More

    ಅಟಲ್​ರ ಸಮರ್ಪಣಾ ಮನೋಭಾವ ಸ್ಫೂರ್ತಿಯಾಗಬೇಕು: ಪ್ರಧಾನಿ ಮೋದಿ

    ನವದೆಹಲಿ: ದೇಶಕ್ಕಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಲ್ಲಿಸಿದ ಸೇವೆ ಮತ್ತು ಸಮರ್ಪಣಾ ಮನೋಭಾವವು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

    ಇದನ್ನೂ ಓದಿ: ‘ಬೆಥ್​ಲೆಹೆಮ್​’ನಲ್ಲಿಲ್ಲ ಕ್ರಿಸ್‌ಮಸ್ ಸಡಗರ..!’ಪ್ರೇತ’ನಗರಿಯಂತಾಯ್ತು ಕ್ರಿಸ್ತ ಜನ್ಮಭೂಮಿ?
    ದಿ.ಅಟಲ್​ ಬಿಹಾರಿ ವಾಜಪೇಯಿ ಅವರ 99ನೇ ಜನ್ಮದಿನದಂದು ಸೋಮವಾರ ನವದೆಹಲಿಯ ‘ಸದೈವ್ ಅಟಲ್’ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ವಾಜಪೇಯಿ ಅವರು ತಮ್ಮ ಜೀವನದುದ್ದಕ್ಕೂ ದೇಶಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಂಡರು. ಅವರು ಪ್ರಧಾನಿಯಾಗಿ ದೇಶದ ಅಭಿವೃದ್ಧಿಯನ್ನು ವೇಗಗೊಳಿಸಲು ಶ್ರಮಿಸಿದರು. ಎಂದು ಸ್ಮರಿಸಿದರು.

    ಮಹಾನ್ ವಾಗ್ಮಿಯಾಗಿದ್ದ ವಾಜಪೇಯಿ ಅವರು ಭಾರತೀಯ ಜನಸಂಘ ಮತ್ತು ನಂತರ ಭಾರತೀಯ ಜನತಾ ಪಕ್ಷದ ಜನಪ್ರಿಯ ನಾಯಕರಾಗಿದ್ದರು. ಅವರು 1999 ರಿಂದ 2004 ರವರೆಗೆ ಯಶಸ್ವಿಯಾಗಿ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಿದರು. ಅವರ ಸರ್ಕಾರಕ್ಕೆ ಅನೇಕ ಪಕ್ಷಗಳು ಬೆಂಬಲಿಸಿದವು. ಯಾವ ಸಂದರ್ಭದಲ್ಲೂ ಸೈದ್ಧಾಂತಿಕ ಗಡಿ ಮೀರದ ಅವರು ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದರು ಎಂದರು.

    “ದೇಶದ ಎಲ್ಲಾ ಕುಟುಂಬ ಸದಸ್ಯರ ಪರವಾಗಿ, ಮಾಜಿ ಪ್ರಧಾನಿ ಗೌರವಾನ್ವಿತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ವಾರ್ಷಿಕೋತ್ಸವದಂದು ನಾನು ನನ್ನ ಆಳವಾದ ಗೌರವವನ್ನು ಸಲ್ಲಿಸುತ್ತೇನೆ. ಅವರು ತಮ್ಮ ಜೀವನದುದ್ದಕ್ಕೂ ರಾಷ್ಟ್ರ ನಿರ್ಮಾಣದ ವೇಗವನ್ನು ಮುಂದುವರೆಸಿದರು. ಭಾರತಮಾತೆಗೆ ಅವರ ಸಮರ್ಪಣೆ ಮತ್ತು ಸೇವೆ ಯುಗಯುಗದಲ್ಲೂ ಸ್ಫೂರ್ತಿಯ ಮೂಲವಾಗಿ ಉಳಿಯಲಿ” ಎಂದು ಪ್ರಧಾನಿ ‘X'(ಎಕ್ಸ್​)ನಲ್ಲಿ ಸ್ಮರಿಸಿದ್ದಾರೆ.

    ಪ್ರಧಾನಿ ಮೋದಿಯವರು ಎಕ್ಸ್‌ನಲ್ಲಿನ ಮತ್ತೊಂದು ಪೋಸ್ಟ್‌ನಲ್ಲಿ, ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಶಿಕ್ಷಣತಜ್ಞ ಮದನ್ ಮೋಹನ್ ಮಾಳವೀಯ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ದೇಶಕ್ಕಾಗಿ ಅವರ ಸಮರ್ಪಣೆ ಮತ್ತು ಸೇವಾ ಮನೋಭಾವವು ಸ್ಫೂರ್ತಿಯ ಮೂಲವಾಗಿದೆ ಎಂದು ಕೊಂಡಾಡಿದ್ದಾರೆ.

    ಮದನ್ ಮೋಹನ್ ಮಾಳವೀಯ ಅವರ ಅಪ್ರತಿಮ ವ್ಯಕ್ತಿತ್ವ ಮತ್ತು ಕೆಲಸವು ದೇಶದ ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧಂಖರ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಇತರ ಹಲವಾರು ಗಣ್ಯರು ವಾಜಪೇಯಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

    ಸಾವು ಯಾವಾಗ ಎಂದು ಹೇಳುವ ಎಐ ಸಾಧನ ಬಂದೇ ಬಿಟ್ಟಿತು..ಇದು ಹೇಗೆ ಕೆಲಸ ಮಾಡುತ್ತದೆ? ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts