More

    ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಗೀತೆ; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಮಂಗಳೂರು ಹುಡುಗಿ

    | ಹರ್ಷವರ್ಧನ್ ಬ್ಯಾಡನೂರು

    ಲಿಯೊನೆಲ್ಲಾ ಶ್ವೇತಾ ಡಿಸೋಜಾ. ಮೂಲತಃ ಮಂಗಳೂರು ಹುಡುಗಿ. ಕನ್ನಡಿಗರೇ ಸೇರಿ ಮಾಡಿದ ‘ದಿ ವೈ’ ಎಂಬ ಬಾಲಿವುಡ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಇದೀಗ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಜತೆಗೆ ಪರಭಾಷೆಗಳಿಗೆ ಹಾರಲು ಸಿದ್ದತೆ ನಡೆಸಿದ್ದಾರೆ. ಇತ್ತೀಚೆಗಷ್ಟೆ ಶ್ವೇತಾ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.

    ಶಾರ್ಟ್ ಫಿಲಂನಿಂದ ಬಿಗ್ ಸ್ಕ್ರೀನ್‌ವರೆಗೆ
    ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ ಕುರಿತು ಶ್ವೇತಾ, ‘ಕಾಲೇಜು ದಿನಗಳಲ್ಲಿ ್ರೆಂಡ್ ಕಿರುಚಿತ್ರ ಮಾಡಿದ್ದರು. ಅದರಲ್ಲಿ ಒಂದು ಪಾತ್ರ ಮಾಡಿದ್ದೆ. ನನ್ನ ನಟನೆಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ನಂತರ ಬೆಂಗಳೂರಿನಲ್ಲಿ ಐಟಿ ಉದ್ಯೋಗ ಮಾಡುತ್ತಲೇ ಆಡಿಷನ್ಸ್ ನೀಡತೊಡಗಿದೆ. ಮೊದಲು ಹಿಂದಿ ಸಿನಿಮಾ ‘ದಿ ವೈ’ನಲ್ಲಿ ನಟಿಸುವ ಅವಕಾಶ ದೊರೆಯಿತು. ಬಳಿಕ ‘ಖಾಸಗಿ ಪುಟಗಳು’ ಚಿತ್ರದಲ್ಲಿ ನಟಿಸಿದೆ’ ಎಂದು ಹೇಳಿಕೊಳ್ಳುತ್ತಾರೆ.

    ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಗೀತೆ; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಮಂಗಳೂರು ಹುಡುಗಿ

    ಹ್ಯಾಟ್ರಿಕ್ ಚಿತ್ರಗಳಲ್ಲಿ ಬಿಜಿ
    ಸದ್ಯ ‘ಹೆಜ್ಜಾರು’, ‘ನೆಲ್ಸನ್’ ಹಾಗೂ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ನಿರ್ದೇಶಕ ಅನೂಪ್ ಕಶ್ಯಪ್ ಆ್ಯಕ್ಷನ್-ಕಟ್ ಹೇಳುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಶ್ವೇತಾ ನಟಿಸುತ್ತಿದ್ದಾರೆ. ‘‘ಹೆಜ್ಜಾರು’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅದರಲ್ಲಿ ನಾನು ಕಡಿಮೆ ಮಾತಿನ ಇಂಟ್ರೊವರ್ಟ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಅರುಣ್ ನಿರ್ದೇಶಿಸುತ್ತಿರುವ ‘ನೆಲ್ಸನ್’ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿದ್ದೇನೆ. ಮೊದಲ ಶೆಡ್ಯುಲ್ ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಎರಡನೇ ಹಂತದ ಶೂಟಿಂಗ್ ನಡೆಯಲಿದೆ. ಚಾಮರಾಜನಗರ 90ರ ದಶಕದಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರ. ಹಳ್ಳಿ ಹುಡುಗಿಯ ಪಾತ್ರ ನನ್ನದು. ಅನೂಪ್ ಕಶ್ಯಪ್ ಅವರ ಹೊಸ ಸಿನಿಮಾದಲ್ಲಿ 17 ವರ್ಷದ ಕಾಲೇಜು ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ ಶ್ವೇತಾ.

    ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಗೀತೆ; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಮಂಗಳೂರು ಹುಡುಗಿ

    ಐಟಿ ಕೆಲಸದ ಜತೆ ನಟನೆ
    ಸಿನಿಮಾ ಕನಸು ಹೊತ್ತು ಐಟಿ ಕೆಲಸವನ್ನೂ ಮಾಡುತ್ತಿರುವ ಶ್ವೇತಾ, ‘ಐದು ಚಿತ್ರಗಳಲ್ಲೂ ಐದು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಹೊಸಬಳು ಅಂತ ಬರುವ ಎಲ್ಲ ಅವಕಾಶವನ್ನೂ ಒಪ್ಪಿಕೊಳ್ಳದೆ ತುಂಬ ಎಚ್ಚರಿಕೆಯಿಂದ ಕಥೆ, ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಸದ್ಯ ಐಟಿಯಲ್ಲಿ ಕೆಲಸ ಮಾಡುತ್ತಲೇ, ಸಿನಿಮಾದಲ್ಲೂ ತೊಡಗಿದ್ದೇನೆ. ಉತ್ತಮ ಅವಕಾಶಗಳು ಸಿಕ್ಕಲ್ಲಿ, ಮುಂದಿನ ದಿನಗಳಲ್ಲಿ ುಲ್ ಟೈಮ್ ಸಿನಿಮಾಗೆ ಮೀಸಲು. ಹೆಚ್ಚು ಕಲಿಯಬೇಕು, ಉತ್ತಮ ಪಾತ್ರಗಳಲ್ಲಿ ನಟಿಸಬೇಕು, ಸಿನಿಮಾದ ಪ್ರಕ್ರಿಯೆಯನ್ನು ಎಂಜಾಯ್ ಮಾಡಬೇಕು’ ಎನ್ನುತ್ತಾರೆ.

    ಪರಭಾಷೆಗಳಲ್ಲೂ ಆರ್
    ಈಗಾಗಲೇ ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಶ್ವೇತಾಗೆ ತಮಿಳು, ತೆಲುಗಿನಿಂದಲೂ ಅವಕಾಶಗಳು ಬರುತ್ತಿವೆಯಂತೆ. ‘ತೆಲುಗಿನಿಂದ ಹೆಚ್ಚು ಕಥೆಗಳು ಬರುತ್ತಿವೆ. ತಮಿಳಿನಲ್ಲೂ ಕೆಲವು ಆರ್‌ಗಳು ಬಂದಿವೆ. ಒಂದು ತಮಿಳು ಚಿತ್ರದ ಕೊನೆಯ ಹಂತದ ಮಾತುಕತೆ ನಡೆಯುತ್ತಿದೆ. ಜತೆಗೆ ನಾನೂ ತಮಿಳು ಮತ್ತು ತೆಲುಗು ಭಾಷೆಗಳನ್ನು ಕಲಿಯುತ್ತಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts