Health Tips: ಊಟದ ನಂತರ ಬೆಲ್ಲ ತಿಂದ್ರೆ ಏನೆಲ್ಲಾ ಪ್ರಯೋಜನಗಳು ಗೊತ್ತಾ! | Jaggery

Untitled design - 2025-08-05T211259.903
Published on

Jaggery: ಅನೇಕ ಜನರು ಊಟದ ನಂತರ ಸಿಹಿ ತಿನ್ನಲು ಬಯಸುತ್ತಾರೆ. ಆದರೆ, ಸಕ್ಕರೆಯಿಂದ ಮಾಡಿದ ಸಿಹಿಗಿಂತ ಒಂದು ತುಂಡು ಬೆಲ್ಲವನ್ನು ತಿನ್ನೀರಿ ಎಂದು ಹೇಳುತ್ತಿದ್ದರು. ಇದನೆಲ್ಲಾ ನಾವು ಚಿಕ್ಕವರಿದ್ದಾಗ ಕೇಳಿದ್ದೇವೆ. ಪ್ರಪಂಚದ ಅನೇಕ ಭಾಗಗಳಲ್ಲಿ ಊಟದ ನಂತರ ಬೆಲ್ಲ ತಿನ್ನುವ ಸಂಪ್ರದಾಯ ಇನ್ನು ಇದೆ. ಆದಾಗ್ಯೂ, ಹೀಗೆ ಊಟದ ಬಳಿಕ ಬೆಲ್ಲ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಇವೆ ಎಂಬುದು ನಿಮಗೆ ತಿಳಿದಿದೆಯೇ?

ಹೌದು, ಪೂರ್ವಜರ ಜೀವನಶೈಲಿಯಲ್ಲಿ ಬೆಲ್ಲ ಬೆರೆಸಿದ ನೀರನ್ನು ಕುಡಿದು ದಿನವನ್ನು ಪ್ರಾರಂಭಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಕಾರಣ ಈ ರೀತಿ ಕುಡಿಯುವುದರಿಂದ ದಿನವಿಡೀ ಜೀರ್ಣಾಂಗ ವ್ಯವಸ್ಥೆ ಸ್ಥಿರವಾಗಿರುತ್ತದೆ. ಬೆಲ್ಲವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ. ಇದು ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಮತ್ತು ಅನೇಕ ಜೀವಸತ್ವಗಳಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಆದ್ದರಿಂದ, ಊಟದ ನಂತರ ಬೆಲ್ಲವನ್ನು ತಿನ್ನುವುದು ಹೆಚ್ಚು ಒಳ್ಳೆಯದು.

ಆರೋಗ್ಯ ಪ್ರಯೋಜನಗಳೇನು..?

1.ಉತ್ತಮ ಜೀರ್ಣಕ್ರಿಯೆ

ಊಟದ ನಂತರ ಬೆಲ್ಲ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬೆಲ್ಲವನ್ನು ತಿನ್ನುವುದರಿಂದ ಕಿಣ್ವಗಳು ಸಕ್ರಿಯಗೊಳಿಸುತ್ತದೆ. ಇದು ಆಹಾರವನ್ನು ತ್ವರಿತಗತಿಯಲ್ಲಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಅನಿಲ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡುತ್ತದೆ.

2.ಯಕೃತ್ತಿ ಕಾರ್ಯ

ಬೆಲ್ಲವು ದೇಹದಿಂದ ತ್ಯಾಜ್ಯ ಮತ್ತು ಹಾನಿಕಾರಕ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ವಿಶೇಷವಾಗಿ ಯಕೃತ್ತಿನ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.

3.ರೋಗನಿರೋಧಕ ಶಕ್ತಿ ಹೆಚ್ಚಳ

ಊಟದ ನಂತರ ಬೆಲ್ಲ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಬೆಲ್ಲವು ರಕ್ತದೊತ್ತಡ ರೋಗಿಗಳಿಗೆ ಔಷಧವಾಗಿದೆ. ಬೆಲ್ಲವನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ನಿತ್ಯವೂ ಬೆಲ್ಲ ತಿನ್ನುವುದರಿಂದ ದೇಹದಲ್ಲಿ ರಕ್ತಹೀನತೆ ಉಂಟಾಗುವುದಿಲ್ಲ.

ಎಷ್ಟು ಪ್ರಮಾಣದಲ್ಲಿ ಬೆಲ್ಲ ತಿನ್ನಬೇಕು

ಊಟದ ನಂತರ ಒಂದು ಸಣ್ಣ ತುಂಡು ಬೆಲ್ಲ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದನ್ನು ಮಿತವಾಗಿ ಸೇವಿಸುವುದು ಮುಖ್ಯ. ನೀವು 5 ರಿಂದ 10 ಗ್ರಾಂ (ಒಂದು ಸಣ್ಣ ತುಂಡು) ಬೆಲ್ಲವನ್ನು ತಿನ್ನಬಹುದು. ಹೆಚ್ಚು ಬೆಲ್ಲ ತಿನ್ನುವುದರಿಂದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಮಧುಮೇಹ ಇರುವವರು ವೈದ್ಯರನ್ನು ಸಂಪರ್ಕಿಸಿದ ನಂತರವೇ ಬೆಲ್ಲವನ್ನು ತಿನ್ನಬೇಕು.(ಏಜೆನ್ಸೀಸ್​​)ಗಮನಿಸಿ: ಈ ಮಾಹಿತಿಯು ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ನೀವು ಯಾವುದೇ ಮಾನಸಿಕ ಅಥವಾ ದೈಹಿಕ ಸಮಸ್ಯೆಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net