನೇಹಿತರಾಗಿ, ಎಷ್ಟೋ ಜನರು ಮದುವೆಯನ್ನೂ ಕೂಡ ಆಗಿದ್ದಾರೆ. ಇಂತಹ ಮದುವೆ, ಸ್ನೇಹ ಎಷ್ಟೋ ಬಾರಿ ಕೆಲವರನ್ನು ಸಂಕಷ್ಟಕ್ಕೆ ನೂಕಿದೆ. ಇನ್ನೂ ಕಲವರಿಗೆ ಅಪಾಯವನ್ನೂ ಸಹ ಇದು ತಂದೊಡ್ಡಿದೆ. ಅದೇ ರೀತಿ ಈ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಚಿತ್ರ ಮತ್ತು ಭಯಾನಕ ಘಟನೆ ನಡೆದಿದೆ.
26 ವರ್ಷದ ವ್ಯಕ್ತಿಯೊಬ್ಬ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಹುಡುಗಿಗೆ ಆಕೆ ಹೇಳಿದಂತೆ ಅವಳಿಗೆ 27 ವರ್ಷ ಅಲ್ಲ, 47 ವರ್ಷ ಎಂದು ತಿಳಿದು ಆಘಾತಕ್ಕೊಳಗಾಗಿದ್ದಾನೆ. ಆ ವ್ಯಕ್ತಿ ತನ್ನ ವಿಷಾದದ ಕಥೆಯನ್ನು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾನೆ, ಅಲ್ಲಿ ಆ ಮಹಿಳೆ ತಾನು ಏಪ್ರಿಲ್ 1998 ರಲ್ಲಿ ಜನಿಸಿದ್ದೇನೆ ಎಂದು ಹೇಳುತ್ತಿದ್ದಳು, ಆದರೆ ಅವಳ ಲ್ಯಾಪ್‌ಟಾಪ್ಅನ್ನು ಪರಿಶೀಲಿಸಿದಾಗ, ಅವಳ ಪಾಸ್‌ಪೋರ್ಟ್ ಅವನಿಗೆ ಸಿಕ್ಕಿತು, ಅದು ಅವಳು 1977 ರಲ್ಲಿ ಜನಿಸಿದ್ದಾಳೆಂದು ತೋರಿಸಿದೆ.
ನಾನು ನನ್ನ ಗೆಳತಿಯೊಂದಿಗೆ 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದೇನೆ.ಆಕೆ 50ಕ್ಕೆ ಸಮೀಪದಲ್ಲಿರುವಂತೆ ಕಾಣಿಸುತ್ತಿರಲಿಲ್ಲ, ಆಕೆ 27 ವರ್ಷದವಳಂತೆಯೇ ಕಾಣಿಸುತ್ತಿದ್ದಿದ್ದರಿಂದ ಆಕೆಯ ಮೇಲೆ ನನಗೆ ಯಾವುದೇ ಸಂಶಯವಿರಲಿಲ್ಲ. ಆದರೆ ತಮ್ಮ ಈ 4 ವರ್ಷಗಳ ಪಯಣದುದ್ದಕ್ಕೂ ಕೆಲವು ಅಪಾಯಕಾರಿ ಸೂಚನೆಗಳಿದ್ದವು ಎಂಬುದನ್ನು ಆತ ಹೇಳಿಕೊಂಡಿದ್ದಾನೆ. ನಾವು ಒಟ್ಟಿಗೆ ಇದ್ದ ಸಮಯದಲ್ಲಿ ಕೆಲವು ಅಡೆತಡೆಗಳು ಇದ್ದವು, ಏಕೆಂದರೆ ನನಗೆ ಈ ವಿಚಾರದಲ್ಲಿ ಅನುಭವ ಇರಲಿಲ್ಲ, ಕಾರಣ ಇದು ನನ್ನ ಮೊದಲ ದೀರ್ಘಾವಧಿಯ ಸಂಬಂಧವಾಗಿತ್ತು. ಆ ಮಹಿಳೆ ತಾನು ಹೇಗೆ ಕಾಣುತ್ತೇನೆ ಎಂಬುದರ ಬಗ್ಗೆ ಬಹಳ ಹೆಮ್ಮೆ ಇತ್ತು. ಮತ್ತು ಅವಳ ಎಲ್ಲಾ ಸ್ನೇಹಿತರು 27 ವರ್ಷಕ್ಕಿಂತ ಮೇಲ್ಪಟ್ಟವರೇ ಆಗಿದ್ದರು ಎಂದು ಹೇಳಿದರು.
ಪ್ರತಿಬಾರಿಯೂ ನಾನು ಅವಳಿಗೆ ಪಾಸ್‌ಪೋರ್ಟ್/ಐಡಿ ಮುಂತಾದ ಯಾವುದೇ ದಾಖಲೆಗಳನ್ನು ತೋರಿಸಲು ಕೇಳಿದಾಗಲೆಲ್ಲಾ ಅವಳು ಮೂರ್ಖತನದ ನೆಪಗಳನ್ನು ನೀಡಿ ವಿಷಯವನ್ನು ತಪ್ಪಿಸಲು ಪ್ರಯತ್ನಿಸುತ್ತಾ ನನಗೆ ತೋರಿಸಲು ನಿರಾಕರಿಸುತ್ತಿದ್ದಳು ಎಂದು ಅವನು ಬರೆದುಕೊಂಡಿದ್ದಾನೆ. ತಾವು ಭೇಟಿಯಾಗಿ ಡೇಟಿಂಗ್ ಪ್ರಾರಂಭಿಸುವ ಕೆಲವೇ ತಿಂಗಳುಗಳ ಮೊದಲು ಕ್ಲಿಕ್ ಮಾಡಿದ ಪಾಸಿಟಿವ್ ಗರ್ಭಧಾರಣೆಯ ಪರೀಕ್ಷೆಯ ಚಿತ್ರವೂ ತನಗೆ ಸಿಕ್ಕಿತು ಎಂದು ಆ ಯುವಕ ಸೋಶಿಯಲ್ ಮೀಡಿಯಾ ರೆಡಿಟ್‌ನಲ್ಲಿ ತನ್ನ ನೋವನ್ನು ಹಂಚಿಕೊಂಡಿದ್ದಾನೆ.
ನೆಟ್ಟಿಗರ ಕಮೆಂಟ್ ಏನು?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಆತನಿಗೆ ನೂರಾರು ನೂರಾರು ಕಾಮೆಂಟ್‌ಗಳು ಬಂದವು. ಒಬ್ಬ "ಇದು ನಿಜವಾಗಿದ್ದರೆ ಬ್ರೇಕ್ ಅಪ್ ಮಾಡಿ. ಅವಳು ನಿನಗೆ ನಿರಂತರವಾಗಿ ಸುಳ್ಳು ಹೇಳುತ್ತಲೇ ಇದ್ದಾಳೆ. ಅವಳು ನಿನ್ನಿಂದ ಬೇರೆ ಯಾವ ವಿಷಯಗಳನ್ನು ಮರೆಮಾಡಿದ್ದಾಳೆಂದು ಯಾರಿಗೆ ತಿಳಿದಿದೆ" ಎಂದು ಒಬ್ಬ ಬಳಕೆದಾರರು ಹೇಳಿದರು. ಮತ್ತೊಬ್ಬ "ಬ್ರೋ ಇದು ನಿಜಕ್ಕೂ ಭಯಾನಕವಾಗಿದೆ. ಇದು ನಿಜವಾಗಿದ್ದರೆ, ಈ ಮಹಿಳೆ ಅಕ್ಷರಶಃ ಮನರೋಗಿ ಮತ್ತು ಹೆಚ್ಚು ಆಳವಾದ ಮತ್ತು ಹಾನಿಕಾರಕ ಸುಳ್ಳುಗಳನ್ನು ಹೇಳುವ ಸಾಮರ್ಥ್ಯ ಹೊಂದಿದ್ದಾಳೆ. ಯಾರಿಗಾದರೂ ಹೀಗೆ ಮಾಡುವುದು... ನಾಲ್ಕು ವರ್ಷಗಳ ಕಾಲ... ಕಪಟತನ." ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)