

Life depends on your Ears : ಈ ಮೇಲಿನ ಶೀರ್ಷಿಕೆ ಓದಿದ ನಂತರ ಒಂದು ಕ್ಷಣ ಅಚ್ಚರಿಗೊಳ್ಳಬಹುದು. ಇಡೀ ಜೀವನ ಕಿವಿಯ ಮೇಲೆ ಹೇಗೆ ಅವಂಬಿತವಾಗಿರುತ್ತದೆ ಎಂದು ಚಿಂತಿಸುತ್ತಿರಬಹುದು. ಕಿವಿಗೂ ಜೀವನಕ್ಕೂ ಏನು ಸಂಬಂಧ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ನೀವು ಸಹವಾಸ ದೋಷ ಎಂಬ ಪದವನ್ನು ಕೇಳಿರಬಹುದು. ನಮ್ಮ ಹಿರಿಯರು ಆಗಾಗ ಈ ಪದವನ್ನು ಹೇಳುತ್ತಿರುತ್ತಾರೆ. ನಿಮ್ಮ ಸ್ನೇಹಿತರು ಹೇಗಿರುತ್ತಾರೋ ಅದೇ ನೀವು ಇರುತ್ತೀರಿ ಎಂದರ್ಥ. ನೀವು ಯಾರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರೋ ಅವರಂತೆಯೇ ಆಗುತ್ತೀರಿ ಎನ್ನುವ ಅರ್ಥ ಸೂಚಿಸುತ್ತದೆ. ಅದಕ್ಕಾಗಿಯೇ ಕೆಟ್ಟ ಸ್ನೇಹವನ್ನು ನಿಲ್ಲಿಸಲು ಹಿರಿಯರು ಹೇಳುತ್ತಾರೆ. ಅಂದರೆ, ಗಾಂಜಾ ತೋಟದಲ್ಲಿ ತುಳಸಿ ಮರ ಬೆಳೆಯುವುದು ಅಸಾಧ್ಯ. ಅದೇ ರೀತಿ ನೀವು ನಿಮ್ಮ ಕಿವಿಯಲ್ಲಿ ಏನು ಕೇಳುತ್ತೀರೋ ಅದನ್ನೇ ನೀವು ಮಾಡುತ್ತೀರಿ.
ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಏನೇ ಕೇಳಿದರೂ ಅದು ಮೆದುಳಿನಲ್ಲಿ ಶೇಖರಣೆಯಾಗುತ್ತದೆ. ನೀವು ಕೆಟ್ಟ ಪದಗಳನ್ನು ಕೇಳಿದರೆ ಮತ್ತು ಕೆಟ್ಟದ್ದನ್ನು ಯೋಚಿಸಿದರೆ, ನೀವು ಕೆಟ್ಟದ್ದನ್ನು ಮಾಡಲು ಸಹ ಯೋಚಿಸುತ್ತೀರಿ. ನೀವು ಸಕಾರಾತ್ಮಕ ಪದಗಳು ಮತ್ತು ಉತ್ತಮ ಸ್ನೇಹಿತರ ಜೊತೆ ಮಾತನಾಡಿದರೆ, ನೀವು ಉತ್ತಮ ಆಲೋಚನೆಗಳನ್ನು ಹೊಂದಬಹುದು ಮತ್ತು ಜೀವನವನ್ನು ಆರಾಮವಾಗಿ ಬದುಕಬಹುದು. ಅದಕ್ಕಾಗಿಯೇ ನಿಮ್ಮ ಜೀವನವು ನಿಮ್ಮ ಕಿವಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗುತ್ತದೆ.
ನೀವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸಿದರೆ, ಯಾವಾಗಲೂ ಅದರ ಬಗ್ಗೆ ಯೋಚಿಸಿ. ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಆಲಿಸಿ. ಆತಗ ಖಂಡಿತ ಯಶಸ್ಸು ಸಿಗುತ್ತದೆ. ಕೆಟ್ಟದ್ದಕ್ಕೆ ಕಿವಿಗೊಡಬೇಡಿ ಎಂದು ಹಿರಿಯರು ಹೇಳುವುದು ಕೂಡ ಇದಕ್ಕೇನೆ. ಆದ್ದರಿಂದ ಬೆಳಿಗ್ಗೆ ಎದ್ದು ನಿಮ್ಮ ಕಿವಿಗೆ ಇಷ್ಟವಾಗುವ ಸಂಗೀತವನ್ನು ಕೇಳಿ. ಮನಸ್ಸಿಗೆ ನೆಮ್ಮದಿ ತರುವ ಮಾತುಗಳನ್ನು ಆಲಿಸಿ. ಆಗ ನಿಮ್ಮ ಜೀವನ ಚೆನ್ನಾಗಿರುತ್ತದೆ.