ರಾಕುಲ್ ಪ್ರೀತ್​ಗೆ ಸಾಂತಾಕ್ಲಾಸ್ ಕೊಟ್ಟ ಗಿಫ್ಟ್ ಏನು ಗೊತ್ತಾ?

singh
Published on

ಮುಂಬೈ: ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ರಾಕುಲ್‌ ಪ್ರೀತ್‌ ಸಿಂಗ್‌ ಮುಖ್ಯವಾಗಿ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಹಿಂದಿ ಭಾಷೆಯ ಯಾರಿಯಾಂ ಚಿತ್ರದ ಮೂಲಕ ಪ್ರಸಿದ್ಧಿಯನ್ನು ಪಡೆದ ಈ ನಟಿ ತಮಿಳು ಚಿತ್ರರಂಗದಲ್ಲಿ ಸಹ ಹೆಸರು ಮಾಡಿದ್ದಾರೆ.ಈ ನಟಿಗೆ ಒಬ್ಬ ಪ್ರೇಮಿಯೂ ಇದ್ದು, ಕ್ರಿಸ್​ಮಸ್​ ಶುಭಾಷಯ ಹೇಳಿದ್ದಾರೆ. ಇದನ್ನು ನೋಡಿದ ಈ ಕುರಿತು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ಇಷ್ಟಕ್ಕೂ ತನ್ನ ಪ್ರೇಮಿಗೆ ಏನೆಂದು ಹೇಳಿದ್ದಾರೆಂದರೆ...

'ನೀನು ನನಗೆ ಸಾಂಟಾ ಕೊಟ್ಟ ಉಡುಗೊರೆ. ನಿನ್ನ ನಗು, ನಿನ್ನ ಅನುಕಂಪ.. ನಿನ್ನ ದಯೆ, ನಿನ್ನ ಪ್ರೀತಿ ನನಗೆ ಆಶೀರ್ವಾದ. ಜನ್ಮದಿನದ ಶುಭಾಶಯಗಳು ಮಗೂ.. ಇನ್ಮುಂದೆ ಪ್ರತಿದಿನ ನಿಮಗೆ ಬೇಕಾದುದೆಲ್ಲ ಹೇರಳವಾಗಿ ಸಿಗಲಿ.

ಹ್ಯಾಪಿ ಕ್ರಿಸ್ಮಸ್...' ಎಂದು ತನ್ನ ಪ್ರೇಮಿಗೆ ರಾಕುಲ್‌ಪ್ರೀತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಕ್ರಿಸ್‌ಮಸ್ ತನ್ನ ಗೆಳೆಯ ಜಾಕಿ ಭಗ್ನಾನಿ ಅವರ ಜನ್ಮದಿನವೂ ಆಗಿರುವುದರಿಂದ, ರಾಕುಲ್ ಪ್ರೀತ್ ತನ್ನ ಸಾಮಾಜಿಕ ಮಾಧ್ಯಮದ ಮೂಲಕ ಪತ್ರಗಳ ಮೂಲಕ ತನ್ನ ಪ್ರೀತಿಯನ್ನು ಸುರಿಸಿದ್ದಾಳೆ.

ಈ ಸಂದರ್ಭದಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. 'ನಮ್ಮ ಪ್ರೀತಿಗೆ ಎರಡು ವರ್ಷ. ಅವರು ಕ್ರಿಸ್ಮಸ್ ದಿನದಂದು ಜನಿಸಿದರು. ಸರಿಯಾಗಿ ಎರಡು ವರ್ಷಗಳ ಹಿಂದೆ ಇದೇ ದಿನ ನಾವು ಪ್ರೀತಿಯಲ್ಲಿ ಬಿದ್ದೆವು. ಹಾಗಾಗಿ ಇದು ನಮಗೆ ವಿಶೇಷ ದಿನ' ಎಂದಿದ್ದಾರೆ ರಾಕುಲ್.

ಅಭಿಮಾನಿಗಳು ಮದುವೆ ಯಾವಾಗ? ಎಂದು ಕೇಳಿದಾಗ.. 'ಆಗ ಯೇಸು ಬಂದಾಗ..' ಎಂದು ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net