More

    ಸಿಂಹ, ಘೇಂಡಾಮೃಗಗಳೊಂದಿಗೆ ಸೆಲ್ಫಿ.. ವನ್ಯಜೀವಿ ಸಫಾರಿಯಲ್ಲಿ ಭಾರತೀಯ ಕ್ರಿಕೆಟಿಗರು!

    ಕೇಪ್ ಟೌನ್(ದಕ್ಷಿಣ ಆಫ್ರಿಕ): ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಡಿ.26ರಿಂದ ಆರಂಭವಾಗಲಿದ್ದು, ಸಫಾರಿ ನೆಲದಲ್ಲಿ ಎಟುಕದ ದ್ರಾಕ್ಷಿಯಂತಾಗಿರುವ ಟೆಸ್ಟ್ ಸರಣಿಯನ್ನು ದಕ್ಕಿಸಿಕೊಳ್ಳಲು ಭಾರತ ತಂಡ (ಟೀಂ ಇಂಡಿಯಾ) ನೆಟ್​ಪ್ರಾಕ್ಟೀಸ್​ನಲ್ಲಿ ಬೆವರು ಹರಿಸುತ್ತಿದೆ. ಸೆಂಚುರಿಯನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿಶ್ರಮಿಸಲು ಟೀಮ್ ಇಂಡಿಯಾ ವೈಲ್ಡ್ ಲೈಫ್ ಸಫಾರಿಗೆ ತೆರಳಿತ್ತು.

    ಇದನ್ನೂ ಓದಿ: ಕಾರಿಯಪ್ಪ ಜತೆ ಲವ್​​; ಕಹಾನಿ ಬಿಚ್ಚಿಟ್ಟ ಯುವತಿ
    ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಜತೆ ತಂಡದ ಸದಸ್ಯರು ಕಾಡು ಪ್ರಾಣಿಗಳ ಸವಾರಿಯಲ್ಲಿ ವಿಹರಿಸಿದರು.

    ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಸಿಂಹದೊಂದಿಗೆ ಸೆಲ್ಫಿ ತೆಗೆದುಕೊಂಡರು. ನಂತರ, ದ್ರಾವಿಡ್ ಮತ್ತು ಇತರರು ಬೃಹತ್ ಘೇಂಡಾಮೃಗದೊಂದಿಗೆ (ರೈನೋ) ಚಿತ್ರ ತೆಗೆದರು. ಸಫಾರಿ ಪ್ರವಾಸದ ಫೋಟೋಗಳನ್ನು ಗಿಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
    “ವಿಶ್ವದ ಅತ್ಯುತ್ತಮ ಕ್ರಿಕೆಟಿಗರೊಂದಿಗೆ ವನ್ಯಜೀವಿಗಳನ್ನು ವೀಕ್ಷಿಸುವುದು ಉತ್ತಮ ಭಾವನೆ. ಈ ಅದ್ಭುತ ಕ್ಷಣಗಳು ನಮ್ಮ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುತ್ತವೆ,’’ ಎಂದು ಫೀಲ್ಡಿಂಗ್ ಕೋಚ್ ದಿಲೀಪ್ ಹೇಳಿದ್ದಾರೆ. ಸದ್ಯ ಈ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.

    ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಡಿ.26 ರಂದು ಸೆಂಚುರಿಯನ್ ಮೈದಾನದಲ್ಲಿ ನಡೆಯಲಿದೆ. ಆ ಬಳಿಕ ಎರಡನೇ ಟೆಸ್ಟ್ ಜ.3ರಂದು ಕೇಪ್ ಟೌನ್‌ನಲ್ಲಿ ಆರಂಭವಾಗಲಿದೆ. ಬಲ ಬೆರಳಿನ ನೋವಿನಿಂದಾಗಿ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದ ರುತುರಾಜ್ ಗಾಯಕ್ವಾಡ್ ಬದಲಿಗೆ ಬಂಗಾಳದ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ಅವರನ್ನು ಆಯ್ಕೆ ಮಾಡಿರುವುದು ತಿಳಿದ ಸಂಗತಿಯೇ.

    ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಶ್ವಿನ್, ಜಡೇಜಾ, ಶರ್ತುಲ್ ಠಾಕೂರ್, ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ) , ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿಕೆಟ್ ಕೀಪರ್).

    ಕ್ರಿಸ್‌ಮಸ್, ಹೊಸವರ್ಷಾಚರಣೆ ಎಫೆಕ್ಟ್​; ಕುಲು, ಮನಾಲಯಲ್ಲಿ ಟ್ರಾಫಿಕ್​ ಜಾಮ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts