More

    ಕೊನೆಗೂ ಮುಂಬೈ ತಲುಪಿದ ವಿಮಾನ: 276 ಪ್ರಯಾಣಿಕರು ವಾಪಸ್​- 27 ಭಾರತೀಯರು ಇನ್ನೂ ಫ್ರಾನ್ಸ್‌ನಲ್ಲಿರುವುದೇಕೆ?

    ಮುಂಬೈ: ಮಾನವ ಕಳ್ಳಸಾಗಣೆ ಆರೋಪದ ಮೇಲೆ ಫ್ರಾನ್ಸ್ ನಲ್ಲಿ ತಡೆಹಿಡಿಯಲಾಗಿದ್ದ ರೊಮೇನಿಯನ್ ವಿಮಾನ ಕೊನೆಗೂ ಮುಂಬೈ ತಲುಪಿದೆ. ದುಬೈನಿಂದ ನಿಕರಾಗುವಾಗೆ 303 ಭಾರತೀಯರನ್ನು ಹೊತ್ತ ಲೆಜೆಂಡ್ ಏರ್‌ಲೈನ್ಸ್ ವಿಮಾನವು ಇದೇ ತಿಂಗಳ 22 ರಂದು ಇಂಧನಕ್ಕಾಗಿ ಫ್ರಾನ್ಸ್‌ನ ವ್ಯಾಟ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಆದರೆ, ಮಾನವ ಕಳ್ಳಸಾಗಣೆ ಶಂಕೆಯ ಮೇರೆಗೆ ಅಧಿಕಾರಿಗಳು ವಿಮಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

    ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡ ಇಸ್ರೇಲ್​ ನೌಕೆ ಜತೆ ಸಂಪರ್ಕ: ಡ್ರೋನ್​ ದಾಳಿಯ ಕುರಿತು ನೌಕಾಪಡೆಯಿಂದ ತನಿಖೆ
    ಭಾರತೀಯ ರಾಯಭಾರಿ ಕಚೇರಿಯ ಮಧ್ಯಪ್ರವೇಶದಿಂದ ಸಮಸ್ಯೆ ಬಗೆಹರಿದಿದೆ. ನಾಲ್ಕು ದಿನಗಳ ಬಳಿಕ ಮಂಗಳವಾರ ಮುಂಜಾನೆ 4 ಗಂಟೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಇದರಲ್ಲಿ 276 ಭಾರತೀಯರಿದ್ದಾರೆ.

    ಕೆಲವು ಪ್ರಯಾಣಿಕರು ಭಾರತಕ್ಕೆ ಮರಳಲು ಇಷ್ಟಪಡದ ಕಾರಣ ವಿಮಾನ ತಡವಾಗಿ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ 25 ಪ್ರಯಾಣಿಕರು ಫ್ರಾನ್ಸ್‌ನಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

    ಭಾರತೀಯ ಪ್ರಯಾಣಿಕರು ಮಧ್ಯ ಅಮೆರಿಕವನ್ನು ತಲುಪಲು ಪ್ರವಾಸವನ್ನು ಯೋಜಿಸಿರಬಹುದು ಎಂದು ಶಂಕಿಸಲಾಗಿದೆ. ಅಕ್ರಮ ವಲಸೆ ಶಂಕೆಯ ಮೇಲೆ ಫ್ರೆಂಚ್ ಅಧಿಕಾರಿಗಳು ಶುಕ್ರವಾರ ಇಬ್ಬರನ್ನು ಬಂಧಿಸಿದ್ದರು. ಕಳ್ಳಸಾಗಣೆಯಲ್ಲಿ ತನಗೆ ಯಾವುದೇ ಸಂಬಂಧವಿಲ್ಲ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.

    ರೊಮೇನಿಯನ್ ಕಂಪನಿ ಲೆಜೆಂಡ್ ಏರ್‌ಲೈನ್ಸ್ ನಿರ್ವಹಿಸುವ ಎ340 ವಿಮಾನವು ಗುರುವಾರ 303 ಭಾರತೀಯ ಪ್ರಯಾಣಿಕರೊಂದಿಗೆ ದುಬೈನಿಂದ ನಿಕರಾಗುವಾಗೆ ಹೊರಟಿತ್ತು. ಪ್ಯಾರಿಸ್‌ನಿಂದ ಪೂರ್ವಕ್ಕೆ 150 ಕಿಲೋಮೀಟರ್ ದೂರದಲ್ಲಿರುವ ಫ್ರಾನ್ಸ್‌ನ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಲು ವಿಮಾನವನ್ನು ಇಳಿಸಲಾಯಿತು.

    ಆದರೆ, ಅಪರಿಚಿತ ವ್ಯಕ್ತಿಗಳಿಂದ ‘ಮಾನವ ಕಳ್ಳಸಾಗಣೆ’ ನಡೆಯುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಫ್ರಾನ್ಸ್ ಅಧಿಕಾರಿಗಳು ವಿಮಾನವನ್ನು ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಪ್ರಯಾಣಿಕರನ್ನು 2ದಿನ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿದರು. ತನಿಖೆಯ ನಂತರ, ಸಂಬಂಧಿತ ಅಧಿಕಾರಿಗಳು ಇತ್ತೀಚೆಗೆ ವಿಮಾನ ಪ್ರಯಾಣಕ್ಕೆ ಸಂಪೂರ್ಣ ಪರವಾನಗಿಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಪ್ರಯಾಣಿಕರಲ್ಲಿ 11 ಮಕ್ಕಳು ಒಬ್ಬರೇ ಪ್ರಯಾಣಿಸುತ್ತಿದ್ದರು.

    ಸಿಂಹ, ಘೇಂಡಾಮೃಗಗಳೊಂದಿಗೆ ಸೆಲ್ಫಿ.. ವನ್ಯಜೀವಿ ಸಫಾರಿಯಲ್ಲಿ ಭಾರತೀಯ ಕ್ರಿಕೆಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts