More

    ಲೈವ್​ ಪ್ರೋಗ್ರಾಮ್​ ವೇಳೆ ಟಿವಿ ಸ್ಟುಡಿಯೋಗೆ ನುಗ್ಗಿದ ಬಂದೂಕುಧಾರಿಗಳು! ಸರ್ಕಾರದ ವಿರುದ್ಧ ಸಮರ

    ಕ್ವಿಟೊ: ನೇರಪ್ರಸಾರ ನಡೆಯುತ್ತಿದ್ದ ವೇಳೆ ಮುಖವಾಡ ಧರಿಸಿದ ಬಂದೂಕುಧಾರಿಗಳ ಗುಂಪೊಂದು ಅಕ್ರಮವಾಗಿ ಟಿವಿ ಸ್ಟುಡಿಯೋ ಒಳಗೆ ನುಗ್ಗಿ, ಅಲ್ಲಿನ ಸಿಬ್ಬಂದಿಯ ಕೈ-ಕಾಲುಗಳನ್ನು ಕಟ್ಟಿ, ನೆಲದ ಮೇಲೆ ಮಲಗುವಂತೆ ಮಾಡಿ, ಹಿಂಸೆ ನೀಡಿರುವ ಘಟನೆ ಈಕ್ವೆಡಾರ್‌​ನಲ್ಲಿ ನಡೆದಿದೆ.

    ಈಕ್ವೇಡರ್​ನ ಟಿಸಿ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಈಕ್ವೆಡಾರ್‌​ ಅಧ್ಯಕ್ಷ ಡ್ಯಾನಿಯಲ್​ ನೊಬೋವಾ ಅವರು ಮಿಲಿಟರಿ ಕಾರ್ಯಾಚರಣೆಗೆ ಆದೇಶ ಹೊರಡಿಸಿದ್ದಾರೆ. ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳು ನೇರಪ್ರಸಾರದಲ್ಲೇ ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗಲ್ಲಿಗೇರಿಸುವುದಾಗಿ ಅಲ್ಲಿನ ಸರ್ಕಾರಕ್ಕೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಸ್ಟುಡಿಯೋ ಒಳಗೆ ಗುಂಡಿನ ಮೊರೆತ ಮತ್ತು ಕೂಗಾಟವೂ ಕೇಳಿದೆ.

    ಬಂದೂಕುಧಾರಿಗಳ ಗುಂಪಿನ ಎಲ್ಲರು ಕಪ್ಪು ಬಣ್ಣದ ಉಡುಗೆ ಮತ್ತು ಮುಖವಾಡ ಧರಿಸಿದ್ದರು. ದೊಡ್ಡ ಬಂದೂಕುಗಳನ್ನು ಹಿಡಿದು, ಟಿವಿ ಮಾಧ್ಯಮದ ಸಿಬ್ಬಂದಿಗಳನ್ನು ನೇರಪ್ರಸಾರದಲ್ಲೇ ಹೆದರಿಸುತ್ತಿರುವುದು ವಿಡಿಯೋದಲ್ಲಿದೆ. ಅಂತಿಮವಾಗಿ ನೇರಪ್ರಸಾರವೂ ಕಡಿತಗೊಳ್ಳುತ್ತದೆ. ಕೆಲವು ಆಕ್ರಮಣಕಾರರು ಕ್ಯಾಮೆರಾದತ್ತ ಸನ್ನೆ ಮಾಡುವುದು ಮತ್ತು ಯಾರೂ ಪೊಲೀಸ್ ಇಲ್ಲ ಎಂದು ಕೂಗುವುದು ಸಹ ವಿಡಿಯೋದಲ್ಲಿ ಕೇಳಿಸುತ್ತದೆ. ಗುವಾಕ್ವಿಲ್​ನಲ್ಲಿರುವ ಟಿಸಿ ಸ್ಟುಡಿಯೋದ ಹೊರಭಾಗದ ಚಿತ್ರಣವನ್ನು ಬೇರೊಂದು ಮಾಧ್ಯಮ ಬಿತ್ತರಿಸಿದ್ದು, ಅದರಲ್ಲಿ ಪೊಲೀಸ್​ ಸಿಬ್ಬಂದಿ ಇರುವುದು ಸ್ಪಷ್ಟವಾಗಿದೆ.

    ಈಕ್ವೆಡಾರ್‌ನ ಅತ್ಯಂತ ಶಕ್ತಿಶಾಲಿ ಕ್ರಿಮಿನಲ್ ಬಾಸ್​ ಓರ್ವ ಜೈಲಿನಿಂದ ಪಲಾಯನ ಮಾಡಿದ ಬಳಿಕ ದೇಶದಲ್ಲಿ ಭದ್ರತಾ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರ ನಡುವೆ ದುಷ್ಕರ್ಮಿಗಳು ಸರ್ಕಾರದ ವಿರುದ್ಧ “ಯುದ್ಧ”ವನ್ನು ಸಹ ಘೋಷಣೆ ಮಾಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಈಕ್ವೇಡರ್​ ಅಧ್ಯಕ್ಷ ಡೇನಿಯಲ್ ನೊಬೊವಾ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಕನಿಷ್ಠ ಏಳು ಪೊಲೀಸ್ ಅಧಿಕಾರಿಗಳ ಅಪಹರಣಗಳು ಮತ್ತು ಸರಣಿ ಸ್ಫೋಟಗಳಂತಹ ಘಟನೆಗಳು ನಡೆದ ಒಂದು ದಿನದ ಬೆನ್ನಲ್ಲೇ ಈ ಸ್ಟುಡಿಯೋ ಘಟನೆಯುಸ ಸಹ ನಡೆದಿದೆ.

    ನೊಬೊವಾ ಅವರು ಕಳೆದ ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಬೀದಿಗಳಲ್ಲಿ ಮತ್ತು ಜೈಲುಗಳಲ್ಲಿ ಮಾದಕವಸ್ತು ವ್ಯಾಪಾರ ಸಂಬಂಧಿತ ದುಷ್ಕೃತ್ಯಗಳನ್ನು ತಡೆಯುವುದಾಗಿ ಭರವಸೆ ನೀಡಿದ್ದರು. (ಏಜೆನ್ಸೀಸ್​)

    ತಂದೆ-ತಾಯಿ, ಶಿಕ್ಷಕರ ಕಣ್ಣೀರಿಗೆ ಕಾರಣರಾಗ್ಬೇಡಿ ಎಂದು ಕಿವಿಮಾತು ಹೇಳಿದ ಬೆನ್ನಲ್ಲೇ ಶಿಕ್ಷಕಿ ದುರ್ಮರಣ

    ಶುಂಠಿಯ ಈ ಅದ್ಭುತ ಆರೋಗ್ಯ ಲಾಭದ ಬಗ್ಗೆ ತಿಳಿದ್ರೆ ನೀವಿದನ್ನು ಮಿಸ್​ ಮಾಡೋದೇ ಇಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts