More

    ಸ್ವಾರ್ಥರಹಿತ ಸೇವೆಯಿಂದ ಮೌಲ್ಯ ಹೆಚ್ಚಳ

    ಪಿರಿಯಾಪಟ್ಟಣ: ಸ್ವಾರ್ಥರಹಿತ ಸೇವಾ ಚಟುವಟಿಕೆಗಳು ಸೇವೆಯ ಮೌಲ್ಯವನ್ನು ಹೆಚ್ಚಿಸಲಿವೆ ಎಂದು ರೋಟರಿ 3181 ಜಿಲ್ಲೆಯ ಪ್ರಾಂತಪಾಲ ಎಚ್.ಆರ್.ಕೇಶವ ಅಭಿಪ್ರಾಯಪಟ್ಟರು.

    ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಸಂಸ್ಥೆಗೆ ರೋಟರಿ ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ನಿಮಿತ್ತ ಪಟ್ಟಣದ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿನ ದುರ್ಬಲರಿಗೆ ರೋಟರಿಯ ಸಹಾಯಹಸ್ತ ಚಾಚಬೇಕೆನ್ನುವ ಉದ್ದೇಶದಿಂದ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಯಾವುದೇ ವ್ಯಕ್ತಿಗೆ ನಮ್ಮಿಂದ ಅಗತ್ಯ ನೆರವು ದೊರೆತಲ್ಲಿ ಸಾರ್ಥಕತೆ ಇರಲಿದೆ ಎಂದರು.

    ಸಮಾಜ ಸೇವೆ ಮಾಡುವ ಉದ್ದೇಶದಿಂದ ವಿಶ್ವದಾದ್ಯಂತ ರೋಟರಿ, ಲಯನ್ಸ್, ಜೆಸೀಸ್ ಸೇರಿದಂತೆ ವಿವಿಧ ಸಂಸ್ಥೆಗಳು ತಮ್ಮದೇ ಆದ ಕಾರ್ಯಸೂಚಿಯ ಅನ್ವಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಈ ಎಲ್ಲ ಸಂಸ್ಥೆಗಳು ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಬದಲು ಒಟ್ಟಾಗಿ ಸೇರಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಎಲ್ಲ ವಿಧದಿಂದಲೂ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

    ಅಂಗನವಾಡಿ ಕೇಂದ್ರಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಈ ವರ್ಷ ರೋಟರಿ ವತಿಯಿಂದ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪಿರಿಯಾಪಟ್ಟಣ ರೋಟರಿ ಐಕಾನ್ಸ್ ಅಧ್ಯಕ್ಷ ಕೆ.ರಮೇಶ್ ಮಾತನಾಡಿ, ತಾಲೂಕಿನಲ್ಲಿ ರೋಟರಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು, ಆರೋಗ್ಯ, ಶಿಕ್ಷಣ ಮತ್ತು ಗಿರಿಜನ ಹಾಡಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದರು.
    ರೋಟರಿ ವಲಯ 6ರ ಸಹಾಯಕ ಪ್ರಾಂತಪಾಲ ಡಿ.ಎಂ.ತಿಲಕ್, ವಲಯ ಲೆಫ್ಟಿನೆಂಟ್ ಎಂ.ಕೆ.ಮಾಚಯ್ಯ, ನಿಯೋಜಿತ ಅಧ್ಯಕ್ಷ ಜೆ.ಎಸ್.ನಾಗರಾಜ್ ಮಾತನಾಡಿದರು. ಕಾರ್ಯದರ್ಶಿ ಪಿ.ಎಸ್.ಹರೀಶ್ ಪ್ರಸಕ್ತ ಸಾಲಿನಲ್ಲಿ ರೋಟರಿ ಕೈಗೊಂಡಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
    ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಜಿಜೆಸಿಪಿ ಪ್ರಾಂಶುಪಾಲ ಶಿವಶಂಕರ್, ಪ್ರಗತಿಪರ ಕೃಷಿಕ ಯೋಗೇಶ್, ಚಿತ್ರ ಕಲಾವಿದ ನಾಗಲಿಂಗಪ್ಪ ರಾ ಬಡಿಗೇರ ಮತ್ತು ಕಂಪಲಾಪುರ ಗ್ರಾಮ ಪಂಚಾಯಿತಿಯ ವಾಹನ ಚಾಲಕಿ ಶಕುಂತಲಾ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಗೆ ನಾಲ್ಕು ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.

    ಸಂಸ್ಥೆಯ ಖಜಾಂಚಿ ಬಿ.ಆರ್.ಗಣೇಶ್, ಸದಸ್ಯರಾದ ಎಸ್.ರಮೇಶ್, ಸಿ.ಎನ್.ವಿಜಯ್, ಎನ್.ಕರುಣಾಕರ್, ಟಿ.ಎಸ್.ಹರೀಶ್. ಪಿ.ಎನ್.ಸಂತೋಷ್, ಡಿ.ಜೆ.ಗಣೇಶ್, ಬಿ.ಎಸ್.ಪ್ರಸನ್ನ ಕುಮಾರ್, ಬಿ.ಎಸ್.ಸತೀಶ ಆರಾಧ್ಯ, ಡಿ.ಎ.ನಾಗೇಂದ್ರ, ಪ್ರೀತಿ ಅರಸ್, ಎಂ.ಹರೀಶ್, ಜೆ.ಎಸ್.ಶ್ರೀನಿವಾಸ್, ರಮೇಶ್, ಪರಮೇಶ್, ನಾಗರಾಜ್, ಸುನಿಲ್, ಮಾಧು, ರೆಹಾನ್, ರವಿಕುಮಾರ್, ಭಾನುಪ್ರಕಾಶ್ ಸೇರಿದಂತೆ ಮಡಿಕೇರಿ, ಸೋಮವಾರಪೇಟೆ, ಗೋಣಿಕೊಪ್ಪ, ಕೆ.ಆರ್.ನಗರ, ಹುಣಸೂರು ಮತ್ತಿತರ ಕ್ಲಬ್‌ಗಳಿಂದ ಆಗಮಿಸಿದ್ದ ಸದಸ್ಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts