More

    ಬಾಟಲ್​ ನೀರು ಭಾರಿ ಡೇಂಜರ್​: 1 ಲೀ. ನೀರಿನಲ್ಲಿ 2 ಲಕ್ಷಕ್ಕೂ ಅಧಿಕ ಪ್ಲಾಸ್ಟಿಕ್ ತುಣುಕು, ದೇಹಕ್ಕೆ ಆಪತ್ತು

    ಮನೆಯಿಂದ ಹೊರಗೆ ಪ್ರಯಾಣಿಸುವಾಗ ಕುಡಿಯುವ ನೀರಿಗಾಗಿ ಬಹುತೇಕರು ಬಾಟಲ್ ನೀರನ್ನೇ ಆಶ್ರಯಿಸಿದ್ದಾರೆ. ಆದರೆ, ಇದೇ ಬಾಟಲ್​ ನೀರು ನಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬುದು ಎಷ್ಟು ಜನರಿಗೆ ತಿಳಿದಿದೆ? ಇತ್ತೀಚಿನ ಅಧ್ಯಯನವೊಂದು ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದು, ಬಾಟಲ್​ ನೀರು ಎಷ್ಟೊಂದು ಡೇಂಜರ್​ ಎಂಬುದನ್ನು ಬಯಲಾಗಿದೆ.

    ಒಂದು ಬಾಟಲ್​ ನೀರಿನಲ್ಲಿ ಬರೋಬ್ಬರಿ 2,40,000 ಪತ್ತೆಹಚ್ಚಬಹುದಾದ ಪ್ಲಾಸ್ಟಿಕ್ ತುಣುಕುಗಳನ್ನು ಹೊಂದಿದೆ. ಆದರೆ, ಈ ಪ್ಲಾಸ್ಟಿಕ್ ತುಣುಕುಗಳು ನ್ಯಾನೊಪ್ಲಾಸ್ಟಿಕ್ ಆಗಿರುವುದರಿಂದ ಪತ್ತೆ ಮಾಡುವುದು ಕಷ್ಟವಾಗಿದೆ. ಈ ಅಧ್ಯಯನದ ವರದಿಯನ್ನು ನ್ಯಾಷನಲ್​ ಅಕಾಡೆಮಿ ಆಫ್​ ಸೈನ್ಸ್​ನಲ್ಲಿ ಸೋಮವಾರ ಪ್ರಕಟಿಸಲಾಗಿದೆ.

    ಈ ಹಿಂದೆ ಬಾಟಲಿ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದು ಪತ್ತೆಯಾಗಿತ್ತು. ಆದಾಗ್ಯೂ, ಈ ಮೈಕ್ರೋಪ್ಲಾಸ್ಟಿಕ್‌ಗಳಿಗಿಂತ ನ್ಯಾನೊಪ್ಲಾಸ್ಟಿಕ್‌ಗಳು ಮಾನವನ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತವೆ. ಅಧ್ಯಯನ ಪ್ರಕಾರ 1 ಲೀಟರ್​ ಬಾಟಲ್​ ನೀರಿನಲ್ಲಿ 2 ಲಕ್ಷದ 40 ಸಾವಿರ ಪ್ಲಾಸ್ಟಿಕ್ ತುಣುಕುಗಳು ಇರುತ್ತವೆ. ಇದು ಈ ಹಿಂದಿನ ಅಂದಾಜಿಗಿಂತ 10 ರಿಂದ 100 ಪಟ್ಟು ಹೆಚ್ಚು ಎಂಬುದೇ ಕಳವಳಕಾರಿ ಸಂಗತಿಯಾಗಿದೆ.

    ಅಂದಹಾಗೆ ನ್ಯಾನೋಪ್ಲಾಸ್ಟಿಕ್‌ಗಳು ತುಂಬಾ ಚಿಕ್ಕದಾಗಿದ್ದು, ಮೈಕ್ರೋಪ್ಲಾಸ್ಟಿಕ್‌ಗಳಿಗಿಂತ ಭಿನ್ನವಾಗಿವೆ. ಇವು ಕರುಳು ಮತ್ತು ಶ್ವಾಸಕೋಶದ ಮೂಲಕ ನೇರವಾಗಿ ರಕ್ತಕ್ಕೆ ಸೇರಬಹುದು ಮತ್ತು ಅಲ್ಲಿಂದ ಹೃದಯ ಮತ್ತು ಮೆದುಳು ಸೇರಿದಂತೆ ಇತರೆ ಅಂಗಗಳಿಗೆ ಪ್ರಯಾಣಿಸಬಹುದು. ಈ ಪ್ಲಾಸ್ಟಿಕ್​ಗಳು ಪ್ರತ್ಯೇಕ ಕೋಶಗಳನ್ನೇ ಆಕ್ರಮಿಸಿ ಪ್ರಾಣಕ್ಕೆ ಸಂಚಕಾರ ತರಬಹುದು ಎಂದು ಅಧ್ಯಯನ ತಿಳಿಸಿದೆ.

    ಯುನೈಟೆಡ್​ ಸ್ಟೇಟ್ಸ್​ನಲ್ಲಿ ಮಾರಾಟವಾಗುವ ಮೂರು ಜನಪ್ರಿಯ ಬ್ರ್ಯಾಂಡ್‌ಗಳ ಬಾಟಲಿಯ ನೀರನ್ನು ಪರೀಕ್ಷಿಸಿದಾಗ, ಸಂಶೋಧಕರು ಪ್ರತಿ ಲೀಟರ್‌ನಲ್ಲಿ 110,000 ರಿಂದ 370,000 ಕಣಗಳನ್ನು ಗುರುತಿಸಿದ್ದಾರೆ. ಈ ಕಣಗಳಲ್ಲಿ 90 ಪ್ರತಿಶತ ನ್ಯಾನೊಪ್ಲಾಸ್ಟಿಕ್ ಆಗಿದ್ದರೆ, ಉಳಿದವು ಮೈಕ್ರೋಪ್ಲಾಸ್ಟಿಕ್​ಗಳಾಗಿವೆ. (ಏಜೆನ್ಸೀಸ್​)

    ಲೈವ್​ ಪ್ರೋಗ್ರಾಮ್​ ವೇಳೆ ಟಿವಿ ಸ್ಟುಡಿಯೋಗೆ ನುಗ್ಗಿದ ಬಂದೂಕುಧಾರಿಗಳು! ಸರ್ಕಾರದ ವಿರುದ್ಧ ಸಮರ

    ತಂದೆ-ತಾಯಿ, ಶಿಕ್ಷಕರ ಕಣ್ಣೀರಿಗೆ ಕಾರಣರಾಗ್ಬೇಡಿ ಎಂದು ಕಿವಿಮಾತು ಹೇಳಿದ ಬೆನ್ನಲ್ಲೇ ಶಿಕ್ಷಕಿ ದುರ್ಮರಣ

    ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಗೀತೆ; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಮಂಗಳೂರು ಹುಡುಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts