ತಂದೆ-ತಾಯಿ, ಶಿಕ್ಷಕರ ಕಣ್ಣೀರಿಗೆ ಕಾರಣರಾಗ್ಬೇಡಿ ಎಂದು ಕಿವಿಮಾತು ಹೇಳಿದ ಬೆನ್ನಲ್ಲೇ ಶಿಕ್ಷಕಿ ದುರ್ಮರಣ

ಚಲಕುಡಿ: ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕಿಯೊಬ್ಬರು ಕುಸಿದುಬಿದ್ದು ದುರಂತ ಸಾವಿಗೀಡಾದ ಕರುಣಾಜನಕ ಘಟನೆ ಕೇರಳದ ಚಲಕುಡಿಯಲ್ಲಿ ನಡೆದಿದೆ. ಮೃತ ಶಿಕ್ಷಕಿಯನ್ನು ರಮ್ಯಾ ಜೋಸ್​ (41) ಎಂದು ಗುರುತಿಸಲಾಗಿದೆ. ಅಂಗಮಾಲಿ ಮೂಲದ ರಮ್ಯಾ, ಕೊರಟ್ಟಿಯಲ್ಲಿರುವ ಎಲ್​ಎಫ್​ಸಿಎಚ್​ಎಸ್​ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭದ ವೇಳೆ ಭಾಷಣ ಮಾಡುವಾಗ ಕುಸಿದುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಬದುಕುಳಿಯಲಿಲ್ಲ. ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಮ್ಯಾ ಅವರು ಕೊನೆಯದಾಗಿ … Continue reading ತಂದೆ-ತಾಯಿ, ಶಿಕ್ಷಕರ ಕಣ್ಣೀರಿಗೆ ಕಾರಣರಾಗ್ಬೇಡಿ ಎಂದು ಕಿವಿಮಾತು ಹೇಳಿದ ಬೆನ್ನಲ್ಲೇ ಶಿಕ್ಷಕಿ ದುರ್ಮರಣ