ಡಿಕೆಶಿ ದೇಶದ ಎರಡನೇ ಶ್ರೀಮಂತ ಶಾಸಕ

blank

ನವದೆಹಲಿ: ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೇಶದ ಎರಡನೇ ಅತಿ ಶ್ರೀಮಂತ ಶಾಸಕ ಎನಿಸಿಕೊಂಡಿದ್ದಾರೆ. ಕನಕಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಆಗಿರುವ ಇವರ ಆಸ್ತಿಯ ಒಟ್ಟು ಮೌಲ್ಯ 1,413 ಕೋಟಿ ರೂ.ಗೂ ಅಧಿಕ. ಮುಂಬೈನ ಘಾಟ್ಕೊಪರ್ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಷಾ ದೇಶದ ಅತ್ಯಂತ ಶ್ರೀಮಂತ ಶಾಸಕರಾಗಿದ್ದು, ಒಟ್ಟು 3,400 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ (ಎಡಿಆರ್) ವರದಿ ಈ ಮಾಹಿತಿಯನ್ನು ನೀಡಿದೆ. ಇತ್ತೀಚಿನ ಚುನಾವಣೆಯಲ್ಲಿ ಆಯ್ಕೆ ಆದ ಶಾಸಕರು ಸಲ್ಲಿಸಿದ್ದ ಅಫಿಡವಿಟ್ ವಿಶ್ಲೇಷಿಸಿ ಈ ಮಾಹಿತಿ ಪ್ರಕಟಿಸಲಾಗಿದೆ. ದೇಶದ 28 ರಾಜ್ಯಗಳ ವಿಧಾನಸಭಾ ಕ್ಷೇತ್ರ, 3 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 4,092 ಶಾಸಕರ ಮಾಹಿತಿ ವಿಶ್ಲೇಷಿಸಿ ಈ ಅಂಕಿ- ಅಂಶ ಹೊರಬಿದ್ದಿದೆ. ಏಳು ಖಾಲಿ ಕ್ಷೇತ್ರ ಹಾಗೂ ಓದಲು ಸಾಧ್ಯವಾಗದ ಅಫಿಡವಿಟ್ ಹಿನ್ನೆಲೆಯಲ್ಲಿ 24 ಕ್ಷೇತ್ರಗಳ ಮಾಹಿತಿ ಇದರಲ್ಲಿ ಒಳಗೊಂಡಿಲ್ಲ. ಉಳಿದಂತೆ ಕರ್ನಾಟಕದ ಪಕ್ಷೇತರ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ (1,267 ಕೋ.ರೂ.), ಕರ್ನಾಟಕ ಕಾಂಗ್ರೆಸ್​ನ ಪ್ರಿಯಕೃಷ್ಣ (1,156 ಕೋಟಿ ರೂ.), ಆಂಧ್ರ ಸಿಎಂ ಎನ್.ಚಂದ್ರಬಾಬು ನಾಯ್ಡು (931 ಕೋಟಿ ರೂ.), ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ (757 ಕೋಟಿ ರೂ.) ಶ್ರೀಮಂತ ಶಾಸಕರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ.

ಕರ್ನಾಟಕಕ್ಕೇ ಅಗ್ರಸ್ಥಾನ

ಶಾಸಕರ ಶ್ರೀಮಂತಿಕೆಯಲ್ಲೂ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿನ 223 ಶಾಸಕರ ಒಟ್ಟು ಆಸ್ತಿ ಮೌಲ್ಯ 14,179 ಕೋಟಿ ರೂಪಾಯಿ. ಉಳಿದಂತೆ ಮಹಾರಾಷ್ಟ್ರ (286-12,424), ಆಂಧ್ರಪ್ರದೇಶ (174-11,323) ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ತ್ರಿಪುರ(60-90), ಮಣಿಪುರ(59-222), ಪುದುಚೇರಿ(30-297) ಕೊನೆಯ ಮೂರು ಸ್ಥಾನಗಳಲ್ಲಿವೆ. ಶತಕೋಟ್ಯಧಿಪತಿ ಶಾಸಕರಲ್ಲೂ ಕರ್ನಾಟಕ (31) ಮೊದಲ ಸ್ಥಾನದಲ್ಲಿದೆ. ಆಂಧ್ರಪ್ರದೇಶ (27), ಮಹಾರಾಷ್ಟ್ರ(18) 2 ಮತ್ತು 3ನೇ ಸ್ಥಾನದಲ್ಲಿವೆ. ಶಾಸಕರ ಗರಿಷ್ಠ ಸರಾಸರಿ ಆಸ್ತಿಯಲ್ಲಿ ಕರ್ನಾಟಕ 63.58 ಕೋಟಿ ರೂ. ಮೂಲಕ ಎರಡನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ (65.07 ಕೋ.ರೂ.), ಮಹಾರಾಷ್ಟ್ರ (43.44 ಕೋ.ರೂ.) ಮೊದಲ ಮತ್ತು ಮೂರನೇ ಸ್ಥಾನದಲ್ಲಿವೆ.

ದೇಶದ ಅತಿ ಬಡ ಶಾಸಕ

ಪಶ್ಚಿಮ ಬಂಗಾಳದ ಇಂಡಸ್ ಕ್ಷೇತ್ರದ ಬಿಜೆಪಿ ಶಾಸಕ ನಿರ್ಮಲ್ ಕುಮಾರ್ ಧಾರಾ ದೇಶದಲ್ಲೇ ಅತ್ಯಂತ ಬಡ ಶಾಸಕ ಎನಿಸಿಕೊಂಡಿದ್ದಾರೆ. ಇವರ ಆಸ್ತಿಯ ಮೌಲ್ಯ ಬರೀ 1,700 ರೂಪಾಯಿ.

Share This Article

ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ.…

ಬೇಸಿಗೆಯಲ್ಲಿ ತೆಂಗಿನಕಾಯಿ ನೀರು ಅಥವಾ ಕಬ್ಬಿನ ಜ್ಯೂಸ್​ ಯಾವುದು ಉತ್ತಮ! | Better In Summer

Better In Summer ; ಈ ಬಿರು ಬೇಸಿಗೆಯಲ್ಲಿ ಸಾಮಾನ್ಯವಾಗಿ ತಂಪಾದ ಅಥವಾ ಅಹ್ಲಾದಕಾರ ಆಹಾರ…

ಈ ಹಣ್ಣುಗಳನ್ನು ತಿಂದ ತಕ್ಷಣ ನೀರು ಕುಡಿಯಬೇಡಿ! ಅಕಸ್ಮಾತ್​ ನೀರು ಕುಡಿದ್ರೆ ಏನಾಗುತ್ತದೆ ಗೊತ್ತಾ? Fruits

Fruits: ಕೆಲವು ಸಂದರ್ಭಗಳಲ್ಲಿ, ಕೆಲವು ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದರಿಂದ ಅತಿಸಾರದ ಅಪಾಯ ಹೆಚ್ಚಾಗುತ್ತದೆ.…