ಪ್ರಯಾಗ್​​ರಾಜ್​ಗೆ ಹೋಗಿ ಕಷ್ಟ ಪಡುವ ಬದಲು ಇಲ್ಲಿಯೇ ಪುಣ್ಯಸ್ನಾನ ಮಾಡಿ: DCM DK Shivakumar

DK Shivakumar
Published on

ಮೈಸೂರು: ಪ್ರಯತ್ನಕ್ಕಿಂತ ಪ್ರರ್ಥಾನೆಯ ಫಲ ಜಾಸ್ತಿ ಕೊಡುತ್ತದೆ. ಅದನ್ನು ನಾನು ನಂಬಿದ್ದೇನೆ. ಹೀಗಾಗಿ ಕುಂಭಮೇಳದಲ್ಲಿ ನಾನು ಸ್ನಾನ ಮಾಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ. ನಾನು ಡಿಸಿಎಂ ಆಗಿ ಹೇಳುತ್ತಿದ್ದೇನೆ. ಪೊಲೀಸರದ್ದು ಯಾವ ತಪ್ಪು ಇಲ್ಲ. ಪೊಲೀಸರು ಸರಿಯಾಗಿಯೇ ಕೆಲಸ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಿದ್ಧಾರೆ. ಪೊಲೀಸರು ಗಾಯಗೊಂಡರು ಕೂಡ ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ. ನಾನು ನಮ್ಮ ಪೊಲೀಸರ ಪರವಾಗಿಯೇ ಇದ್ದೇನೆ.  ಸಚಿವ ರಾಜಣ್ಣ ಅವರು ಈ ವಿಚಾರದಲ್ಲಿ ಹೇಳಿರುವ ಮಾತಿಗೆ ಸಿಎಂ ಉತ್ತರ ಕೊಡುತ್ತಾರೆ‌. ಸಿಎಂಗೆ ಸದ್ಯಕ್ಕೆ ಮಾತನಾಡಲು ಆಗುತ್ತಿಲ್ಲ. 8 ರಿಂದ 10ದಲ್ಲಿ ಅವರೇ ಮಾತನಾಡುತ್ತಾರೆ. ನಾನು ಮೈಸೂರಿನ ನೆಲದಲ್ಲಿ ನಿಂತು ಹೇಳುತ್ತಿದ್ದೇನೆ. ನಮ್ಮ ಪೊಲೀಸರದ್ದು ಯಾವ ತಪ್ಪು ಇಲ್ಲ ಎಂಚು ಸಚಿವ ರಾಜಣ್ಣಗೆ ತಿರುಗೇಟು ನೀಡಿದರು.

ಕುಂಭಮೇಳಕ್ಕೆ ಭೇಟಿ ನೀಡಿದ ಕುರಿತು ಮಾತನಾಡಿ, ಪ್ರಯತ್ನಕ್ಕಿಂತ ಪ್ರರ್ಥಾನೆಯ ಫಲ ಜಾಸ್ತಿ ಕೊಡುತ್ತದೆ ಎಂಬುದನ್ನು ನಾನು ನಂಬಿದ್ದೇನೆ. ಹೀಗಾಗಿ ಕುಂಭಮೇಳದಲ್ಲಿ ನಾನು ಸ್ನಾನ ಮಾಡಿದ್ದೇನೆ. ಪ್ರಯಾಗ್​ರಾಜ್ ಹಾಗೂ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದು, ನನಗೆ ಅಷ್ಟಾಗಿ ವ್ಯತ್ಯಾಸ ಅನಿಸಲಿಲ್ಲ. ತ್ರಿವೇಣಿ ಸಂಗಮದ ನೀರು ಪರಿಶುದ್ಧ ಹಾಗೂ ಪವಿತ್ರವಾಗಿದೆ. ಪ್ರಯಾಗ್​​ರಾಜ್​ಗೆ ಹೋಗಿ ಕಷ್ಟ ಪಡುವ ಬದಲು ಇಲ್ಲಿಯೇ ಬಂದು ಪುಣ್ಯ ಸ್ನಾನ ಮಾಡಬಹುದದಾಗಿದೆ.

ಮೆಟ್ರೋ ದರ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ಎಲ್ಲದರಲ್ಲೂ ರಾಜಕಾರಣ ಮಾಡುತ್ತದೆ. ಮೆಟ್ರೋ ದರ ಹೆಚ್ಚಳ ನಮಗೆ ಸಂಬಂಧಪಟ್ಟಿದ್ದಲ್ಲ. ಅದು ಕೇಂದ್ರದ ವಿಚಾರ. ಅದಕ್ಕಾಗಿಯೇ ನೇಮಕವಾಗಿರುವ ಜಡ್ಜ್ ಅದನ್ನ ನಿರ್ಧಾರ ಮಾಡುತ್ತಾರೆ‌. ದರ ಕಡಿಮೆ ಮಾಡುವುದು ನಮ್ಮ ಕೈಯಲ್ಲಿ ಇಲ್ಲ. ದರ ಹೆಚ್ಚಳ ಬದಲಾವಣೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಉದಯಗಿರಿ ಪೊಲೀಸ್ ಠಾಣೆ ಎದುರು ಗಲಭೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಲ್ಲು ಎಸೆದಿರುವವರು ಎಲ್ಲ 14, 15ನೇ ವಯಸ್ಸಿನ ಮುಸ್ಲಿಂ ಹುಡುಗರು. ಧಾರ್ಮಿಕ ಮುಖಂಡರ ಮಾತನ್ನೂ ಅವರ ಕೇಳಿಲ್ಲ. ಪಾಪ ಹಿರಿಯರು, ಮುಖಂಡರೂ ಸೇರಿ ಗಲಭೆ ಕಂಟ್ರೋಲ್ ಮಾಡಿದ್ದಾರೆ. ಪೊಲೀಸರಿಗಾದರೆ ಪ್ರೊಟೆಕ್ಷನ್ ಇತ್ತು. ಪಾಪ ಅಲ್ಲಿದ್ದ ಸಾರ್ವಜನಿಕರಿಗೆ ಅದೂ ಇರಲಿಲ್ಲ. ಗಲಭೆ ಮಾಡಿದವರ ಪತ್ತೆ ಮಾಡುವ ಕೆಲಸವನ್ನ ಪೊಲೀಸರು ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ (DK Shivkumar) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net