ಮಲಗುವ ಮುನ್ನ ಇವುಗಳನ್ನು ತಿನ್ನುತ್ತೀರಾ.? ಕೆಟ್ಟ ನಿದ್ರೆ ಜೊತೆ, ಕೆಟ್ಟ ಕನಸು ಬೀಳಲು ಇದೇ ಕಾರಣ ನೋಡಿ| sleep

sleeping
Published on

ಆದಾಗ್ಯೂ ಕೆಲವೊಮ್ಮೆ ಗಂಟೆಗಟ್ಟಲೆ ಹಾಸಿಗೆಯಲ್ಲಿ ಮಲಗಿದ ಬಳಿಕವೂ ನಮಗೆ ನಿದ್ರೆ ಬರುವುದಿಲ್ಲ. ನಮಗೆ ಮತ್ತೆ ಮತ್ತೆ ಚಡಪಡಿಕೆಯಾಗುತ್ತದೆ. ಜೊತೆಗೆ, ಹಲವು ಬಾರಿ ಮಧ್ಯದಲ್ಲಿ ಭಯಾನಕ ಕನಸುಗಳು ಬೀಳಲು ಪ್ರಾರಂಭಿಸುತ್ತವೆ. ನೀವು ಸಹ ಅಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯೋಣ.

health tips; ನಮ್ಮ ದೇಹವನ್ನು ಮತ್ತು ಆರೋಗ್ಯವನ್ನು ಉತ್ತಮವಾಗಿಡಲು ಆಹಾರದ ಜತೆ ಉತ್ತಮ ನಿದ್ರೆಯು ಮುಖ್ಯವಾಗಿರುತ್ತದೆ. ಒಬ್ಬ ವ್ಯಕ್ತಿಗೆ ಅಗತ್ಯವಿರುವಷ್ಟು ಬಹುಬೇಗನೆ ನಿದ್ರಿಸುವುದರಿಂದ ಎಷ್ಟೋ ಆರೋಗ್ಯ ಸಮಸ್ಯೆಗಳು ಯಾವುದೇ ಔಷಧವಿಲ್ಲದೆ ದೂರವಾಗುತ್ತವೆ.

ಇಂತಹ ಸಮಸ್ಯೆಗಳ ಬಗ್ಗೆ ಕೆನಡಾದ ಸಂಶೋಧನೆ ವರದಿಯೊಂದನ್ನು ಪ್ರಕಟಿಸಿದೆ. ನಮ್ಮ ಆಹಾರ ಪದ್ಧತಿಯೇ ಇಂತಹ ಸಮಸ್ಯೆಗಳಿಗೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. ವಿಶೇಷವಾಗಿ ಡೈರಿ ಉತ್ಪನ್ನಗಳು, ಸಿಹಿತಿಂಡಿಗಳು ಮತ್ತು ಮಸಾಲೆಯುಕ್ತ ಆಹಾರಗಳು ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತವೆ ಇದರ ಜೊತೆಗೆ ಭಯಾನಕ ಕನಸುಗಳು ಬರಲು ಪ್ರಾರಂಭಿಸುತ್ತವೆ ಎಂದು ಹೇಳಲಾಗಿದೆ.

ಸಂಶೋಧನೆ ಹೇಳಿದ್ದೇನು.?

ಈ ಸಂಶೋಧನೆಗೆ 1,082 ವಿದ್ಯಾರ್ಥಿಗಳನ್ನು ಒಳಪಡಿಸಲಾಯ್ತು. ಅವರ ದೈನಂದಿನ ದಿನಚರಿಯ ಬಗ್ಗೆ ಅವರು ಏನು ತಿನ್ನುತ್ತಾರೆ ಮತ್ತು ಹೇಗೆ ಮಲಗುತ್ತಾರೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಇದರಲ್ಲಿ ಸುಮಾರು 41 ಪ್ರತಿಶತ ವಿದ್ಯಾರ್ಥಿಗಳು ಕೆಲವು ಆಹಾರದಿಂದಾಗಿ ತಮ್ಮ ನಿದ್ರೆಗೆ ತೊಂದರೆಯಾಗುತ್ತದೆ ಎಂದು ಹೇಳಿದರು. ಅದೇ ಸಮಯದಲ್ಲಿ, 5.5 ಪ್ರತಿಶತ ವಿದ್ಯಾರ್ಥಿಗಳು ಆಹಾರವು ತಮ್ಮ ಕನಸುಗಳನ್ನು ಬದಲಾಯಿಸುತ್ತದೆ ಎಂದು ತಿಳಿಸಿದರು. ಡೈರಿ ಉತ್ಪನ್ನಗಳನ್ನು ಸೇವಿಸಿದ ನಂತರ, ಅನೇಕ ಜನರು ಗ್ಯಾಸ್, ಹೊಟ್ಟೆ ನೋವು ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ಅನುಭವಿಸಿದರು. ಈ ಕಾರಣದಿಂದಾಗಿ ಅವರಿಗೆ ನಿದ್ರಿಸಲು ತೊಂದರೆಯಾಯಿತು ಜೊತೆಗೆ ದುಃಸ್ವಪ್ನಗಳು ಬಂದವು ಎಂದು ವರದಿ ಹೇಳಿದೆ.

ಉತ್ತಮ ನಿದ್ರೆಗೆ ಏನು ಪರಿಹಾರ:

(ಏಜೆನ್ಸೀಸ್)

ಸಮತೋಲನ ಕಾಪಾಡಿ: ತುಂಬಾ ತಿನ್ನದಿರಿ ಅಥವಾ ಹಸಿವಿನಿಂದ ಮಲಗದಿರಿ; ಎರಡೂ ನಿದ್ರೆಗೆ ಅಡ್ಡಿಯಾಗಬಹುದು.

ಕೆಫೀನ್, ಆಲ್ಕೊಹಾಲ್ ಮಿತಿಗೊಳಿಸಿ: ಇವು ನಿದ್ರೆಯ ಚಕ್ರವನ್ನು ಭಂಗಗೊಳಿಸಬಹುದು, ಆದ್ದರಿಂದ ಸಂಜೆಯಿಂದ ಇವನ್ನು ದೂರವಿಡಿ.

ಭಾರೀ ಆಹಾರ ತಪ್ಪಿಸಿ: ಜೀರ್ಣಕ್ರಿಯೆಗೆ ತೊಂದರೆಯಾಗದಂತೆ ಮಲಗುವ 2-3 ಗಂಟೆಗಳ ಮೊದಲು ಎಣ್ಣೆಯುಕ್ತ, ಮಸಾಲೆಯುಕ್ತ, ಅಥವಾ ಸಕ್ಕರೆಯುಕ್ತ ಆಹಾರವನ್ನು ತಪ್ಪಿಸಿ.

ಲಘು ಆಹಾರ : ಬಾದಾಮಿ, ಕಿವಿ, ಚೆರ್ರಿ, ಅಥವಾ ಒಂದು ಗ್ಲಾಸ್ ಬೆಚ್ಚಗಿನ ಹಾಲು ನಿದ್ರೆಯನ್ನು ಉತ್ತೇಜಿಸುವ ಮೆಲಟೋನಿನ್ ಹೊಂದಿರುತ್ತವೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net