

ಕಂಪ್ಲಿ: ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಇದನ್ನೂ ಓದಿ:ಕೃಷಿಯೇತರ ಚಟುವಟಿಕೆಗೆ ಯೂರಿಯಾ ನೀಡದಿರಿ
ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗುಣಮಟ್ಟ ನಿಯಂತ್ರಣದಡಿ ಕೃಷಿ ಪರಿಕರ ವಿತರಕರ ಸಭೆಯಲ್ಲಿ ಮಾತನಾಡಿದರು. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಬಾರದು. ಕೃಷಿಯೇತರ ಚಟುವಟಿಕೆಗಳಿಗೆ ಯೂರಿಯಾ ಗೊಬ್ಬರ ಹಾಗೂ ರೈತರಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ನೀಡಬಾರದು ಎಂದರು.
ಸಿರಗುಪ್ಪ ಸಹಾಯಕ ಕೃಷಿ ನಿರ್ದೇಶಕ ಸಿ.ಎ.ಮಂಜುನಾಥರೆಡ್ಡಿ ಮಾತನಾಡಿ, ಕೃಷಿ ಪರಿಕರ ವಿತರಕರು ರೈತರಿಗೆ ಗುಣಮಟ್ಟದ ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಮಾರ್ಗಸೂಚಿಯಂತೆ ವಿತರಿಸಬೇಕು. ಪ್ರತಿ ತಿಂಗಳು 5ನೇ ತಾರಿಕಿನೊಳಗೆ ಪರಿಕರಗಳ ದಾಸ್ತಾನು, ಮಾರಾಟದ ಕುರಿತು ಮಾಹಿತಿ ನೀಡಬೇಕು. ನಿಗದಿತ ನಮೂನೆಯ ಬಿಲ್ ವಿತರಿಸಬೇಕು. ಮಾರ್ಗಸೂಚಿ ಉಲ್ಲಂಘಿಸಿದರೆ ವಿತರಕರ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.
ಸಹಾಯಕ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷಾ, ಕೃಷಿ ಅಧಿಕಾರಿಗಳಾದ ಕೆ.ಸೋಮಶೇಖರ, ಜ್ಯೋತಿ, ಕೃಷಿಕ ಸಂಘದ ಅಧ್ಯಕ್ಷ ವಿಪ್ರದ ನಾರಾಯಣಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೌಡ, ತಾಲೂಕು ಅಧ್ಯಕ್ಷ ತಿಮ್ಮಪ್ಪನಾಯಕ, ಪ್ರಮುಖರಾದ ವಿ.ವೀರೇಶ, ಪಿ.ನಾರಾಯಣರೆಡ್ಡಿ, ಮುರಾರಿ ಇತರರಿದ್ದರು.