More

    ನಾನು ಮಗು ಅಲ್ಲ, ಯಾವುದೇ ಬಲೆಗೆ ಬೀಳುವ ಮಾತಿಲ್ಲ: ಡಿ.ಕೆ. ಶಿವಕುಮಾರ್​

    ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.

    ಇನ್ನು ಭಾನುವಾರ ನಡೆದ ಸಿಎಲ್​ಪಿ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸಿಎಂ ಆಯ್ಕೆ ಕಗ್ಗಂಟು ವರಿಷ್ಠರ ಬಳಿ ಹೋಗಿದ್ದು ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

    ಇನ್ನು ಹೈಕಮಾಂಡ್ ಬುಲಾವ್​ ಬೆನ್ನಲ್ಲೇ ದೆಹಲಿಗೆ ತೆರಳದೆ ಸೆಡ್ಡು ಹೊಡೆದು ನಿಂತಿರುವ ಡಿಕೆಶಿ ತಾವು ಸಿಎಂ ಘಾದಿಗೇ ಏರಬೇಕೆಂಬ ಹಂಬಲದಲ್ಲಿ್ದು ಯಾವುದೇ ಪಟ್ಟನ್ನು ಸಡಿಲಿಸುವ ಮಾತಿಲ್ಲ ಎಂದಿದ್ದಾರೆ.

    ಮಾತನ್ನು ಉಳಿಸಿಕೊಂಡಿದ್ದೇನೆ

    ಇನ್ನು ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾನು ಕಾಂಗ್ರೆಸ್​ ವರಿಷ್ಠರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಅದರಂತೆ ಅವರು ಸಹ ನಮ್ಮ ಮೇಲೆ ವಿಶ್ವಾಸ ಇಡಬೇಕು ಎಂದು ಹೇಳಿದ್ಧಾರೆ.

    ಸೋನಿಯಾ ಗಾಂಧಿ ಅವರು ನನಗೆ ಕೆಪಿಸಿಸಿ ಅಧ್ಯಕ್ಷನ ಸ್ಥಾನ ನೀಡುವ ವೇಳೆ ನನಗೆ ನಂಬಿಕೆ ನೀವು ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸುತ್ತೀರಿ ಎಂದು ಅದರಂತೆ ನಾನು ಅವರ ಮಾತನ್ನು ಉಳಿಸಿಕೊಂಡಿದ್ದೇನೆ.

    DK Siddu

    ಪಕ್ಷದ ಹೈಕಮಾಂಡ್​ಗೆ ಈ ಬಗ್ಗೆ ಕೃತಜ್ಞತೆ ಹಾಗು ಗೆಲುವಿನ ಹಿಂದೆ ಇರುವ ಪ್ರಮುಖ ವ್ಯಕ್ತಿ ಯಾರು ಇದ್ದಾರೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಸಿಎಂ ಆಗುವ ಆಸೆಯನ್ನು ಹೊರಹಾಕಿದ್ದಾರೆ.

    ನಾನು ಮಗು ಅಲ್ಲ

    ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ದೊರೆಯದಿದ್ದರೆ ಬಂಡಾಯ ಏಳುವ ವಿಚಾರವನ್ನು ತಳ್ಳಿ ಹಾಕಿದ ಡಿಕೆಶಿ ನಾನು ಬ್ಲ್ಯಾಕ್​ಮೇಲ್​​ ಮಾಡಿ ಅವಕಾಶ ಗಿಟ್ಟಿಸಿಕೊಳ್ಳುವವನಲ್ಲ. ನನಗೆ ನನದೇ ಆದ ಅಸ್ತಿತ್ವವವಿದೆ ನಾನು ಇನ್ನು ಮಗು ಅಲ್ಲ ಯಾವುದೇ ಬಲೆಗೂ ಬೀಳುವ ಮಾತಿಲ್ಲ ಎಂದು ಹೇಳಿದ್ದಾರೆ.

    ಕಳೆದ ಐದು ವರ್ಷಗಳಲ್ಲಿ ಏನಾಗಿದೆ ಎಂಬುದನ್ನು ನಾನು ಹೇಳುವುದಿಲ್ಲ. ಒಬ್ಬ ವ್ಯಕ್ತಿ ಪಕ್ಷಕ್ಕಾಗಿ ದುಡಿದ್ದು ಬಹುಮತವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ಧಾನೆ. ನಮ್ಮ ಪಕ್ಷದ ಶಾಸಕರು ಹೊರಹೋದ ಸಮಯದಲ್ಲಿ ನಾನು ದೃತಿಗಡೆದೆ ಸಮರ್ಥವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದೇನೆ.

    ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ ವಿಷಯವನ್ನು ಅವರಿಗೆ ಬಿಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

    Dk Shivakumar

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts