

ಎನ್.ಎಲ್. ಶಿವಮಾದು
ಬೆಂಗಳೂರು: ಶಾಲಾ ಮಟ್ಟದಲ್ಲಿ ನಿರಂತರ ಸಮೀಕ್ಷೆ, ಮೇಲುಸ್ತುವಾರಿ ಹಾಗೂ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಸುಧಾರಿಸುವ ಉದ್ದೇಶದಿಂದ ಶಾಲಾ ಭೇಟಿ ಮಾಹಿತಿಯನ್ನು ದಾಖಲಿಸಲು ಪರಿವೀಕ್ಷಣಾ ಆೃಪ್ (ಇನ್ಸ್ಪೆಕ್ಷನ್ ಆೃಪ್) ಅನ್ನು ಶಾಲಾ ಶಿಕ್ಷಣ ಇಲಾಖೆಯು ಅಭಿವೃದ್ಧಿಪಡಿಸಿದೆ.
ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಇತರೆ ಇಲಾಖೆಯ ನೋಡಲ್ ಅಧಿಕಾರಿಗಳು ಶಾಲಾ ಭೇಟಿ ಸಂದರ್ಭದಲ್ಲಿ ಪರಿವೀಕ್ಷಣಾ ಮಾಹಿತಿಯನ್ನು ಇಂದೀಕರಿವುದಕ್ಕಾಗಿಯೇ ಈ ಆೃಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ನಡಾವಳಿ ಹೊರಡಿಸಿದ್ದಾರೆ.
ಆೃಪ್ನಲ್ಲಿ ಪ್ರಶ್ನಾವಳಿಯನ್ನು ಅಳವಡಿಸಲಾಗಿರುವುದಾಗಿ ತಿಳಿಸಿದ್ದು, ಈ ಪ್ರಶ್ನಾವಳಿಯನ್ನು ಮೊದಲ ಹಂತದಲ್ಲಿ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಗೆ ಅವಶ್ಯವಿರುವ ಪ್ರಶ್ನಾವಳಿಗಳನ್ನು ರೂಪಿಸಿ ಅಳವಡಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಈಗಾಗಲೇ ಆಯ್ದ ಜಿಲ್ಲೆಗಳ ಕೆಲ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಈ ಆೃಪ್ನಲ್ಲಿ ದಾಖಲಿಸಿದ ಮಾಹಿತಿಯು ಹಾಗೂ ವರದಿ ರೂಪದಲ್ಲಿ ಎಲ್ಲ ಮೇಲಧಿಕಾರಿಗಳ ಸ್ಯಾಟ್ಸ್ ಲಾಗಿನ್ಲ್ಲಿ ಲಭ್ಯವಿರುವುದಾಗಿ ಹಾಗೂ ಶಾಲಾ ಪರಿವೀಕ್ಷಣಾ ವರದಿಯನ್ನು ಸಿಂಗಲ್ ಲೈನ್ ರಿಪೋರ್ಟ್ ರೂಪದಲ್ಲಿ ತಂತ್ರಾಂಶದಲ್ಲಿ ಪಡೆಯುವ ಕುರಿತು ಕ್ರಮ ವಹಿಸಲಾಗಿದೆ.
- ಆೃಪ್ ಬಳಕೆಯಿಂದ ಶಾಲಾ ಭೇಟಿ ಡಿಜಿಟಲರೀಕರಣ, ನಿಖರ ದಾಖಲೆ ವಹಿವಾಟು ಹಾಗೂ ಉನ್ನತ ಹಂತದಲ್ಲಿನ ಪರಿಶೀಲನೆ ಸುಲಭ
- ಇದರಿಂದ ದೈನಂದಿನ ಶಾಲಾ ಕಾರ್ಯವೈಖರಿಯನ್ನು ಸಮರ್ಥವಾಗಿ ವಿಶ್ಲೇಷಿಸಲು ಸಾಧ್ಯವಾಗುವುದಾಗಿ ತಿಳಿಸಿದೆ
- ಬೈಲ್ ಆೃಪ್ ಮೂಲಕ ಕ್ಷೇತ್ರದಲ್ಲಿರುವ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು, ವಿಭಾಗೀಯ ಜಂಟಿ ನಿರ್ದೇಶಕರು ಹಾಗೂ ಇತರೆ ಇಲಾಖೆಯ ಕೆಎಎಸ್ ನೋಡಲ್ ಅಧಿಕಾರಿಗಳು ತಮ್ಮ ಶಾಲಾ ಭೇಟಿ ವಿವರಗಳನ್ನು ನಿಖರವಾಗಿ ದಾಖಲಿಸಬಹುದಾಗಿದೆ. ಶಿಾರಸುಗಳನ್ನು ನೀಡಬಹುದಾಗಿದೆ.
ಆೃಪ್ನ ವೈಶಿಷ್ಟ್ಯಗಳು?
ಷರತ್ತುಗಳೇನು? - ಇಲಾಖೆ ಆಯುಕ್ತರು ಯೋಜನೆಯ ಅನುಷ್ಠಾನಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇವರು ಕಾರ್ಯಕ್ರಮದ ಮಾರ್ಗಸೂಚಿ ಪ್ರಕಟಿಸುವುದು - ಕಾಲಕಾಲಕ್ಕೆ ಉದ್ಭವಿಸಬಹುದಾದ ಸವಾಲುಗಳನ್ನು ನಿಭಾಯಿಸುವ ಸಂಬಂಧ ಅವಶ್ಯವಿರುವಂತೆ ಪ್ರಶ್ನಾವಳಿಗಳನ್ನು ರೂಪಿಸಿ ಆೃಪ್ನಲ್ಲಿ ಸಂಯೋಜಿಸಲು ಅಗತ್ಯ ಕ್ರಮ ವಹಿಸುವುದು - ಈ ಆೃಪ್ನಲ್ಲಿ ದಾಖಲಿಸಿದ ಮಾಹಿತಿಯು ಡ್ಯಾಷ್ ಬೋರ್ಡ್ನಲ್ಲಿ ಎಲ್ಲ ಮೇಲಧಿಕಾರಿಕಾರಿಗಳ (ಮುಖ್ಯ ಶಿಕ್ಷಕರು, ಬಿಇಒ, ಡಿಡಿಪಿಐ, ಡಯಟ್ ಪ್ರಾಂಶುಪಾಲರು, ಜಿಪಂ ಸಿಇಒ, ಜಿಲ್ಲಾಧಿಕಾರಿ, ಇಲಾಖೆ ಪ್ರಧಾನ ಕಾರ್ಯದರ್ಶಿ) ಸ್ಯಾಟ್ಸ್ ಲಾಗಿನ್ನಲ್ಲಿ ಲಭ್ಯವಾಗಲಿದೆ - ಆೃಪ್ ಪರಿಣಾಮಕಾರಿ ಬಳಕೆಗೆ ಅಧಿಕಾರಿಗಳಿಗೆ ಆನ್ಲೈನ್ ಮೂಲಕ ತರಬೇತಿ ನೀಡುವುದು - ಆೃಪ್ನಲ್ಲಿ ಲಭ್ಯವಿರುವ ದತ್ತಾಂಶಗಳನ್ನು ತಾಲೂಕು, ಜಿಲ್ಲೆ ಮತ್ತು ರಾಜ್ಯದ ಹಂತದಲ್ಲಿ ವಿಶ್ಲೇಷಿಸಿ, ವಿಶ್ಲೇಷಣಾ ವರದಿಗಳಿಗೆ ಅನುಪಾಲನೆ ಕೈಗೊಳ್ಳಲು ಸೂಕ್ತ ಸುತ್ತೋಲೆಯನ್ನು ಹೊರಡಿಸಲು ಕ್ರಮ ವಹಿಸುವುದು