More

    ತಂದೆ-ತಾಯಿ, ಶಿಕ್ಷಕರ ಕಣ್ಣೀರಿಗೆ ಕಾರಣರಾಗ್ಬೇಡಿ ಎಂದು ಕಿವಿಮಾತು ಹೇಳಿದ ಬೆನ್ನಲ್ಲೇ ಶಿಕ್ಷಕಿ ದುರ್ಮರಣ

    ಚಲಕುಡಿ: ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕಿಯೊಬ್ಬರು ಕುಸಿದುಬಿದ್ದು ದುರಂತ ಸಾವಿಗೀಡಾದ ಕರುಣಾಜನಕ ಘಟನೆ ಕೇರಳದ ಚಲಕುಡಿಯಲ್ಲಿ ನಡೆದಿದೆ.

    ಮೃತ ಶಿಕ್ಷಕಿಯನ್ನು ರಮ್ಯಾ ಜೋಸ್​ (41) ಎಂದು ಗುರುತಿಸಲಾಗಿದೆ. ಅಂಗಮಾಲಿ ಮೂಲದ ರಮ್ಯಾ, ಕೊರಟ್ಟಿಯಲ್ಲಿರುವ ಎಲ್​ಎಫ್​ಸಿಎಚ್​ಎಸ್​ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ದ್ವಿತೀಯ ಪಿಯು ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭದ ವೇಳೆ ಭಾಷಣ ಮಾಡುವಾಗ ಕುಸಿದುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಬದುಕುಳಿಯಲಿಲ್ಲ. ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

    ರಮ್ಯಾ ಅವರು ಕೊನೆಯದಾಗಿ ಆಡಿದ ಮಾತುಗಳನ್ನು ಕೇಳಿದರೆ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುತ್ತದೆ. ನಾನು ಹೇಳಲು ಬಯಸುವ ಕೊನೆಯ ವಿಷಯವೆಂದರೆ ಇಂದಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದವರು ನೀವೇ. ನಿಮ್ಮನ್ನು ಸರಿಪಡಿಸಲು ಯಾರೂ ಇರುವುದಿಲ್ಲ. ಯಾವುದು ಸರಿ? ಯಾವುದು ತಪ್ಪು?ಎನ್ನುವುದನ್ನು ಪತ್ತೆಹಚ್ಚಬೇಕು. ಜೀವನದಲ್ಲಿ ತಂದೆ-ತಾಯಿ, ಗುರುಗಳು ಕಣ್ಣೀರು ಸುರಿಸುವಂತೆ ಮಾಡಬೇಡಿ ಎಂದು ಹೇಳಿದರು.

    ಕಳೆದ ವರ್ಷವೂ ಕೂಡ ಶಾಲೆಯ ವಾರ್ಷಿಕೋತ್ಸವದ ವೇಳೆ ರಮ್ಯಾ ಅವರು ಇದೇ ರೀತಿ ಕುಸಿದು ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಎಲ್ಲ ದೈಹಿಕ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬ ವರದಿ ಬಂದಿತ್ತು. ಆದರೆ, ಇದೀಗ ಶಾಲಾ ಕಾರ್ಯಕ್ರಮದಲ್ಲೇ ರಮ್ಯಾ ಸಾವಿಗೀಡಾಗಿದ್ದಾರೆ. ಅಂದಹಾಗೆ ರಮ್ಯಾ ಅವರು ಹದಿನಾರು ವರ್ಷಗಳಿಂದ ಕೊರಟ್ಟಿ ಎಲ್‌ಎಫ್‌ಸಿಜಿ ಎಚ್‌ಎಸ್ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿದ್ದರು.

    ರಮ್ಯಾ ಸಾವಿಗೆ ವಿದ್ಯಾರ್ಥಿಗಳು ಮತ್ತು ಶಾಲಾ ಆಡಳಿತ ಮಂಡಳಿ ಕಂಬನಿ ಮಿಡಿದಿದೆ. ನೆಚ್ಚಿನ ಶಿಕ್ಷಕಿಯನ್ನು ಕಳೆದುಕೊಂಡು ವಿದ್ಯಾರ್ಥಿಗಳು ದುಃಖಿಸುತ್ತಾರೆ. (ಏಜೆನ್ಸೀಸ್​)

    ಶುಂಠಿಯ ಈ ಅದ್ಭುತ ಆರೋಗ್ಯ ಲಾಭದ ಬಗ್ಗೆ ತಿಳಿದ್ರೆ ನೀವಿದನ್ನು ಮಿಸ್​ ಮಾಡೋದೇ ಇಲ್ಲ…

    ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಗೀತೆ; ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಮಂಗಳೂರು ಹುಡುಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts