More

    ಸಿಎಂ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್​ ಬಿಗಿಪಟ್ಟು: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಡಿಕೆಶಿ ಅಸಮಾಧಾನ

    ಬೆಂಗಳೂರು: ಕರ್ನಾಟಕ ಚುನಾವಣಾ ಫಲಿತಾಂಶ ಬಂದು 4 ದಿನವಾದರೂ ಇನ್ನೂ ಮುಖ್ಯಮಂತ್ರಿ ಯಾರು ಎಂಬುದು ಆಯ್ಕೆಯಾಗಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​ ನಡುವೆ ಸಿಎಂ ಸ್ಥಾನಕ್ಕೆ ಹಗ್ಗಜಗ್ಗಾಟ ಮುಂದುವರಿದಿದೆ. ಇದರ ನಡುವೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿರುವುದನ್ನು ಗಮನಿಸಿದ ಡಿಕೆಶಿ ಅಸಮಾಧಾನಗೊಂಡಿದ್ದಾರೆ. ಇದರ ಬೆನ್ನಲ್ಲೇ ಇನ್ನೂ ಸಿಎಂ ಆಯ್ಕೆ ಆಗಿಲ್ಲ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.

    ಸಿಎಂ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್​ ಬಿಗಿಪಟ್ಟು ಹಿಡಿದಿದ್ದಾರೆ. ಸದ್ಯ ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿರುವ ಡಿಕೆಶಿ ಸಿಎಂ ಸ್ಥಾನ ಬೇಕೇ ಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಹೋಟೆಲ್​ನಲ್ಲಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಡಿಕೆಶಿ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದರೆ, ಡಿಕೆಶಿ ತೀವ್ರ ಅಸಮಾಧಾನಗೊಂಡಿರುವುದಾಗಿ ತಿಳಿದುಬಂದಿದೆ.

    ಇದನ್ನೂ ಓದಿ: ಸಿಎಂ ಆಯ್ಕೆಯಲ್ಲಿ ಬಿಗ್​​ ಟ್ವಿಸ್ಟ್​; ಮುಂದಿನ ಮುಖ್ಯಮಂತ್ರಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ ಎಂದ ಸುರ್ಜೇವಾಲ

    ಇನ್ನೊಂದು ದಾಳ ಉರುಳಿಸಿರುವ ಡಿಕೆಶಿ, ನನಗೆ ಸಿಎಂ ನೀಡದಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿ ಎಂದು ಒತ್ತಾಯ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ 2 ವರ್ಷ ಮತ್ತು ಉಳಿದ ಮೂರು ವರ್ಷ ನಿಮಗೆ ಸಿಎಂ ಸ್ಥಾನ ಎಂಬ ರಾಹುಲ್​ ಗಾಂಧಿ ಸೂತ್ರಕ್ಕೂ ಡಿಕೆಶಿ ಒಪ್ಪಿಗೆ ಸೂಚಿಸಿಲ್ಲ. ಸಿಎಂ ಸ್ಥಾನ ಬಿಟ್ಟು ಯಾವುದೇ ಕಾರಣಕ್ಕೂ ನನಗೆ ಬೇರೆ ಹುದ್ದೆ ಬೇಡವೇ ಬೇಡ ಎಂದು ಡಿಕೆಶಿ ಬಿಗಿಪಟ್ಟು ಹಿಡಿದಿದ್ದಾರೆ.

    ಯಾವುದೇ ಷರತ್ತುಗಳಿಗೂ ಮಣಿಯದ ಡಿಕೆಶಿ , ಸಿದ್ದರಾಮಯ್ಯ ಬೆಂಬಲಿಗರ ಮಾಧ್ಯಮ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವ ಆಧಾರದಲ್ಲಿ ನಾಳೆ ಪ್ರಮಾಣ ವಚನ ಅಂತ ಹೇಳ್ತಿರಾ? ರಾಜ್ಯಪಾಲರ ಲಭ್ಯತೆ ಇದೆಯೋ? ಇಲ್ಲವೋ? ಎಂಬ ಖಚಿತತೆ ಇಲ್ಲ. ಆದರೂ ನಾಳೆಯೇ ಪ್ರಮಾಣ ವಚನ ಎಂದು ಹೇಗೆ ಹೇಳುತ್ತೀರಿ. ಇನ್ನೂ ಅಧಿಕೃತ ಘೋಷಣೆಯೇ ಆಗಿಲ್ಲ. ಹೀಗಿದ್ದಾಗ ಅವರೆಲ್ಲ ಹೇಗೆ ಮಾಧ್ಯಮಕ್ಕೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಬಲ್ಲರೂ ಎಂದು ಡಿಕೆಶಿ ತೀವ್ರ ಅಸಮಾಧಾನ ಹೊರಹಾಕಿದ್ದು, ಇದರ ಬೆನ್ನಲ್ಲೇ ಇನ್ನೂ ಸಿಎಂ ಆಯ್ಕೆ ಆಗಿಲ್ಲ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.

    ಸಿಎಂ ಆಯ್ಕೆಯಲ್ಲಿ ಬಿಗ್​​ ಟ್ವಿಸ್ಟ್​; ಮುಂದಿನ ಮುಖ್ಯಮಂತ್ರಿ ಆಯ್ಕೆ ಇನ್ನೂ ಅಂತಿಮವಾಗಿಲ್ಲ ಎಂದ ಸುರ್ಜೇವಾಲ

    ಸಿದ್ದರಾಮಯ್ಯಗೆ ಸಿಎಂ ಸ್ಥಾನ ಖಚಿತ; ಡಿ.ಕೆ ಶಿವಕುಮಾರ್ ತವರು ಜಿಲ್ಲೆಯಲ್ಲಿ ಹೈ ಅಲರ್ಟ್!

    ಸಿದ್ದರಾಮನ ಹುಂಡಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ; ಭಾವಚಿತ್ರಕ್ಕೆ ಕ್ಷೀರಾಭಿಷೇಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts