More

    ಬಡವರಿಗೆ ನೆರವಾಗುವುದು ಲಯನ್ಸ್ ಉದ್ದೇಶ

    ಸೊರಬ: ಶಾಶ್ವತ ಯೋಜನೆಗಳನ್ನು ಹಮ್ಮಿಕೊಳ್ಳುವಂತಹ ಸಂಸ್ಥೆಗಳು ಸದಾಕಾಲ ಉಳಿಯುತ್ತವೆ. ಇದರಿಂದ ಸಮಾಜಕ್ಕೆ ನಿರಂತರ ಪ್ರಯೋಜನ ದೊರೆಯುತ್ತದೆ. ಈ ನಿಟ್ಟಿನಲ್ಲಿ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ ಸೇವೆ ಅನನ್ಯವಾದುದು ಎಂದು ಲಯನ್ಸ್ ವಲಯಾಧ್ಯಕ್ಷ ಕೆ. ಶಿವಾನಂದ ಹೇಳಿದರು.
    ಸೋಮವಾರ ತಾಲೂಕಿನ ಕಾಸರಗುಪ್ಪೆ ಗ್ರಾಮದಲ್ಲಿ ಉಳವಿ ಲಯನ್ಸ್ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನ ಮತ್ತು ದ್ವಿತೀಯ ವಲಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
    ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೃಜನಶೀಲ, ಕ್ರಿಯಾಶೀಲ, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಲಯನ್ಸ್ ಸಂಸ್ಥೆಯ ಸೇವಾ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆ. ದೀನದಲಿತರು, ನಿರ್ಗತಿಕರಿಗೆ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಸಹಾಯ ಹಸ್ತ ನೀಡುವುದು ಲಯನ್ಸ್ ಸಂಸ್ಥೆಯ ಉದ್ದೇಶವಾಗಿದೆ ಎಂದರು.
    ಬೆಳಕು ಕಾರ್ಯಕ್ರಮದಡಿ ಹಸಿವು ನಿವಾರಣೆ ಕಾರ್ಯಕ್ರಮ, ರಕ್ತದಾನ, ಪರಿಸರ ಜಾಗೃತಿ, ಕಾನೂನು ಅರಿವು-ನೆರವು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ, ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮೂಡಿಸುವಂತಹ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ. ಅಂತಾರಾಷ್ಟ್ರೀಯ ಕಾರ್ಯಕ್ರಮದಡಿ ಮಧುಮೇಹ ಜಾಗೃತಿ, ಅಂಧತ್ವ ನಿವಾರಣೆ ಚಿಕಿತ್ಸೆ ಕಾರ್ಯಗಳನ್ನು ವಲಯದ ಎಲ್ಲ ಕ್ಲಬ್‌ಗಳಿಂದ ಮಾಡಲು ಮುಂದಾಗಬೇಕು. ಕಣ್ಣಿನ ಆಸ್ಪತ್ರೆಗಳು, ವಿದ್ಯಾ ಸಂಸ್ಥೆಗಳನ್ನ ಪ್ರಾರಂಭಿಸಿದರೆ ಸಮಾಜಕ್ಕೆ ನಿರಂತರ ಪ್ರಯೋಜನ ದೊರೆಯುತ್ತವೆ ಎಂದರು.
    ಉಳವಿ ಕ್ಲಬ್ ಅಧ್ಯಕ್ಷ ಎಂ.ಸಿ. ಸಿದ್ದೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಅರುಣ ಎನ್ ಉಳವಿ, ಎಸ್.ಕೃಷ್ಣಾನಂದ, ಎಂ.ಆರ್.ಗಿರೀಶ್, ಚೀಫ್ ಕೋ ಆರ್ಡಿನೇಟರ್ ಟಿ.ಆರ್.ಸುರೇಶ್, ಕ್ಯಾಬಿನೇಟ್ ಸದಸ್ಯರಾದ ಎಂ.ಎಸ್.ಅಮೃತರಾಜ್, ಪ್ರವೀಣ್ ಕುಮಾರ್, ಶಿವಯೋಗಿ ಶಿರಾಳಕೊಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts