More

    ಕ್ರಿಸ್‌ಮಸ್, ಹೊಸವರ್ಷಾಚರಣೆ ಎಫೆಕ್ಟ್​; ಕುಲು, ಮನಾಲಯಲ್ಲಿ ಟ್ರಾಫಿಕ್​ ಜಾಮ್​

    ಶಿಮ್ಲಾ: ಕ್ರಿಸ್‌ಮಸ್, ಹೊಸವರ್ಷಾಚರಣೆ ಮತ್ತು ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಲ್ಲಿ 55 ಕ್ಕೂ ಹೆಚ್ಚು ವಾಹನಗಳು ಶಿಮ್ಲಾವನ್ನು ಪ್ರವೇಶಿಸಿವೆ. ಇದೇ ಸಂದರ್ಭದಲ್ಲಿ ಅಧಿಕ ಪ್ರಮಾಣದಲ್ಲಿ ಹಿಮಪಾತವಾಗುತ್ತಿರುವುದರಿಂದ ಹಿಮಾಲಯದ ಪ್ರಮುಖ ಪ್ರವಾಸಿ ತಾಣಗಳಾದ ಶಿಮ್ಲಾ, ಕುಲು, ಮನಾಲಿ ಮತ್ತು ಕಸೋಲ್‌ನಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದೆ.

    ಇದನ್ನೂ ಓದಿ: ಭಾರತದ ಮೊದಲ ಏರ್‌ಬಸ್ ಎ-350 ಏರ್ ಇಂಡಿಯಾಗೆ ಸೇರ್ಪಡೆ: ಏನಿದರ ವೈಶಿಷ್ಟ್ಯ?
    ಕಳೆದ ಮೂರು ದಿನಗಳಲ್ಲಿ ಸುಮಾರು 55,000 ವಾಹನಗಳು ರೋಹ್ಟಾಂಗ್‌ನ ಅಟಲ್ ಸುರಂಗವನ್ನು ದಾಟಿವೆ. ಇಲ್ಲಿಂದ ಮುಂದಿನ ಮಾರ್ಗವು ಕುಲು ಮತ್ತು ಲಾಹೌಲ್ ಮತ್ತು ಸ್ಪಿತಿಯನ್ನು ಸೇರುತ್ತದೆ. ರಸ್ತೆಗಳಲ್ಲಿ ವಾಹನಗಳ ಉದ್ದನೆಯ ಸರದಿಯನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.

    ಇನ್ನು ಹೊಸ ವರ್ಷದ ಆಚರಣೆಗಾಗಿ ಈ ವಾರ 1 ಲಕ್ಷಕ್ಕೂ ಹೆಚ್ಚು ವಾಹನಗಳು ಶಿಮ್ಲಾ ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಪ್ರವಾಸಿಗರು ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕು. ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಶಿಮ್ಲಾದ ಪೊಲೀಸ್ ಮಹಾನಿರ್ದೇಶಕ ಸಂಜಯ್ ಕುಂದು ಎಂದು ಮನವಿ ಮಾಡಿದರು.

    ಪೊಲೀಸ್ ಅಂಕಿಅಂಶಗಳ ಪ್ರಕಾರ, ಶಿಮ್ಲಾ ನಗರದಲ್ಲಿ ಸುಮಾರು 60,000 ವಾಹನಗಳು ರಸ್ತೆಬದಿಯಲ್ಲಿ ನಿಂತಿವೆ. ವಾರದ ದಿನಗಳಲ್ಲಿ ಸರಾಸರಿ 12,000 ವಾಹನಗಳು ಶಿಮ್ಲಾವನ್ನು ಪ್ರವೇಶಿಸುತ್ತವೆ, ಪ್ರವಾಸಿ ಋತುವಿನ ಉತ್ತುಂಗ ಸಮಯದ ವಾರಾಂತ್ಯದಲ್ಲಿ 26,000 ಕ್ಕೆ ಏರುತ್ತದೆ. ಆದರೆ ಈ ಬಾರಿ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿರುವುದನ್ನು ಈ ವಾಹನಗಳ ಸಂಚಾರ ಸೂಚಿಸುತ್ತದೆ. ಮನಾಲಿ ಬಳಿ ಸುಮಾರು 4ಕಿಮೀ ಉದ್ದದ ವಾಹನಗಳ ಕ್ಯೂ ಕಂಡುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    9.2 ಕಿಲೋಮೀಟರ್‌ ಉದ್ದದ ಅಟಲ್ ಸುರಂಗವು 10ಸಾವಿರ ಅಡಿಗಳ ಎತ್ತರದಲ್ಲಿದ್ದು, ವಿಶ್ವದ ಅತಿ ಎತ್ತರದ ಸಿಂಗಲ್​ ಟ್ಯೂಬ್ ಸುರಂಗವಾಗಿದೆ.

    ಅಟಲ್​ರ ಸಮರ್ಪಣಾ ಮನೋಭಾವ ಸ್ಫೂರ್ತಿಯಾಗಬೇಕು: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts