

Beauty secret : ಇಂದಿನ ದಿನಮಾನಗಳಲ್ಲಿ ಅನೇಕ ಮಹಿಳೆಯರು ಮತ್ತು ಪುರುಷರು ತಮ್ಮ ಕಣ್ಣುಗಳ ಕೆಳಗೆ ಕಪ್ಪು ವಲಯಗಳಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕಾರಣ ನಿದ್ರೆಯ ಕೊರತೆ, ಒತ್ತಡ, ಮೊಬೈಲ್ಗಳ ಅತಿಯಾದ ಬಳಕೆ, ಅಪೌಷ್ಟಿಕತೆ ಹಾಗೂ ಅನುವಂಶಿಕ ಅಂಶಗಳಾಗಿವೆ. ಕೆಲವು ಜನರು ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಬಳಸಿ ಸಮಸ್ಯೆ ತೊಡೆದು ಹಾಕಲು ಪ್ರಯತ್ನಿಸುತ್ತಾರೆ. ಆದರೂ ಪ್ರಯೋಜನವಾಗುವುದಿಲ್ಲ. ಅಂದಹಾಗೆ, ನಿಮ್ಮ ಮನೆಯಲ್ಲಿಯೇ ಸಿಗುವ ಪದಾರ್ಥಗಳನ್ನು ಬಳಸಿ ಹಚ್ಚುವುದರಿಂದ ಕಣ್ಣಿನ ವಲಯಗಳು ಕಪ್ಪಿನಿಂದ ಮುಕ್ತಿ ಹೊಂದುತ್ತವೆ. ಹೇಗಂತಿರಾ ಇಲ್ಲಿದೆ ಸಂಪೂರ್ಣ ಮಾಹಿತಿ.....
* 1 ಚಮಚ ನೀರು
* 1/2 ಚಮಚ ಕಾಫಿ ಪುಡಿ
* 1/2 ಚಮಚ ಅಲೋವೆರಾ ಜೆಲ್
* 2-3 ಹನಿಗಳು ಕ್ಯಾಸ್ಟರ್ ಆಯಿಲ್
ಮೊದಲು ಒಂದು ಚಿಕ್ಕ ಬಟ್ಟಲನ್ನು ತೆಗೆದುಕೊಳ್ಳಿ ಅದಕ್ಕೆ ನೀರು ಮತ್ತು ಕಾಫಿ ಪುಡಿ ಬೆರಸಿ ಮಿಶ್ರಣ ಮಾಡಿ, ನಂತರ ಅದಕ್ಕೆ ಅಲೊವೆರಾ ಜೆಲ್ ಹಾಗೂ ಕ್ಯಾಸ್ಟಲ್ ಆಯಿಲ್ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನಿಮ್ಮ ಕಣ್ಣುಗಳ ಕಪ್ಪು ವಲಯಗಳ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು, ನಂತರ ತೊಳೆಯಿರಿ. ಪ್ರತಿದಿನ ರಾತ್ರಿ ಮಲಗುವ ಮುಂಚೆ ಇದನ್ನು ಹಚ್ಚುವುದರಿಂದ ಒಂದು ತಿಂಗಳಲ್ಲಿ ಸ್ಪಷ್ಟ ವ್ಯತ್ಯಾಸ ಕಾಣುವಿರಿ.
ಕ್ಯಾಸ್ಟರ್ ಆಯಿಲ್ ನಮ್ಮ ಮುಖಕ್ಕೆ ಉತ್ತಮ ತೇವಾಂಶವನ್ನು ನೀಡುತ್ತದೆ. ಊತವನ್ನು ಕಡಿಮೆ ಮಾಡುತ್ತದೆ. ಮತ್ತು ಕಾಫಿ ಪುಡಿ ರಕ್ತ ಪರಿಚಲನೆಯನ್ನುಸುಧಾರಿಸಲು ಸಹಾಯ ಮಾಡುತ್ತದೆ. ಇನ್ನು ಅಲೊವೆರಾ ಜೆಲ್ ಚರ್ಮವನ್ನು ಮೃದುಗೊಳಿಸುತ್ತದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.